ಮಡಿಕೇರಿ, ಏ. ೨೮: ರಾಜ್ಯಾದ್ಯಂತ ಕರ್ಫ್ಯೂ ಹಿನ್ನೆಲೆ ಬೆಳಿಗ್ಗೆ ೬ ರಿಂದ ೧೦ ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ಉಳಿದಂತೆ ಇತರ ಎಲ್ಲಾ ಸಮಯದಲ್ಲಿಯೂ, ತುರ್ತು ಸೇವೆ ಹೊರತು ಪಡಿಸಿ ಸಾರ್ವಜನಿಕರು ಮನೆಯಲ್ಲಿಯೇ ಇರಬೇಕಾಗಿ ಆದೇಶ ಹೊರಡಿಸಲಾಗಿದೆ. ಅದಾಗ್ಯೂ ಅಗತ್ಯ ಸೇವೆಗಳಲ್ಲಿ ಒಂದಾದ ಬ್ಯಾಂಕಿAಗ್ ವಲಯ ಮಧ್ಯಾಹ್ನ ೨ ಗಂಟೆಯವರೆಗೆ ಕಾರ್ಯಾಚರಿಸಲು ಅನುಮತಿ ಇದೆ. ಇದರೊಂದಿಗೆ ಮಾಧ್ಯಮದವರು ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಎಂದಿನAತೆ ಕಾರ್ಯನಿರ್ವಹಿಸಬಹುದಾಗಿದೆ. ಈ ಸಂದರ್ಭ ಹಲವಾರು ಮಂದಿ ತೊಂದರೆ ಎದುರಿಸಿದ್ದನ್ನು ವಿವರಿಸಿದ್ದಾರೆ.
ಬಸ್ ಸಂಚಾರವಿಲ್ಲದೆ ಪರದಾಟ
ತಮ್ಮ ಪತ್ನಿ ವೀರಾಜಪೇಟೆಯಲ್ಲಿ ಶುಶ್ರೂಷಕಿಯರಾಗಿ ಸೇವೆ ಸಲ್ಲಿಸುತ್ತಿದ್ದು, ಮಡಿಕೇರಿಯಿಂದ ತೆರಳಲು ಬಸ್ ವ್ಯವಸ್ಥೆ ಇಲ್ಲದ ಕಾರಣ ಬಹಳ ತೊಂದರೆ ಎದುರಿಸುವಂತಾಗಿರುವುದಾಗಿ ಮಡಿಕೇರಿ ನಿವಾಸಿ ಶಿವು ಪತ್ರಿಕೆಯ ಮೂಲಕ ತಮ್ಮ ಸಮಸ್ಯೆಯನ್ನು ಮುಂದಿಟ್ಟಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತೆಯರ ಸೇವೆ ಈ ಸಂದರ್ಭದಲ್ಲಿ ಬಹಳ ಅಗತ್ಯಕರವಾಗಿದ್ದು, ಬಸ್ ಸಂಚಾರವಿಲ್ಲದ ಕಾರಣ ಪರ ಊರುಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಅನಾನುಕೂಲ ಉಂಟಾಗಿದೆ.
ಬ್ಯಾAಕ್ಗೆ ತೆರಳುವುದು ಹೇಗೆ?
ಕರ್ಫ್ಯೂ ಇದ್ದರೂ, ಅಗತ್ಯ ಸೇವೆ ಎಂದು ಪರಿಗಣಿಸಲಾದ ಬ್ಯಾಂಕಿAಗ್ ವಲಯ ಮಧ್ಯಾಹ್ನ ೨ ಗಂಟೆಯವರೆಗೂ ಕಾರ್ಯನಿರ್ವಹಿಸಲು ಅನುಮತಿ ಇದೆ. ಆದರೆ ಬ್ಯಾಂಕಿಗೆ ಸಾರ್ವಜನಿಕರು ತೆರಳುವುದಾದರೂ ಹೇಗೆ? ಇಂದು ಬೆಳಿಗ್ಗೆ ಬ್ಯಾಂಕಿಗೆ ತೆರಳುತ್ತಿದ್ದ ವೇಳೆ ಪೊಲೀಸರು ತಮ್ಮನ್ನು ನಿಲ್ಲಿಸಿ ಮನೆಯಲ್ಲೇ ಇರಬೇಕಾಗಿ ರೇಗಾಡಿದರು ಎಂದು ಮಡಿಕೇರಿ ಉಕ್ಕುಡ ನಿವಾಸಿ ಹನೀಫ್ ಅವರು ಪತ್ರಿಕೆಯೊಂದಿಗೆ ನೋವು ಹೇಳಿಕೊಂಡಿದ್ದಾರೆ. ತಮ್ಮ ಬಳಿ ಚೆಕ್ ಇದ್ದು, ಬ್ಯಾಂಕಿಗೆ ಹೋಗುತ್ತಿರುವುದಾಗಿ ಹೇಳಿದರೂ ಸ್ವಲ್ಪ ಹೊತ್ತು ತಡೆಹಿಡಿದು ಹಲವಾರು ಪ್ರಶ್ನೆಗಳ ನಂತರ ಬ್ಯಾಂಕಿಗೆ ತೆರಳಲು ಅನುಮತಿ ನೀಡಿದರು. ಹೀಗೆ ಮುಂದೆ ತೆರಳಿದಾಗ ಮತ್ತೊಂದು ಗುಂಪಿನ ಪೊಲೀಸ್ ಅಧಿಕಾರಿಗಳು ತಡೆಹಿಡಿದರು ಎಂದು ಹನೀಫ್ ಅವರು ಪತ್ರಿಕೆಗೆ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖಾ ಮೂಲಗಳಿಂದ ಸ್ಪಷ್ಟನೆ ಬಯಸಿದಾಗ, ಬ್ಯಾಂಕಿಗೆ ಸಂಬAಧಿಸಿದAತೆ ಚೆಕ್, ಇತ್ಯಾದಿಗಳನ್ನು ಪೊಲೀಸ್ ಸಿಬ್ಬಂದಿಗೆ ತೋರಿಸಿದರೆ ಯಾವುದೇ ತೊಂದರೆ ಆಗುವುದಿಲ್ಲ. ಸಾರ್ವಜನಿಕರು ತಾಳ್ಮೆಯಿಂದ ಪೊಲೀಸರೊಂದಿಗೆ ವರ್ತಿಸಬೇಕು. ಎ.ಟಿ.ಎಂ.ಗಳಿAದ ಹಣ ತೆಗೆಯುವ ಕಾರ್ಯವನ್ನು ಬೆಳಿಗ್ಗೆ ೬ ರಿಂದ ೧೦ ಗಂಟೆಯ ಒಳಗೇ ಮಾಡಿ ಮುಗಿಸಬೇಕಾಗಿ ಮನವಿ ಮಾಡಿದ್ದಾರೆ.
ಚುಚ್ಚುಮದ್ದು-ಪ್ರಯಾಸ
ಕೋವಿಡ್ ಇಂಜಕ್ಷ್ಷನ್ಗಾಗಿ ಮಡಿಕೇರಿ ಆಸ್ಪತ್ರೆಗೆ ಅನೇಕ ಹಿರಿಯರು ಧಾವಿಸಿದ್ದರು. ಅಲ್ಲಿ ಯಾರೂ ಇರಲಿಲ್ಲ. ಮಡಿಕೇರಿ ಸಂತ ಮೈಕಲರ ಶಾಲೆಯಲ್ಲಿ ಈ ವ್ಯವಸ್ಥೆ ಮಾಡಿರುವುದನ್ನು ತಿಳಿದು ಅಲ್ಲಿಗೆ ಓಡಿದರು. ಅಲ್ಲಿ ಸಮಸ್ಯೆಯೇ ಬೇರೆ. ಮೊದಲ ಇಂಜಕ್ಷನ್-ಎರಡನೇ ಇಂಜಕ್ಷನ್ ಎಲ್ಲದಕ್ಕೂ ಒಂದೇ ಕ್ಯೂ. ಜನರ ಪರದಾಟ-ನರ್ಸ್ಗಳಿಗೆ ಗಲಿಬಿಲಿ. ಎಲ್ಲವೂ ಅಯೋಮಯ. ಸರತಿಯಲ್ಲಿದ್ದ ಮಾಜಿ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಿರಿಯರಿಗೆ ಕೂರಲು ಬೆಂಚ್ ವ್ಯವಸ್ಥೆ ಮಾಡಿಕೊಡಲು ಮಾಡಿದ ಮನವಿಗೆ ಆಸ್ಪತ್ರೆಯಲ್ಲಿ ಸ್ಪಂದಿಸಿದ್ದಾರೆ. ಮೊದಲ ಹಾಗೂ ಎರಡನೇ ಚುಚ್ಚು ಮದ್ದು ಪಡೆಯಲು ಪ್ರತ್ಯೇಕ ಕೌಂಟರ್ ಅಥವಾ ಎರಡಕ್ಕೂ ಪ್ರತ್ಯೇಕ ದಿನಗಳನ್ನು ನಿಗದಿ ಮಾಡಿ ಪತ್ರಿಕೆಗಳಲ್ಲಿ ಆರೋಗ್ಯ ಇಲಾಖೆ ಮಾಹಿತಿ ನೀಡಲಿ ಎಂದು ಕಾವೇರಮ್ಮ ಮನವಿ ಮಾಡಿದ್ದಾರೆ.