ನಾಪೋಕ್ಲು, ಏ. ೨೮: ಲಾಕ್‌ಡೌನ್ ಅವಧಿಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಾನೂನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಇಲ್ಲಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಮಾತನಾಡಿ, ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ, ಸಾರ್ವಜನಿಕರ ಸಹಕಾರ ಅಗತ್ಯ ಎಂದರು. ನಾಪೋಕ್ಲು ಹೋಬಳಿಯ ಕೋವಿಡ್ ಸಂತ್ರಸ್ತರ ಮನೆ ಬಳಿ ರಿಬ್ಬನ್ ಕಟ್ಟಿ ಸಾರ್ವಜನಿಕರು ಎಚ್ಚರದಿಂದಿರುವAತೆ ಸೂಚಿಸಬೇಕು. ಕಾರ್ಯಪಡೆ ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದರು. ಕೋವಿಡ್ ಸಂತ್ರಸ್ತರು ಕೂಲಿ ಕೆಲಸದವರು ಅಥವಾ ಕಡುಬಡವರಾಗಿದ್ದು ತೊಂದರೆಗೆ ಸಿಲುಕಿದಲ್ಲಿ ಕಾರ್ಯಪಡೆ ಸದಸ್ಯರು ತನ್ನ ಗಮನಕ್ಕೆ ತಂದರೆ ಅಂತಹವರಿಗೆ ನನ್ನ ಸ್ವಂತ ಖರ್ಚಿನಿಂದ ಸಹಾಯ ಮಾಡುವುದಾಗಿ ಪಂಚಾಯಿತಿ ಉಪಾಧ್ಯಕ್ಷ ಮಹಮದ್ ಖುರೇಶಿ ಹೇಳಿದರು.

ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಕಾಳೇಯಂಡ ಸಾಬ ತಿಮ್ಮಯ್ಯ, ಅಶ್ರಫ್, ಮಹಮ್ಮದ್, ವನಜÁಕ್ಷಿ, ರೇಖಾ, ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗೆ ಅಮ್ರತಾ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಪಂಚಾ ಯತ್ ಸಿಬ್ಬಂದಿಯವರು ಇದ್ದರು.