ವೀರಾಜಪೇಟೆ, ಏ. ೨೬: ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಲ್ಲಿ ಮಳೆಗಾಲ ಬಂತೆAದರೆ ನೀರುತುಂಬಿಕೊAಡು ವಾಹನಗಳು ಸಂಚರಿಸಲು ಹರಸಾಹಸ ಪಡಬೇಕು.ಮಳೆಗಾಲದ ನಂತರ ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗದೆ ವಾಹನಗಳು ಅಪಘಾತಕ್ಕೀಡಾಗಬೇಕು. ಈ ರಸ್ತೆ ಅಭಿವೃದ್ಧಿಯ ಕನಸು ಅದೇಕೋ ನನಸಾಗುವ ಲಕ್ಷಣಗಳಿಲ್ಲ. ಗುಂಡಿ ಮುಚ್ಚುವಂತಹ ಕಾರ್ಯಕ್ಕೆ ಸಂಬAಧಪಟ್ಟ ಇಲಾಖೆಯವರು ಮುಂದಾಗುತ್ತಿಲ್ಲ. ಸಾರ್ವಜನಿಕರು ಪ್ರತಿನಿತ್ಯ ರಸ್ತೆಗಳಲ್ಲಿ ಓಡಾಡಲು ಪ್ರಯಾಸ ಪಡುತ್ತಿದ್ದರೆ. ಇದು ಕಲ್ಲುಬಾಣೆ ರಸ್ತೆಯ ಪರಿಸ್ಥಿತಿ. ಈ ರಸ್ತೆಯ ದುರಾವಸ್ಥೆಯನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಕಂಡರೂ ಕಂಡರಿಯದAತೆ ಕೈಕಟ್ಟಿ ಕುಳಿತ್ತಿದ್ದಾರೆ.

ಇತ್ತೀಚೆಗೆ ಎಂಎಲ್‌ಸಿ ವೀಣಾ ಅಚ್ಚಯ್ಯ ಅವರು ಕಲ್ಲುಬಾಣೆಗೆ ಆಗಮಿಸಿ ಇಲ್ಲಿನ ರಸ್ತೆಯ ಅವ್ಯವಸ್ಥೆಯನ್ನು ಗಮನಿಸಿ ಗ್ರಾಮಸ್ಥರ

ಸಂಕಷ್ಟ ಆಲಿಸಿ ರೂ. ೫ ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಸಲು ಭೂಮಿ ಪೂಜೆ ನೆರವೇರಿಸಿದ್ದರು. ಅದಾಗಿ ತಿಂಗಳುಗಳೇ

ಕಳೆದರೂ ಇದುವರೆಗೂ ಕಾಮಗಾರಿ ನಡೆದಿಲ್ಲ. ಹದಗೆಟ್ಟ ರಸ್ತೆಯಿಂದಾಗಿ ವಾಹನಗಳು ಸಂಪೂರ್ಣವಾಗಿ ಹಾಳಾಗುತ್ತಿದ್ದು, ವಾಹನಗಳು ಕೆಟ್ಟು ನಿಲ್ಲುವಂತಾಗಿವೆ.

ಚಾಲಕರ ಹರಸಾಹಸ: ರಸ್ತೆಯಲ್ಲಿ ಬಿದ್ದಿರುವ ಆಳುದ್ದ ಗುಂಡಿಯಲ್ಲಿ ಸಂಚರಿಸಲು ವಾಹನಗಳು ಹರಸಾಹಸ ಪಡುತ್ತಿವೆ. ಚಾಲಕರು ಜೀವ ಬಿಗಿ ಹಿಡಿದು ವಾಹನ ಚಾಲನೆ ಮಾಡುವಂತಹ ಪರಿಸ್ಥಿತಿ. ಇದು ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ. ಕೆಲವೆಡೆ ಗುಂಡಿ ಮುಚ್ಚಲು ಹಾಕಿರುವ ಮಣ್ಣಿನಿಂದ ರಸ್ತೆ ಕೆಸರು ಗದ್ದೆಯಾಗಿ ಪ್ರತಿನಿತ್ಯ ಸಂಚರಿಸುವ ವಾಹನ ಚಾಲಕರು ಹಿಡಿಶಾಪ ಹಾಕುತ್ತಿದ್ದಾರೆ.

ಶಾಸಕರು, ಸಂಸದರು, ಉಸ್ತುವಾರಿ ಸಚಿವರೂ ಈ ಬಗ್ಗೆ ಕ್ರಮಕೈಗೊಂಡಿಲ್ಲ. ರಸ್ತೆ ಅಭಿವೃದ್ಧಿಗೆ ನಿರ್ಲಕ್ಷ÷್ಯ ವಹಿಸಿರುವ ಸರಕಾರ, ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರ ಇನ್ನಾದರೂ ಸಬೂಬು ಹೇಳುವ ಬದಲು ಹಾಳಾಗಿರುವ ರಸ್ತೆ ಅಭಿವೃದ್ಧಿ ಕಡೆಗೆ ಮನಸ್ಸು ಮಾಡಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸ್ಥಳೀಯರಿಂದ ರಸ್ತೆ ದುರಸ್ತಿ ಕಾರ್ಯ

ರಸ್ತೆಗಳು ಹೊಂಡ- ಗುಂಡಿಗಳಿAದ ಕೂಡಿದ್ದು, ಸಂಚಾರಕ್ಕೆ ತೊಂದರೆ ಆಗುವುದನ್ನು ಅರಿತ ಗ್ರಾಮಸ್ಥರು ಕೆಲವು ತಿಂಗಳ ಹಿಂದೆ ಒಂದು ದಿನದ ಶ್ರಮದಾನದ ಮೂಲಕ ತಕ್ಕ ಮಟ್ಟಿಗೆ ಗುಂಡಿಗಳಿಗೆ ಕಲ್ಲು ಮಣ್ಣುಗಳನ್ನು ತುಂಬಿಸಿ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಿದ್ದರು. ಆರ್ಜಿ ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮ ಪಂಚಾಯಿತಿ ಅನುದಾನದಲ್ಲಿ ರಸ್ತೆ ಬದಿಗಳಲ್ಲಿದ್ದ ಕಸವನ್ನು ತೆಗೆದು ಸ್ವಚ್ಛಗೊಳಿಸಿದ್ದರು.

-ಕೆ. ನಮನ