ಶನಿವಾರಸAತೆ, ಏ. ೨೭: ಶನಿವಾರಸಂತೆ ಗ್ರಾಮ ಪಂಚಾಯಿತಿಯಿAದ ಮತ್ತು ಹೋಬಳಿ ಮಟ್ಟದ ಕೋವಿಡ್-೧೯ ಟಾಸ್ಕ್ಫೋರ್ಸ್ ವತಿಯಿಂದ ಮಾಸ್ಕ್ ಧರಿಸದವರಿಗೆ ದಂಡ ವಿಧಿಸ ಲಾಯಿತು. ಒಟ್ಟು ರೂ. ೧,೩೦೦ ಗಳನ್ನು ಕೋವಿಡ್-೧೯ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಯಿತು. ಕೋವಿಡ್-೧೯ ನಿಯಂತ್ರಣದ ಹೋಬಳಿ ಮಟ್ಟದ ತಂಡದವರಾದ ಸಿಆರ್‌ಪಿ ದಿನೇಶ್, ಪಿಡಿಓ ಮೇದಪ್ಪ ಬಿ.ಜೆ., ಎಎಸ್‌ಐ ಜಯಕುಮಾರ್, ವಿ.ಎ. ಸಂತೋಷ್, ಬಿಲ್‌ಕಲೆಕ್ಟರ್ ವಂಸತ, ಕಂಪ್ಯೂಟರ್ ನಿರ್ವಾಹಕಿ ಫೌಜಿಯಾ, ಲೀಲಾವತಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಮಂಜೇಶ್ ಹಾಜರಿದ್ದರು.