ಮಡಿಕೇರಿ, ಏ. ೨೭: ಜಿಲ್ಲಾ ಆಸ್ಪತ್ರೆಯ ಔಷಧಿ ಉಗ್ರಾಣಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಜಿಲ್ಲೆಯಲ್ಲಿ ವಿವಿಧ ಚಿಕಿತ್ಸೆಗಳಿಗೆ ಲಭ್ಯವಿರುವ ಔಷಧಿಗಳ ದಾಸ್ತಾನನ್ನು ಪರಿಶೀಲಿಸಿದರು. ನಂತರ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಅಳವಡಿಸಿರುವ ೧೩ ಸಾವಿರ ಲೀಟರ್ ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕ್‌ನ್ನು ಪರಿಶೀಲಿಸಿ ಕಾರ್ಯವೈಖರಿ ಬಗ್ಗೆ ಸಂಬAಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದರು.

ವೈದ್ಯಕೀಯ ಕಾಲೇಜಿನ ಡೀನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮತ್ತಿತರರು ಹಾಜರಿದ್ದರು.