ಗೋಣಿಕೊಪ್ಪ ವರದಿ, ಏ. ೨೭: ಕೊರೊನಾ ನಿಯಂತ್ರಣಕ್ಕೆ ಬಾಳೆಲೆ ಗ್ರಾಮ ಪಂಚಾಯಿತಿ ವತಿಯಿಂದ ವ್ಯಾಪ್ತಿಯಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮತ್ತು ಅಂಗಡಿಗಳಲ್ಲಿ ಖರೀದಿಗೆ ಅಂತರ ಕಾಯ್ದುಕೊಳ್ಳಲು ಗುರುತು ಮಾಡಲಾಯಿತು. ಬಾಳೆಲೆ ಪಟ್ಟಣಕ್ಕೆ ಒಳಗೊಂಡ ಅಂಗಡಿ, ಮುಂಗಟ್ಟು, ದೇವಸ್ಥಾನ ಆವರಣ, ಬಡಾವಣೆ ಆವರಣ, ರಸ್ತೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಂಪಡಣೆ ಮಾಡಲಾಯಿತು.

ವ್ಯಾಪಾರಕ್ಕೆ ಬರುವ ಜನರಲ್ಲಿ ಅಂತರ ಕಾಯ್ದುಕೊಳ್ಳಲು ಪಂಚಾಯಿತಿ ವತಿಯಿಂದ ಅಂಗಡಿಗಳ ಮುಂದೆ ೬ ಅಡಿ ಅಂತರದ ಬಣ್ಣ ಬಳಿದು ಗುರುತು ಮಾಡುವ ಮೂಲಕ ದೈಹಿಕ ಅಂತರ ಕಾಯ್ದುಕೊಳ್ಳಲು ಅನುವು ಮಾಡಿಕೊಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಪೋಡಮಾಡ ಸುಖೇಶ್, ಸದಸ್ಯ ಆದೇಂಗಡ ವಿನು ಉತ್ತಪ್ಪ, ಪಿಡಿಓ ಮನ್‌ಮೋಹನ್ ಭಾಗವಹಿಸಿದ್ದರು.