ಕೊರೊನಾಗೆ ಕನ್ನಡದ ಕೋಟಿ ನಿರ್ಮಾಪಕ ರಾಮು

ಬೆಂಗಳೂರು, ಏ. ೨೬: ಗೋಲಿಬಾರ್, ಎಕೆ ೪೭, ಸಿಂಹದ ಮರಿಯಂತ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನಿರ್ಮಿಸಿ ಕನ್ನಡದ ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿದ್ದ ರಾಮು ಕೊರೊನಾಗೆ ಬಲಿಯಾಗಿದ್ದಾರೆ. ನಟಿ ಮಾಲಾಶ್ರೀ ಅವರ ಪತಿ ರಾಮು ಅವರ ಆರೋಗ್ಯದಲ್ಲಿ ಏರು ಪೇರು ಉಂಟಾದ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ನಗರದ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ೫೨ ವರ್ಷದ ರಾಮು ಅವರಿಗೆ ಒಂದು ವಾರದ ಹಿಂದೆ ಕೊರೊನಾ ಪಾಸಿಟಿವ್ ಬಂದಿತ್ತು. ರಾಮು ಅವರು ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ೩೯ ಚಿತ್ರಗಳನ್ನು ನಿರ್ಮಿಸಿದ್ದಾರೆ. ಗೋಲಿಬಾರ್ ಚಿತ್ರದ ನಿರ್ಮಾಣದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಇನ್ನು ಮೊದಲಿಗೆ ಕನ್ನಡದಲ್ಲಿ ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಿಸಿದ್ದರಿಂದ ಅವರಿಗೆ ಕೋಟಿ ರಾಮು ಎಂದು ಹೆಸರು ಬಂದಿತ್ತು.

ಮೇ ಮಧ್ಯದ ವೇಳೆಗೆ ಸಕ್ರಿಯ ಪ್ರಕರಣಗಳ ಏರಿಕೆ ಸಾಧ್ಯತೆ

ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್‌ನ ೨ನೇ ಅಬ್ಬರ ಮುಂದುವರೆದಿರುವAತೆಯೇ ಮೇ ತಿಂಗಳಲ್ಲಿ ಸೋಂಕು ಉತ್ತುಂಗಕ್ಕೇರುವ ಸಾಧ್ಯತೆ ಇದ್ದು, ಮೇ.೧೫ರ ಹೊತ್ತಿಗೆ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ ೩೮ ರಿಂದ ೪೮ ಲಕ್ಷಕ್ಕೇರುವ ಸಾಧ್ಯತೆ ಇದೆ ಎಂದು ಐಐಟಿ ವಿಜ್ಞಾನಿಗಳು ಹೇಳಿದ್ದಾರೆ. ಐಐಟಿ ವಿಜ್ಞಾನಿಗಳು ರೂಪಿಸಿದ ಗಣಿತದ ಮಾದರಿ ಪ್ರಕಾರ ಹಾಲಿ ದೈನಂದಿನ ಹೊಸ ಪ್ರಕರಣಗಳನ್ನು ಲೆಕ್ಕಾಚಾರ ಮಾಡಿದರೆ, ಕಳೆದ ಸೆಪ್ಟೆಂಬರ್‌ನಲ್ಲಿ ಸುಮಾರು ೧೦ ಲಕ್ಷ ಸಕ್ರಿಯ ಪ್ರಕರಣಗಳು ದಾಖಲಾಗಿತ್ತು. ಮೇ ತಿಂಗಳ ೧೪ ರಿಂದ ೧೮ರ ಹೊತ್ತಿಗೆ ಭಾರತದಲ್ಲಿನ ಕೋವಿಡ್-೧೯ ಸಕ್ರಿಯ ಪ್ರಕರಣಗಳ ಸಂಖ್ಯೆ ೩೮-೪೮ ಲಕ್ಷಕ್ಕೇರುವ ಸಾಧ್ಯತೆ ಇದೆ. ಅಂತೆಯೇ ಮೇ ಅಂತ್ಯದ ವೇಳೆಗೆ ಪ್ರಕರಣಗಳ ಸಂಖ್ಯೆ ಕುಸಿಯಬಹುದು ಎಂದು ಕಾನ್ಪುರ ಮತ್ತು ಹೈದರಾಬಾದ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ೩ ತಿಂಗಳು ಭಾರತಕ್ಕೆ ನಿರ್ಣಾಯಕವಾಗಿದ್ದು, ಮೇ ೧೧ ರಿಂದ ೧೫ರ ನಡುವೆ ಭಾರತದಲ್ಲಿ ಕೊರೊನಾ ಪ್ರಕರಣಗಳು ಗರಿಷ್ಠ ಮಟ್ಟ ತಲುಪಲಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ೩೮ರಿಂದ ೪೮ ಲಕ್ಷ ತಲುಪಲಿದೆ. ಇನ್ನೂ ಮುಂದಿನ ಮೂರು ವಾರಗಳ ಕಾಲ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಸಾಗುತ್ತದೆ. ಅಂದಾಜಿನ ಪ್ರಕಾರ ಮೇ ಮಧ್ಯಭಾಗದಲ್ಲಿ ಕೊರೊನಾ ಮೊದಲನೇ ಅಲೆಗಿಂತ ಮೂರು ಪಟ್ಟು ಹೆಚ್ಚಿನ ಪ್ರಕರಣ ದಾಖಲಾಗುತ್ತದೆ. ಕಳೆದ ಸೆಪ್ಟೆಂಬರ್ ೧೭ರಂದು ದೇಶದಲ್ಲಿ ೧೦ ಲಕ್ಷ ಸಕ್ರಿಯ ಪ್ರಕರಣಗಳು ದಾಖಲಾಗಿತ್ತು.

ಮಾತುಕತೆಗೆ ಸಿದ್ಧ: ಪಾಕಿಸ್ತಾನ

ಇಸ್ಲಾಮಾಬಾದ್, ಏ. ೨೬: ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬAಧಿಸಿದAತೆ ೨೦೧೯ ರ ಆಗಸ್ಟ್ ೫ ರಂದು ಭಾರತ ಕೈಗೊಂಡ ಏಕಪಕ್ಷೀಯ ನಿರ್ಧಾರಗಳನ್ನು ಮರುಪರಿಶೀಲಿಸಲು ಸಿದ್ದವಾಗಿದ್ದರೆ ಪಾಕಿಸ್ತಾನವು ಭಾರತದೊಡನೆ ಮಾತುಕತೆಯ ಮೂಲಕ ಬಾಕಿ ಇರುವ ಸಮಸ್ಯೆಗಳನ್ನು ಬಗೆಹರಿಸಲು ಸಿದ್ದವಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಭಾನುವಾರ ಹೇಳಿದ್ದಾರೆ. ಟರ್ಕಿಯ ಅನಾಡೋಲು ಏಜೆನ್ಸಿಗೆ ನೀಡಿದ ಮಾತನಾಡಿದ ಖುರೇಷಿ, ಆಗಸ್ಟ್ ೫, ೨೦೧೯ರಂದು ತೆಗೆದುಕೊಂಡ ಕೆಲವು ನಿರ್ಧಾರಗಳನ್ನು ಭಾರತವು ಪುನಃ ಪರಿಶೀಲಿಸಲು ಸಿದ್ದವಾಗಿದ್ದರೆ ಪಾಕಿಸ್ತಾನವು ಭಾರತದೊಡನೆ ಮಾತನಾಡಲು ಮತ್ತು ಬಾಕಿ ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚು ಸಂತೋಷದಿAದ ಮುಂದಾಗಲಿದೆ ಎಂದಿದ್ದಾರೆ. ಖುರೇಷಿ ತನ್ನ ಎರಡು ದಿನಗಳ ಟರ್ಕಿ ಭೇಟಿಯಲ್ಲಿದ್ದಾರೆ. ಆಗಸ್ಟ್ ೫, ೨೦೧೯ ರಂದು ಪ್ರಧಾನಿ ನರೇಂದ್ರ ಮೋದಿ ಸಂವಿಧಾನದ ೩೭೦ ನೇ ವಿಧಿಯನ್ನು ಮಾರ್ಪಡಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವ ದಿಟ್ಟ ಕ್ರಮ ಕೈಗೊಂಡಿದ್ದರು. ಅದೇ ದಿನ, ರಾಜ್ಯಸಭೆಯು ಜಮ್ಮು ಮತ್ತು ಕಾಶ್ಮೀರ ಮರುರೂಪಣೆ ಮಸೂದೆಯನ್ನು ಸಹ ಅಂಗೀಕರಿಸಿತು, ಅದು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು. ಪಾಕಿಸ್ತಾನವು ಕಾಶ್ಮೀರ, ಸಿಯಾಚಿನ್, ಸರ್ ಕ್ರೀಕ್, ನೀರು ಮತ್ತು ಇತರ ಸಣ್ಣ ಸಮಸ್ಯೆಗಳನ್ನು ಒಳಗೊಂಡAತೆ ಭಾರತದೊಂದಿಗೆ ವಿವಾದವನ್ನಿರಿಸಿಕೊಂಡಿದೆ.

ಕಳ್ಳತನ ಮಾಡಿ ಸಿಕ್ಕಿಬಿದ್ದ ಪಾಕಿಸ್ತಾನದ ರಾಯಭಾರಿ ಕಚೇರಿ ಉದ್ಯೋಗಿಗಳು!

ಸಿಯೋಲ್, ಏ. ೨೬: ದಕ್ಷಿಣ ಕೊರಿಯಾದ ಪಾಕಿಸ್ತಾನ ರಾಯಭಾರಿ ಕಚೇರಿಯ ಇಬ್ಬರು ಉದ್ಯೋಗಿಗಳು ಸಿಯೋಲ್‌ನ ಅಂಗಡಿಯೊAದರಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಯೊಂಗ್ಸಾನ್ ಜಿಲ್ಲೆಯ ಇಟಾವೊನ್ನಲ್ಲಿರುವ ಒಂದೇ ಅಂಗಡಿಯಲ್ಲಿ ಕ್ರಮವಾಗಿ ೧೧,೦೦೦ ವೊನ್ (ಡಾಲರ್ ೧೦) ಮತ್ತು ೧,೯೦೦ ವೊನ್ (ಡಾಲರ್ ೧.೭೦) ಮೌಲ್ಯದ ವಸ್ತುಗಳನ್ನು ಕದಿಯಲಾಗಿದೆ ಎಂದು ಯೋಂಗ್ಸಾನ್ ಪೊಲೀಸ್ ಠಾಣೆ ತಿಳಿಸಿದೆ ಎಂದು ಕೊರಿಯಾ ಟೈಮ್ಸ್ ವರದಿ ಮಾಡಿದೆ ಒಬ್ಬರು ಜನವರಿ ೧೦ರಂದು ೧,೯೦೦ ವೊನ್ (ಡಾಲರ್ ೧.೭೦) ಮೌಲ್ಯದ ಚಾಕೊಲೇಟ್ ಸೋಸುವುದು ಮತ್ತು ಇನ್ನೊಬ್ಬರು ಫೆಬ್ರವರಿ ೨೩ರಂದು ೧೧,೦೦೦ ಮೌಲ್ಯದ ಟೋಪಿ(ಡಾಲರ್ ೧೦) ಕದ್ದಿದ್ದಾರೆ. ಟೋಪಿ ಕಳವಾಗಿರುವುದನ್ನು ಗಮನಿಸಿದ ಅಂಗಡಿಯಲ್ಲಿನ ಉದ್ಯೋಗಿಯೊಬ್ಬರು ಸ್ವಲ್ಪ ಸಮಯದ ನಂತರ ಪೊಲೀಸ್ ದೂರು ನೀಡಿದ್ದರು. ಈ ಸಂಬAಧ ತನಿಖೆಗಿಳಿದ ಕಾನೂನು ಜಾರಿ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಶಂಕಿತನನ್ನು ಪಾಕಿಸ್ತಾನ ರಾಯಭಾರಿ ಕಚೇರಿಯ ೩೫ ವರ್ಷದ ವರ್ಷ ವ್ಯಕ್ತಿ ಎಂದು ಗುರುತಿಸಿದ್ದಾರೆ ಎಂದು ಕೊರಿಯಾ ಟೈಮ್ಸ್ ವರದಿ ಮಾಡಿದೆ.

ಬೆಂಗಳೂರಿನಲ್ಲಿ ೭ ಚಿತಾಗಾರ ಕೋವಿಡ್-೧೯ ಸೋಂಕಿತರಿಗೆ ಮೀಸಲು

ಬೆಂಗಳೂರು, ಏ. ೨೬: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ೭ ಚಿತಾಗಾರಗಳನ್ನು ಕೋವಿಡ್-೧೯ ಮೃತರಿಗೆ ಮೀಸಲಿಡಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಬಿಬಿಎಂಪಿ ಬೆಂಗಳೂರಿನ ೧೨ ಚಿತಾಗಾರಗಳ ಪೈಕಿ ೭ ಚಿತಾಗಾರಗಳನ್ನು ಕೋವಿಡ್-೧೯ ಸೋಂಕಿತ ಮೃತದೇಹಗಳಿಗೆ ಮೀಸಲಿಡಲಾಗಿದೆ. ಈ ಏಳು ಚಿತಾಗಾರಗಳೆಂದರೆ ಮೆಡಿ, ಅಗ್ರಹಾರ, ಕುಡ್ಲು, ಪಣಥೂರ್, ಸುಮ್ಮನಹಳ್ಳಿ, ಪೀಣ್ಯಾ, ಮತ್ತು ಬನಶಂಕರಿ ಶವಾಗಾರಗಳಾಗಿವೆ. ಟಿಆರ್ ಮಿಲ್ಸ್ ಮತ್ತು ತಾವರೆಕೆರೆಯಲ್ಲಿರುವ ಚಿತಾಗಾರ ಸೇರಿದಂತೆ ಉಳಿದ ಐದು ಚಿತಾಗಾರಗಳು ಸಾಮಾನ್ಯರಿಗೆ ಮೀಸಲಾಗಿರುತ್ತದೆ ಎಂದು ಹೇಳಲಾಗಿದೆ.

ಎಂಜಿನಿಯರಿAಗ್, ಪಾಲಿಟೆಕ್ನಿಕ್ ಪರೀಕ್ಷೆಗಳು ಮುಂದಕ್ಕೆ

ಬೆAಗಳೂರು, ಏ. ೨೬: ರಾಜ್ಯಾದ್ಯಂತ ಏಪ್ರಿಲ್ ೨೭ರ ರಾತ್ರಿಯಿಂದ ೧೪ ದಿನ ಕೊರೊನಾ ಕರ್ಫ್ಯೂ ಜಾರಿ ಹಿನ್ನಲೆಯಲ್ಲಿ ನಾಳೆಯಿಂದ ನಡೆಯಬೇಕಿದ್ದ ಎಂಜಿನಿಯರಿAಗ್ ಮತ್ತು ಡಿಪ್ಲೋಮಾ ಪರೀಕ್ಷೆಗಳನ್ನು ಮುಂದಕ್ಕೆ ಹಾಕಲಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಎಂಜಿನಿಯರಿAಗ್, ಪಾಲಿಟೆಕ್ನಿಕ್‌ನ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಎರಡನೇ ಅಲೆಯ ನಡುವೆ ನಾಡಿನ ಕ್ಷೇಮಕ್ಕಾಗಿ ಕೊರೊನಾ ಕರ್ಫ್ಯೂ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ. ಪರೀಕ್ಷೆಗಳು ಯಾವಾಗ ನಡೆಯುತ್ತವೆ ಎಂಬುದನ್ನು ಕೊರೊನಾ ಕರ್ಫ್ಯೂ ಮುಗಿದ ನಂತರ ತಿಳಿಸಲಾಗುವುದು ಎಂದು ಡಿಸಿಎಂ ಹೇಳಿದ್ದಾರೆ.