ಮಡಿಕೇರಿ, ಏ. ೨೬: ಮಡಿಕೇರಿಯಲ್ಲಿರುವ ಇಸಿಹೆಚ್‌ಎಸ್ ಪಾಲಿಕ್ಲಿನಿಕ್‌ನಲ್ಲಿ ದಂತ ಚಿಕಿತ್ಸೆಗೆ ಬರುವ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಮೊದಲೇ ಹೆಸರು ನೋಂದಾವಣೆ ಮಾಡಿಕೊಳ್ಳಬೇಕಾಗಿ ಕ್ಲಿನಿಕ್ ಅಧಿಕಾರಿ ವಿನಂತಿಸಿದ್ದಾರೆ. ದೂರವಾಣಿ ಸಂಖ್ಯೆಗಳು : ೦೮೨೭೨- ೨೯೮೪೦೬, ೨೨೦೦೨೪. ಎಲ್ಲಾ ಮಾಜಿ ಸೈನಿಕರು ಮತ್ತು ಅವರ ಅವಲಂಭಿತರು ತಮ್ಮಲ್ಲಿ ಯಾರಿಗಾದರೂ ಕೊರೊನಾ ಸೋಂಕು ಇದ್ದಲ್ಲಿ ತಕ್ಷಣ ಇಸಿಹೆಚ್‌ಎಸ್ ಮಡಿಕೇರಿಗೆ ದೂರವಾಣಿಯ ಮೂಲಕ ತಿಳಿಸಬೇಕಾಗಿ ಇ.ಸಿ.ಹೆಚ್.ಎಸ್. ಅಧಿಕಾರಿ ತಿಳಿಸಿದ್ದಾರೆ.

ಕ್ಲಿನಿಲ್ ಮಾಹಿತಿ - ವೀರಾಜಪೇಟೆ

ವೀರಾಜಪೇಟೆ : ಹೆಚ್ಚುತ್ತಿರುವ ಕೊರೊನಾ ವೈರಸ್ ಕಾರಣ ಮತ್ತು ಸಾಮಾಜಿಕ ಅಂತರವನ್ನು ಗಮನದಲ್ಲಿಟ್ಟುಕೊಂಡು ದೀರ್ಘಕಾಲದ ಕಾಯಿಲೆಗಳನ್ನು ಹೊಂದಿರುವ ಇಸಿಹೆಚ್‌ಎಸ್ ಫಲಾನುಭವಿಗಳು ವೈದ್ಯರ ಪ್ರಿಸ್ಕಿçಪ್ಷನ್ ಆಧಾರದ ಮೇಲೆ ಜುಲೈ ೩೧ ರವರೆಗೆ ಔಷಧಿಗಳನ್ನು ಖರೀದಿಸಬಹುದು ಎಂದು ವೀರಾಜಪೇಟೆ ಇಸಿಹೆಚ್ ಪಾಲಿಕ್ಲಿನಿಕ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ವೈದ್ಯಕೀಯ ಚಿಕಿತ್ಸೆಗಾಗಿ ವೀಡಿಯೋ ಕರೆ ಮೂಲಕ (Sಇಊಂಖಿ ಂPP) ಸಮಾಲೋಚನೆ ನಡೆಸಲಾಗುವುದು ಮತ್ತು ಔಷಧಿಗಳನ್ನು ಸೂಚಿಸಲಾಗುವುದು.