ಮಡಿಕೇರಿ, ಏ. ೨೬: ಕೊಡವ ಹೊಸ ವರ್ಷಾ ಚರಣೆಗೆ ಅನುಗುಣವಾಗಿ ಕೊಡವ ದಿನಚರಿಯನ್ನೊಳಗೊಂಡ ನಾಳ್‌ಪಟ್ಟಿಯನ್ನು (ಕ್ಯಾಲೆಂಡರ್) ಇಂದು ಗೂಗಲ್ ಮೀಟ್ ವೆಬಿನಾರ್ ನಲ್ಲಿ ಬಿಡುಗಡೆ ಮಾಡ ಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಅಖಿಲಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಮಾತನಾಡಿ, ಕೊಡವ ಜನಾಂಗ ಪ್ರಪಂಚ ದಲ್ಲಿ ವಿಭಿನ್ನ ಆಚರಣೆಯನ್ನು ಹೊಂದಿದ್ದು, ನಮಗೆ ನಮ್ಮದೇ ಆದ ಕಟ್ಟುಪಾಡು ಆಚರಣೆ ಗಳಿವೆ. ಇದನ್ನ ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಕಾರ್ಯವಾಗ ಬೇಕು, ಇಂದಿನ ಯುವ ಜನಾಂಗ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದು ಶ್ಲಾಘನೀಯ ಎಂದರು.

ನಾಳ್‌ಪಟ್ಟಿಯನ್ನು ಬಿಡುಗಡೆ ಮಾಡಿದ ವೀರಾಜ ಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಅವರು ಮಾತನಾಡಿ, ಕೊಡವರು ತಮ್ಮ ತನವನ್ನು ಉಳಿಸಿಕೊಂಡು ಕೊಡವರಾಗಿಯೇ ಉಳಿಯ ಬೇಕಾದರೆ ಮೊದಲು ಕೊಡವ ಭಾಷೆ ಉಳಿಯುವ ಅಗತ್ಯವಿದೆ. ಪ್ರತಿಯೊಬ್ಬರು ಭಾಷೆಯ ಬೆಳವಣಿಗೆಯೊಂದಿಗೆ ಜನಾಂಗದ ಏಳಿಗೆಗೆ ಒತ್ತು ನೀಡುವಂತಾಗಲಿ ಎಂದರು. ನಾಳ್‌ಪಟ್ಟಿ ತಯಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜ್ಯೋತಿಷಿ ಕರೋಟಿರ ಶಶಿ ಸುಬ್ರಮಣಿ ಅವರು, ತಯಾರಾಗಿರುವ ನಾಳ್‌ಪಟ್ಟಿಯ ಮಹತ್ವದ ಬಗ್ಗೆ ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಟ್ರಾವೆಲ್ ಕೂರ್ಗ್ ಸಂಸ್ಥೆಯ ಮಾಲೀಕರಾದ ಚೆಯ್ಯಂಡ ಸತ್ಯಗಣಪತಿ ಕೊಡವ ಯುವ ಜನಾಂಗ ಆಧುನಿಕತೆಗೆ ಮಾರು ಹೋಗದೆ, ಮೂಲ ಪದ್ಧತಿ, ಪರಿಸರದತ್ತ ಒಲವು ತೋರುಂವತೆ ಹಿರಿಯರು ಪ್ರೇರೇಪಿಸಬೇಕೆಂದರು. ಗೋಣಿಕೊಪ್ಪ ಮುಳಿಯ ಸಂಸ್ಥೆಯ ಪಾಲುದಾರ ಮೇರಿಯಂಡ ಬೋಪಣ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೂಕಳಮಾಡ ರಂಜುನಾಣಯ್ಯ, ಪೋಡಮಾಡ ಭವಾನಿ ನಾಣಯ್ಯ, ಮಾಳೇಟಿರ ಸೀತಮ್ಮ ವಿವೇಕ್, ಉಳುವಂಗಡ ಕಾವೇರಿ ಉದಯ ತಮ್ಮ ಅಭಿಪ್ರಾಯ ಹಂಚಿಕೊAಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಡವಾಮೆರ ಕೊಂಡಾಟ ಸಂಘಟನೆಯ ಉಪಾಧ್ಯಕ್ಷೆ ಮೂವೆರ ರೇಖಾಪ್ರಕಾಶ್ ಕೊಡವ ಮಾಸಗಳಿಗನುಗುಣವಾಗಿ ತಯಾರಾಗಿರುವ ಈ ನಾಳ್‌ಪಟ್ಟಿ ಪ್ರತಿಯೊಬ್ಬ ಕೊಡವರ ಮನೆಮನದಲ್ಲಿಯೂ ವಿಜೃಂಭಿಸುವAತಾಗಲಿ ಎಂದರು.

ಕಾರ್ಯಕ್ರಮದ ಮೊದಲಿಗೆ ಎಂದಿನAತೆ ಕೊಡವ ಪದ್ಧತಿಯಂತೆ ನೆಲ್ಲಕ್ಕಿಯಲ್ಲಿ ಕಾರೊಣರಿಗೆ ಅಕ್ಕಿ ಹಾಕುವುದರ ಮೂಲಕ ಸದಸ್ಯ ಚೆನಿಯಪಂಡ ಮನು ಮಂದಣ್ಣ ಅವರು ಒಕ್ಕಣೆ ಕಟ್ಟಿದರೆ, ಆಡಳಿತಮಂಡಳಿ ಸದಸ್ಯ ಚಿರಿಯಪಂಡ ವಿಶುಕಾಳಪ್ಪ ಸ್ವಾಗತಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು, ಕೊಡವಾಮೆರ ಕೊಂಡಾಟ ಸಂಘಟನೆಯು ಪ್ರಾರಂಭವಾಗಿ ಒಂದೂವರೆ ವರ್ಷವಾಗಿದ್ದು, ಸಂಘಟನೆಯ ಮೂಲ ಧ್ಯೇಯವಾದ ಅವ್ವಾಪಾಜೆರ ಉಳಿಕೆ ಬೊಳ್ಚೆಕ್ಕಾಯಿತ್ ಎಂಬದರ ಈಡೇರಿಕೆಗಾಗಿ ಚಟುವಟಿಕೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಕೊಡಗು, ಮೈಸೂರು, ಬೆಂಗಳೂರು ಸೇರಿದಂತೆ ಎಲ್ಲಾ ಕಡೆ ಇರುವ ನಮ್ಮ ಸದಸ್ಯರಿಂದ ಉಚಿತವಾಗಿ ಪಡೆದುಕೊಳ್ಳಬೇಕೆಂದು ಕೋರಿದರು.

ಆಡಳಿತ ಮಂಡಳಿ ಸದಸ್ಯ ಮಾಳೇಟಿರ ಅಜಿತ್ ಪೂವಣ್ಣ ವಂದಿಸಿ, ಸದಸ್ಯೆ ಕುಲ್ಲಚಂಡ ದೇಚಮ್ಮ ಕೇಸರಿ ಕಾರ್ಯಕ್ರಮ ನಿರ್ವಹಿಸಿದರು.