ಮಡಿಕೇರಿ, ಏ. ೨೬: ವೈಯಕ್ತಿಕ ದ್ವೇಷದಿಂದ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮನು ಮುತ್ತಪ್ಪ ಅವರು ನನ್ನ ವಿರುದ್ಧ ಸತ್ಯಕ್ಕೆ ದೂರವಾದ ಆರೋಪ ಮಾಡುತ್ತಿದ್ದಾರೆ ಎಂದು ನಾಪೋಕ್ಲು ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ಮುರುಳಿ ಕರುಂಬಮಯ್ಯ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೋಕ್ಲಿನಲ್ಲಿ ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣಕ್ಕೆ ರೂ. ೫೫ ಕೋಟಿ ಮಂಜೂರಾಗಿದ್ದು, ಶಾಲಾ ಕಟ್ಟಡ ನಿರ್ಮಿಸುವ ಉದ್ದೇಶಿತ ಜಾಗದಲ್ಲಿರುವ ಮರ ತೆರವು ಸಂಬAಧ ಮಡಿಕೇರಿಯಲ್ಲಿ ಸಭೆ ನಡೆಸಲಾಗಿದೆ. ಈ ವಿಚಾರವನ್ನು ಮುಂದಿಟ್ಟುಕೊAಡು ನನ್ನ ವಿರುದ್ಧ ಮನು ಮುತ್ತಪ್ಪ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಪದವಿ ಕಾಲೇಜಿನಲ್ಲಿ ಮರಹನನದ ಹಿಂದೆ ಜಿ.ಪಂ ಸದಸ್ಯರ ಕೈವಾಡವಿದೆ ಎಂದು ದೂರಿದ್ದಾರೆ. ಆದರೆ, ಅಭಿವೃದ್ಧಿ ಸಮಿತಿ ಸಭೆಯ ನಿರ್ಧಾರದಂತೆ ಒಣಗಿದ ಮರಗಳನ್ನು ತೆರವು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಇದರೊಂದಿಗೆ ಜನರಲ್ ತಿಮ್ಮಯ್ಯ ಕ್ರೀಡಾಂಗಣ ದುರಸ್ತಿಗೆ ರೂ. ೨.೫೦ ಲಕ್ಷ ಹಣ ಸರಿಯಾಗಿ ವಿನಿಯೋಗಿಸಿಲ್ಲ. ಅಭಿವೃದ್ಧಿಯಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ಎಲ್ಲರೊಂದಿಗೆ ಚರ್ಚಿಸಿ, ಸಭೆ ನಿರ್ಧಾರದಂತೆ ಮುನ್ನಡೆಯುತ್ತೇವೆ. ಇದನ್ನು ಹಸ್ತಕ್ಷೇಪ ಎಂದು ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.

ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವವರು ಬೇಕಾದಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಿ ತನಿಖೆ ಎದುರಿಸಲು ನಾನು ತಯಾರಿದ್ದೇನೆ. ಆರೋಪಿಸುವವರ ಹೇಳಿಕೆಯಲ್ಲಿ ಸತ್ಯಾಂಶ ಇದ್ದಲ್ಲಿ ಬೇತು ಮಕ್ಕಿ ಶಾಸ್ತçವು ದೇವರ ಮೇಲೆ ಪ್ರಮಾಣ ಮಾಡಲಿ ಎಂದು ಸವಾಲೆಸೆದರು. ಜಿ.ಪಂ. ಸದಸ್ಯನಾದ ಬಳಿಕ ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಪಟ್ಟಣ ಸಮಗ್ರ ಅಭಿವೃದ್ಧಿಯ ಪಟ್ಟಿ ಬಿಡುಗಡೆ ಮಾಡಲು ನಾನು ತಯಾರಾಗಿದ್ದೇನೆ. ಈ ಹಿಂದೆ ಜಿ.ಪಂ. ಸದಸ್ಯರಾಗಿದ್ದ ಮನು ಮುತ್ತಪ್ಪ ಅವರು ಮಾಡಿದ ಅಭಿವೃದ್ಧಿ ಕಾರ್ಯದ ಪಟ್ಟಿ ಬಿಡುಗಡೆ ಮಾಡಲು ತಯಾರಿದ್ದಾರೆ ಎಂದು ಪ್ರಶ್ನಿಸಿದರು.

ನನ್ನ ಕಿರುಕುಳದಿಂದ ಪ್ರಾಂಶುಪಾಲೆ ಸ್ವಯಂ ನಿವೃತ್ತಿ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಕೂಡ ಸುಳ್ಳು. ಮೈದಾನದ ಮಧ್ಯೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಪ್ರಾಂಶುಪಾಲೆ ಹಠ ಹಿಡಿದಾಗ ಇದು ಅವೈಜ್ಞಾನಿಕ ಕಾಮಗಾರಿ ಎಂದು ಆಕ್ಷೇಪಿಸಿದ್ದೆ. ವೈಯಕ್ತಿಕ ಕಾರಣದಿಂದ ಪ್ರಾಂಶುಪಾಲೆ ನಿವೃತ್ತಿ ಬಯಸಿದ್ದಾರೆ. ನನ್ನ ಕಿರುಕುಳಕ್ಕೆ ನಿವೃತ್ತಿ ಪಡೆಯುತ್ತಿದ್ದಾರೆ ಎಂದು ಬಿಂಬಿಸಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದರು.

ಗೋಷ್ಠಿಯಲ್ಲಿ ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕ ಅಂಬಿ ಕಾರ್ಯಪ್ಪ, ಸಹ ಸಂಚಾಲಕ ದೀಪು ದೇವಯ್ಯ, ಗ್ರಾ.ಪಂ. ಸದಸ್ಯ ಬಿ.ಎಂ. ಪ್ರತಿಪ ಪ್ರಮುಖರಾದ ರತ್ನ ಪೆಮ್ಮಯ್ಯ, ಸದಾ ವಿನೋದ್ ಇದ್ದರು.