ರಾಜ್ಯದಲ್ಲಿ ಕೊರೊನಾ ಸ್ಫೋಟ: ದಾಖಲೆಯ ೨೭೦ ಮಂದಿ ಬಲಿ
ಬೆಂಗಳೂರು, ಏ. ೨೯: ರಾಜ್ಯದಲ್ಲಿ ಕೊರೊನಾ ಮರಣ ಮೃದಂಗ ಮುಂದುವರೆದಿದ್ದು ಇಂದು ದಾಖಲೆಯ ೨೭೦ ಮಂದಿ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ೧೫,೩೦೬ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಯಲ್ಲಿ ರಾಜ್ಯದಲ್ಲಿ ಒಂದೇ ದಿನ ಬರೋಬ್ಬರಿ ೩೫,೦೨೪ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಸೋಂಕಿತರ ಸಂಖ್ಯೆ ೧೪,೭೪,೮೪೬ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು ೧೯,೬೩೭ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ ೭,೨೯,೯೮೪ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸೋಂಕಿಗೆ ೧೪೩ ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಇಂದು ೧೪,೧೪೨ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೧೧,೧೦,೦೨೫ಕ್ಕೆ ಏರಿಕೆಯಾಗಿದೆ. ೩,೪೯,೪೯೬ ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ ೨,೪೩೧ ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೆರಂ ನಂತರ ರಾಜ್ಯಗಳಿಗೆ ಕೋವಿಡ್ ಲಸಿಕೆ ಬೆಲೆ ಕಡಿತ
ನವದೆಹಲಿ, ಏ. ೨೯: ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ನಂತರ ಭಾರತ್ ಬಯೋಟೆಕ್ ಸಹ ರಾಜ್ಯಗಳಿಗೆ ತನ್ನ ಕೋವಿಡ್-೧೯ ಲಸಿಕೆ 'ಕೋವಾಕ್ಸಿನ್' ಬೆಲೆಯನ್ನು ಕಡಿತಗೊಳಿಸಿರುವುದಾಗಿ ಗುರುವಾರ ಪ್ರಕಟಿಸಿದೆ. ಈ ಹಿಂದೆ ಭಾರತ್ ಬಯೋಟೆಕ್ ರಾಜ್ಯಗಳಿಗೆ ಲಸಿಕೆಯ ಬೆಲೆ ಪ್ರತಿ ಡೋಸ್‌ಗೆ ೬೦೦ ರೂಪಾಯಿ ನಿಗದಿಪಡಿಸಿತ್ತು. ಈಗ ಅದನ್ನು ೪೦೦ ರೂಪಾಯಿಗೆ ಮಾರಾಟ ಮಾಡಲು ಯೋಜಿಸಿದೆ. ಕೋವಾಕ್ಸಿನ್ ಅನ್ನು ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್‌ಗೆ ೧೫೦ ರೂಪಾಯಿಗೆ ಮಾರಾಟ ಮಾಡಿದ್ದರಿಂದ ಇದು ಅದರ ಬೆಲೆ ನೀತಿಯ ಬಗ್ಗೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈಗ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿನ ಅಗಾಧ ಸವಾಲುಗಳನ್ನು ಗುರುತಿಸಿ, ನಾವು ಕೋವಾಕ್ಸಿನ್ ಅನ್ನು ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್ ರೂ. ೪೦೦ ಬೆಲೆಗೆ ಲಭ್ಯಗೊಳಿಸಿದ್ದೇವೆ ಎಂದು ಭಾರತ್ ಬಯೋಟೆಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಸೆರಂ ಇನ್‌ಸ್ಟಿಟ್ಯೂಟ್ ಈ ಹಿಂದೆ ತಾನು ತಯಾರಿಸುವ ಕೋವಿಶೀಲ್ಡ್ ಲಸಿಕೆಯ ಪ್ರತಿ ಡೋಸ್‌ಗೆ ೪೦೦ ಬೆಲೆ ನಿಗದಿಪಡಿಸಿತ್ತು. ಆದರೆ ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಮತ್ತು ಕೇಂದ್ರ ಸರ್ಕಾರ ಸಹ ಬೆಲೆ ಕಡಿತಗೊಳಿಸುವಂತೆ ಕೇಳಿಕೊಂಡ ಹಿನ್ನೆಲೆ ನಿನ್ನೆ ರಾಜ್ಯಗಳಿಗೆ ಪ್ರತಿ ಡೋಸ್‌ಗೆ ೩೦೦ ರೂ.ಗೆ ಮಾರಾಟ ಮಾಡುವುದಾಗಿ ಪ್ರಕಟಿಸಿತ್ತು.
ಭಾರತಕ್ಕೆ ೫ ಲಕ್ಷ ಐಸಿಯು ಹಾಸಿಗೆಗಳು ಬೇಕಾಗುತ್ತವೆ
ಬೆಂಗಳೂರು, ಏ. ೨೯: ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂಬ ಮುನ್ಸೂಚನೆ ನೀಡಿದ ಖ್ಯಾತ ಶಸ್ತçಚಿಕಿತ್ಸಕ ಡಾ. ದೇವಿ ಪ್ರಸಾದ್ ಶೆಟ್ಟಿ ಅವರು ಮುಂದಿನ ಕೆಲವು ವಾರಗಳಲ್ಲಿ ಭಾರತಕ್ಕೆ ಹೆಚ್ಚುವರಿ ೫ ಲಕ್ಷ ಐಸಿಯು ಹಾಸಿಗೆಗಳು, ೨ ಲಕ್ಷ ದಾದಿಯರು ಮತ್ತು ೧.೫ ಲಕ್ಷ ವೈದ್ಯರ ಅಗತ್ಯವಿದೆ ಎಂದು ಹೇಳಿದ್ದಾರೆ. ಭೀಕರ ಪರಿಸ್ಥಿತಿಯನ್ನು ಎದುರಿಸಲು ಅಮೂಲಾಗ್ರ ಪರಿಹಾರಗಳನ್ನು ಸಹ ಸೂಚಿಸಿದ್ದಾರೆ. ಪ್ರಸ್ತುತ, ಭಾರತದಲ್ಲಿ ಕೇವಲ ೭೫,೦೦೦ ರಿಂದ ೯೦,೦೦೦ ಐಸಿಯು ಹಾಸಿಗೆಗಳು ಮಾತ್ರ ಇವೆ. ಅದಾಗಲೇ ಬಹುತೇಕ ಎಲ್ಲಾ ಬೆಡ್‌ಗಳು ಫುಲ್ ಆಗಿವೆ. ಎರಡನೇ ಅಲೆ ಮಧ್ಯದ ಸ್ಥಿತಿಯಲ್ಲಿದ್ದು ಅದು ಉತ್ತುಂಗಕ್ಕೇರಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ ಎಂದರು. ಪ್ರಸ್ತುತ ಭಾರತದಲ್ಲಿ ದಿನಕ್ಕೆ ಸುಮಾರು ೩.೫ ಲಕ್ಷ ಪ್ರಕರಣಗಳು ವರದಿಯಾಗುತ್ತಿವೆ. ಕೆಲವು ತಜ್ಞರು ಹೇಳುವಂತೆ ಈ ಸಂಖ್ಯೆ ಪ್ರತಿದಿನ ಗರಿಷ್ಠ ೫ ಲಕ್ಷಕ್ಕೆ ಏರಬಹುದು. ಐಸಿಯುಗಳಲ್ಲಿನ ರೋಗಿಗಳು ಆಮ್ಲಜನಕದ ಕೊರತೆಯಿಂದಾಗಿ ಸಾಯುತ್ತಿದ್ದಾರೆ. ಇದು ಒಂದು ಕಡೆಯಾದರೆ ಮತ್ತೊಂದೆಡೆ ರೋಗಿಗಳನ್ನು ನೋಡಿಕೊಳ್ಳಲು ದಾದಿಯರು ಮತ್ತು ವೈದ್ಯರು ನಿರ್ದಿಷ್ಟ ಸಂಖ್ಯೆಯಲ್ಲಿಲ್ಲ ಎಂದರು. ನಾರಾಯಣ ಹೆಲ್ತ್ನ ಅಧ್ಯಕ್ಷ ಮತ್ತು ಸಂಸ್ಥಾಪಕ ಡಾ. ಶೆಟ್ಟಿ ಅವರು ಪುಣೆಯ ಸಿಂಬಯೋಸಿಸ್ ಗೋಲ್ಡನ್ ಜುಬಿಲಿ ಉಪನ್ಯಾಸ ಸರಣಿಯಲ್ಲಿ ತಮ್ಮ ಆನ್‌ಲೈನ್ ಭಾಷಣದಲ್ಲಿ ಈ ಹೇಳಿಕೆ ನೀಡಿದ್ದಾರೆ. ಕೋವಿಡ್ ಪಾಸಿಟಿವ್ ಬಂದ ಪ್ರತಿ ರೋಗಿಯ ಮನೆಯಲ್ಲಿ ಕನಿಷ್ಟ ೫ ರಿಂದ ೧೦ ಜನರಿರುತ್ತಾರೆ. ಆದರೆ ಅವರು ಪರೀಕ್ಷೆಗೆ ಒಳಗಾಗುವುದಿಲ್ಲ. ಇದನ್ನು ಲೆಕ್ಕಾಚಾರ ಮಾಡಿದರೆ ಭಾರತದಲ್ಲಿ ಈಗಲೂ ಪ್ರತಿದಿನ ೧೫ ರಿಂದ ೨೦ ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದರು. ಸೋಂಕಿಗೆ ಒಳಗಾದವರ ಪೈಕಿ ಹಲವರಿಗೆ ಐಸಿಯು ಹಾಸಿಗೆಯ ಅಗತ್ಯವಿರುತ್ತದೆ. ಸರಾಸರಿ, ಐಸಿಯುನಲ್ಲಿ ರೋಗಿಯು ಕನಿಷ್ಟ ೧೦ ದಿನಗಳ ಕಾಲ ಚಿಕಿತ್ಸೆ ಪಡೆಯಬೇಕಾಗುತ್ತದೆ. ಸನ್ನಿವೇಶ ಏನು ಎಂದು ನೀವು ಊಹಿಸಬಹುದು. ನಾವು ಏನು ಮಾಡಬೇಕೆಂದು ತಿಳಿಯಿರಿ? ಮುಂದಿನ ಕೆಲವು ವಾರಗಳಲ್ಲಿ ನಾವು ಕನಿಷ್ಟ ಐದು ಲಕ್ಷ ಹೆಚ್ಚುವರಿ ಐಸಿಯು ಹಾಸಿಗೆಗಳನ್ನು ಸೃಷ್ಟಿಸಬೇಕಾಗಿದೆ ಎಂದು ಅವರು ಹೇಳಿದರು. ಐಸಿಯುಗಳಿದ್ದರೆ ಸಾಲದು. ರೋಗಿಗಳಿಗೆ ಚಿಕಿತ್ಸೆ ನೀಡಲು ದಾದಿಯರು, ವೈದ್ಯರು ಮತ್ತು ಅರೆವೈದ್ಯರು ಇರಬೇಕಾಗುತ್ತದೆ. ಐಸಿಯುಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆ ಹೆಚ್ಚಾಗಿ ದಾದಿಯರ ಮೇಲೆ ಅವಲಂಬಿತವಾಗಿರುತ್ತದೆ. ಸಾಂಕ್ರಾಮಿಕ ರೋಗ ಪ್ರಾರಂಭವಾಗುವ ಮೊದಲೇ ಸರ್ಕಾರಿ ಆಸ್ಪತ್ರೆಗಳು ದೇಶಾದ್ಯಂತ ಶೇ. ೭೮ ರಷ್ಟು ವೈದ್ಯಕೀಯ ತಜ್ಞರ ಕೊರತೆ ಇತ್ತು. ಈಗ, ಮುಂದಿನ ಕೆಲವು ವಾರಗಳಲ್ಲಿ ನಾವು ಕನಿಷ್ಟ ಎರಡು ಲಕ್ಷ ದಾದಿಯರು ಮತ್ತು ಕನಿಷ್ಟ ಒಂದೂವರೆ ಲಕ್ಷ ವೈದ್ಯರನ್ನು ಉತ್ಪಾದಿಸಬೇಕಾಗಿದೆ ಎಂದರು. ಮುಂದಿನ ಒಂದು ವರ್ಷದವರೆಗೆ ಕೋವಿಡ್ ಅನ್ನು ನಿರ್ವಹಿಸಲು ಇವರೆಲ್ಲಾ ಮೀಸಲಾಗಿರಬೇಕು. ಏಕೆಂದರೆ ಪ್ರಸ್ತುತ ಸಾಂಕ್ರಾಮಿಕ ರೋಗವು ಸುಮಾರು ೪ ರಿಂದ ೫ ತಿಂಗಳು ಇರಲಿದ್ದು, ತದನಂತರ ನಾವು ಮೂರನೇ ಅಲೆಗೂ ಸಿದ್ಧರಾಗಿರಬೇಕು ಎಂದು ದೇವಿ ಶೆಟ್ಟಿ ಹೇಳಿದ್ದಾರೆ.
ರೈತರ ಸಮಸ್ಯೆ ಪರಿಹರಿಸಲು ವಾರಕ್ಕೊಂದು ಸಭೆ ನಡೆಸುವಂತೆ ಸೂಚನೆ
ಬೆಂಗಳೂರು, ಏ. ೨೯: ರೈತರ ಸಮಸ್ಯೆ ಪರಿಹರಿಸಲು ವಾರಕ್ಕೊಂದು ಸಭೆ ನಡೆಸುವಂತೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ವಾರದಲ್ಲಿ ಕನಿಷ್ಟ ಒಂದು ದಿನ ಸಭೆ ನಡೆಸುವಂತೆ ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್ ಸೂಚಿಸಿ ಆದೇಶಿಸಿದ್ದಾರೆ. ಕೋವಿಡ್-೧೯ರ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹದಿನಾಲ್ಕು ದಿನಗಳ ಕಾಲ ಲಾಕ್‌ಡೌನ್ ಹೇರಿದ್ದು, ಈ ಸಂದರ್ಭದಲ್ಲಿ ರಾಜ್ಯದ ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಅಗ್ರಿವಾರ್ ರೂಮ್ ಅನ್ನು ಸೇತುವಂತೆ ಕಾರ್ಯನಿರ್ವಹಿಸಲು ಆರಂಭಿಸಲಾಗಿದೆ. ಸರ್ಕಾರದ ಲಾಕ್‌ಡೌನ್ ಮಾರ್ಗಸೂಚಿಯಲ್ಲಿ ಕೃಷಿ ಹಾಗೂ ಕೃಷಿ ಸಂಬAಧಿತ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಕೃಷಿ ಹಾಗೂ ಕೃಷಿ ಸಂಬAಧಿತ ಕ್ಷೇತ್ರಗಳ ಚಟುವಟಿಕೆಗಳು, ಸಂಬAಧಿತ ಮಳಿಗೆಗಳು ಮತ್ತು ಗೋದಾಮುಗಳು ಸೇರಿದಂತೆ ಬಾಡಿಗೆ ಆದರಿತ ಸೇವಾ ಕೇಂದ್ರಗಳು, ಯಂತ್ರೋಪಕರಣಗಳಿಗೆ ವಿನಾಯಿತಿ ನೀಡಲಾಗಿದೆ. ಕೃಷಿ ಸಂಬAಧಿತ ಚಟುವಟಿಕೆಗಳು, ಮೀನುಗಾರಿಕೆ, ಕುಕ್ಕುಟ, ಜಾನುವಾರು ಹಾಗೂ ಹೈನುಗಾರಿಕೆ ಇತ್ಯಾದಿಗಳಿಗೆ ವಿನಾಯಿತಿ ನೀಡಲಾಗಿದೆ. ಕೃಷಿ ಹಾಗೂ ಕೃಷಿ ಸಂಬAಧಿತ ಕ್ಷೇತ್ರಗಳಿಗೆ ಸಂಬAಧಪಟ್ಟAತೆ, ಜಿಲ್ಲೆಗಳಲ್ಲಿ ರೈತರು ಈ ಸಂಕಷ್ಟದ ಸಮಯದಲ್ಲಿ ಎದುರಿಸಬಹುದಾದ ಗೊಂದಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಲಹೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಸಂಬAಧಪಟ್ಟ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರುಗಳು ಹಾಗೂ ತಾಲೂಕು ಮಟ್ಟದಲ್ಲಿ ವಾರದಲ್ಲಿ ಒಂದು ದಿನ ಸಭೆ ಆಯೋಜಿಸಿ, ರೈತರು ಕೋವಿಡ್-೧೯ನಿಂದ ಕೃಷಿ ಚಟುವಟಿಕೆಗಳ ಮೇಲೆ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಕೇಳಬಹುದಾದ ಪ್ರಶ್ನೆಗಳಿಗೆ ಸೂಕ್ತ ಸಲಹೆ, ಪರಿಹಾರ ಮಾರ್ಗದರ್ಶನ ನೀಡಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಯಾವುದಾದರೂ ಪ್ರಶ್ನೆಗಳಿಗೆ ಮಾಹಿತಿ ನೀಡಲು ಸಾಧ್ಯವಾಗದಿದ್ದಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಸೂಪರಿಟೆಂಡೆAಟ್ ಆಫ್ ಪೊಲೀಸ್‌ರವರ ಗಮನಕ್ಕೆ ತಂದು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಸಭೆ ಆಯೋಜಿಸುವಾಗ ಅಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೋವಿಡ್-೧೯ರ ಪ್ರಸರಣವನ್ನು ನಿಯಂತ್ರಿಸಲು ನಿಗದಿಪಡಿಸಿರುವ ಮಾರ್ಗಸೂಚಿಯನ್ವಯ ಸಾಮಾಜಿಕ ಅಂತರ ಹಾಗೂ ಇನ್ನಿತರೆ ಕೋವಿಡ್-೧೯ರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಕೃಷಿ ನಿರ್ದೇಶಕರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.