ನಾಪೋಕ್ಲು, ಏ. ೨೯: ಕಕ್ಕಬ್ಬೆ ಗ್ರಾಮ ಪಂಚಾಯಿತಿಯ ಕಚೇರಿಯ ಮೇಲ್ಭಾಗದಲ್ಲಿ ನೂತನವಾಗಿ ರೂ. ೧.೨೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸಭಾಂಗಣ ವನ್ನು ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ನ ಉದ್ಘಾಟಿ ಸಿದರು. ನಂತರ ಮಾತನಾಡಿದ ಅವರು, ಗ್ರಾ.ಪಂ. ಸಭೆ ನಡೆಸಲು ಅನಾನುಕೂಲ ಇತ್ತು. ನೂತನವಾಗಿ ಸಭಾಂಗಣವನ್ನು ನಿರ್ಮಿಸಲಾಗಿದೆ ಎಂದರು. ಇದ ರೊಂದಿಗೆ ಡಿಜಿಟಲ್ ಗ್ರಂಥಾಲಯವನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಕಾಮಗಾರಿಯು ಪ್ರಗತಿಯಲ್ಲಿದೆ ಎಂದರು. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ರಂಸೀನ, ಸದಸ್ಯರುಗಳು ಮತ್ತು ಪಿ.ಡಿ.ಓ. ಅಶೋಕ ಇದ್ದರು.