ಮಡಿಕೇರಿ, ಏ. ೨೫: ಕೋವಿಡ್ ನಿಯಮ ಆದೇಶ ಪಾಲಿಸದವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಡಳಿತ ಎಚ್ಚರಿಸಿದೆ.
ಕೋವಿಡ್–೧೯ ಸೋಂಕಿನ ನಿಯಂತ್ರಣ ಸಂಬAಧ ಹಾಗೂ ಸಾರ್ವಜನಿಕ ಹಿತಾಸಕ್ತಿ ಯಿಂದ ಸಾರ್ವಜನಿಕ ಪ್ರದೇಶಗಳಲ್ಲಿ ಮತ್ತು ನಿಯಂತ್ರಿತ ಪ್ರದೇಶಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ಕ್ರಮಗಳು, ವಿವಿಧ ಮುಂಜಾಗ್ರತಾ ಮತ್ತು ವೈದ್ಯಕೀಯ ಕ್ರಮಗಳ ಬಗ್ಗೆ ಸರ್ಕಾರದಿಂದ ಮತ್ತು ಜಿಲ್ಲಾಡಳಿತ ದಿಂದ ಕಾಲಕಾಲಕ್ಕೆ ಆದೇಶಗಳನ್ನು ಹೊರಡಿಸಲಾಗುತ್ತಿದೆ. ಸರ್ಕಾರ, ಜಿಲ್ಲಾಡಳಿತ ಹೊರಡಿಸುವ ಆದೇಶಗಳನ್ನು ಕಡ್ಡಾಯವಾಗಿ ಪ್ರತಿಯೊಬ್ಬರೂ ಪಾಲಿಸಬೇಕಾಗಿದೆ. ಜಿಲ್ಲೆಯ ಕೆಲಭಾಗಗಳಲ್ಲಿ ಕೋವಿಡ್ ಶಿಷ್ಠಾಚಾರ ಸರಿಯಾಗಿ ಪಾಲನೆಯಾ ಗುತ್ತಿಲ್ಲ. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು ಇತ್ಯಾದಿ ಕ್ರಮಗಳನ್ನು ಪಾಲಿಸದಿರುವುದನ್ನು ಗಮನಿಸಲಾಗಿದೆ. ಅಲ್ಲದೆ ಅನುಮತಿಸಲಾದ ಚಟುವಟಿಕೆ ಗಳಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಸಾರಿಗೆ ವ್ಯವಸ್ಥೆಗಳಲ್ಲಿ ಮುಂತಾದ
ಕಡೆಗಳಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸ ದಿರುವುದು ಕಂಡು
ಬಂದಿದೆ ಎಂದು ಜಿಲ್ಲಾಡಳಿತ
ಪ್ರಕಟಣೆ ತಿಳಿಸಿದೆ.
(ಮೊದಲ ಪುಟದಿಂದ) ಕೋವಿಡ್ ನಿಯಂತ್ರಣ ಸಂಬAಧ ಸರ್ಕಾರ ಹಲವು ನಿಯಮ, ಮಾರ್ಗಸೂಚಿಗಳನ್ನು ಹೊರಡಿಸಿದ್ದು ಇದನ್ನು ಪಾಲಿಸದಿರುವವರ ವಿರುದ್ಧ ಅಥವಾ ಕೋವಿಡ್ ನಿಯಂತ್ರಣದಲ್ಲಿ ತೊಡಗಿರುವ ಯಾವುದೇ ಸಾರ್ವಜನಿಕ ನೌಕರರಿಗೆ ಅಡಚಣೆ ಅಥವಾ ಪ್ರತಿರೋಧ ವ್ಯಕ್ತಪಡಿಸುವ ಯಾವುದೇ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.
ಉಲ್ಲಂಘನೆಯು ‘ದಿ ಕರ್ನಾಟಕ ಎಪಿಡೆಮಿಕ್ ಡಿಸೀಸಸ್ ಆಕ್ಟ್, ೨೦೨೦’ರ ಕಲಂ ೫, ೬ ಹಾಗೂ ೮ರ ಅಡಿ ಸೂಚಿಸಿರುವಂತೆ ಅಪರಾಧವಾಗಿರುತ್ತದೆ ಹಾಗೂ ಕಾಯ್ದೆಯ ಕಲಂ ೯ರಡಿ ತಿಳಿಸಿದಂತೆ ಸಜೆ ಮತ್ತು ಜಾಮೀನು ರಹಿತ ( ಓoಟಿ ಃಚಿiಟಚಿbಟe) ಅಪರಾಧವಾಗಿರುತ್ತದೆ.
ಇದರೊಂದಿಗೆ ನಿಯಮ ಉಲ್ಲಂಘನೆಯ ವಿರುದ್ಧ ‘ದಿ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್, ೨೦೦೫’ ಮತ್ತು ‘ಭಾರತೀಯ ದಂಡ ಸಂಹಿತೆ’ ಅಡಿ ಸಹ ಕಾನೂನು ಕ್ರಮಕೈಗೊಳ್ಳಬಹುದಾಗಿರುತ್ತದೆ.
ಆದ್ದರಿಂದ, ಜಿಲ್ಲೆಯ ಪ್ರತಿಯೊಬ್ಬರೂ ಸಹ ಸರ್ಕಾರದ ನಿಯಮ ಮತ್ತು ಮಾರ್ಗಸೂಚಿಗಳನ್ನು ಪಾಲಿಸುತ್ತಾ, ಜಿಲ್ಲೆಯಲ್ಲಿ ಕೋವಿಡ್ – ೧೯ ನಿಯಂತ್ರಣ ಸಂಬAಧ ಕೈ ಜೋಡಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.