ಕೂಡಿಗೆ, ಏ. ೨೭: ಕೂಡಿಗೆ ಸರ್ಕಲ್ ಸಮೀಪವಿರುವ ಗಣಪತಿ ಪೆಂಡಲ್ನ ಆವರಣದಲ್ಲಿ ವಾಸವಿರುವ ಗೋಪಾಲಯ್ಯ ಮತ್ತು ಅವನ ಹೆಂಡತಿ ಸಾವಿತ್ರಮ್ಮ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಕೊರೊನಾ ಲಸಿಕೆಯನ್ನು ಪಡೆದಿದ್ದಾರೆ. ಗೋಪಾಲಯ್ಯ ಅವರಿಗೆ ೭೮ ವರ್ಷಗಳಾಗಿದ್ದು ಅವರಿಗೆ ಎರಡು ಕಣ್ಣುಗಳು ಕಾಣುವುದಿಲ್ಲ. ಗೋಪಾಲಯ್ಯನವರಿಗೆ ಸಹಾಯಕರಾಗಿ ಅವರ ಹೆಂಡತಿ ಸಾವಿತ್ರಮ್ಮ ೬೫ ವಯಸ್ಸಿನವರು ಕೂಡ ಆರೋಗ್ಯ ಕೇಂದ್ರಕ್ಕೆ ಹೋಗಿ ಲಸಿಕೆಯನ್ನು ಪಡೆದಿದ್ದು ವಿಶೇಷವಾಗಿತ್ತು.