ಪೊನ್ನಂಪೇಟೆ, ಏ. ೨೬: ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ಕೈಗೊಳ್ಳುವ ನಿಟ್ಟಿನಲ್ಲಿ ಕುಟ್ಟ ಪೊಲೀಸ್ ಠಾಣೆಯಲ್ಲಿ ಕುಟ್ಟ ವ್ಯಾಪ್ತಿಯ ವರ್ತಕರ ಸಭೆ ನಡೆಸಲಾಯಿತು. ವ್ಯಾಪಾರದ ಸಮಯದಲ್ಲಿ ಜನ ಗುಂಪು ಸೇರದಂತೆ ನೋಡಿಕೊಳ್ಳುವ ಸಲುವಾಗಿ ಅಂಗಡಿಯ ಮುಂಭಾಗ ೩ ಮೀಟರ್ ಅಂತರದಲ್ಲಿ ವೃತ್ತ ರಚಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುವು ಮಾಡಿಕೊಡುವಂತೆ ವರ್ತಕರಿಗೆ ತಿಳಿಸಲಾಯಿತು. ವ್ಯಾಪಾರದ ಸಮಯದಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಸಲಾಯಿತು. ಈ ಸಂದÀರ್ಭ ಕುಟ್ಟ ವೃತ್ತ ನಿರೀಕ್ಷಕ ಪರಶಿವ ಮೂರ್ತಿ, ಉಪ ನಿರೀಕ್ಷಕ ಚಂದ್ರಪ್ಪ, ಪೊಲೀಸ್ ಸಿಬ್ಬಂದಿ ಹಾಗೂ ಕುಟ್ಟ ಭಾಗದ ವರ್ತಕರು ಹಾಜರಿದ್ದರು.