ಮಡಿಕೇರಿ, ಏ. ೨೭: ಬಿ.ಜೆ.ಪಿ. ಪಕ್ಷದಿಂದ ಮಾಜಿ ಸೈನಿಕರ ಪ್ರಕೋಷ್ಠವನ್ನು ಆಯ್ಕೆ ಮಾಡಲಾಗಿದ್ದು, ಜಿಲ್ಲಾ ಸಂಚಾಲಕರಾಗಿ ನಿವೃತ್ತ ಮೇಜರ್ ಓ.ಎಸ್. ಚಿಂಗಪ್ಪ ಹಾಗೂ ಸಹ ಸಂಚಾಲಕರಾಗಿ ಪಟ್ರಪಂಡ ರಮೇಶ್ ಕರುಂಬಯ್ಯ ಅವರನ್ನು ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅವರು ನೇಮಕ ಮಾಡಿದ್ದಾರೆ.
ಜಿಲ್ಲಾ ಸದಸ್ಯರಾಗಿ ತಿಮ್ಮಪ್ಪನಾಯಕ್, ಕುಟ್ಟಂಡ ಬಿ. ಮಾದಪ್ಪ, ಎಂ.ಎನ್. ಮಾದಪ್ಪ, ಕೊಂಡೀರ ನಾಣಯ್ಯ, ಪಿ. ವಿಶ್ವನಾಥ್, ವಾಸಪ್ಪ ಹೆಚ್. ಹಾಗೂ ಚೇಂದ್ರಿಮಾಡ ನಂಜಪ್ಪ ಆಯ್ಕೆಯಾಗಿದ್ದಾರೆ.
ಮಡಿಕೇರಿ ನಗರ ಸಂಚಾಲಕರಾಗಿ ಮಂದನೆರವAಡ ಸಂಜು ಅಚ್ಚಯ್ಯ, ಮಡಿಕೇರಿ ತಾಲೂಕು ಸಂಚಾಲಕರಾಗಿ ಚೋಂಡಿರ ಎ. ಕಾರ್ಯಪ್ಪ, ಸೋಮವಾರಪೇಟೆ ಬಟ್ಟಿಯಂಡ ಈರಪ್ಪ ಹಾಗೂ ವೀರಾಜಪೇಟೆಗೆ ಪುಗ್ಗೇರ ನಂದ ಅವರನ್ನು ಜಿಲ್ಲಾ ಸಂಚಾಲಕ ಚಿಂಗಪ್ಪ ಅವರು ಆಯ್ಕೆ ಮಾಡಿದ್ದಾರೆ.