ಸುಂಟಿಕೊಪ್ಪ, ಏ. ೨೫: ಮದುವೆ ಮನೆಯಲ್ಲಿ ಸರಕಾರದ ಆದೇಶ ಪಾಲಿಸದ ಹಿನ್ನೆಲೆ ಅಧಿಕಾರಿಗಳು ಕುಟುಂಬದವರ ಮೇಲೆ ಕಾನೂನು ಕ್ರಮಕೈಗೊಂಡಿದ್ದಾರೆ.
ಕೆದಕಲ್ ಗ್ರಾಮ ಪಂಚಾಯಿತಿಯ ಭದ್ರಕಾಳಿ ದೇವಾಲಯದ ಸಮೀಪದ ವೈ.ಪಿ. ಪುಟ್ಟಯ್ಯ ಹಾಗೂ ಹರಿಣಾಕ್ಷಿ ಮನೆಯಲ್ಲಿ ವಿವಾಹ ಸಮಾರಂಭ ವನ್ನು ಆಯೋಜಿಸಲಾಗಿತ್ತು.
ಸರಕಾರದ ಯಾವುದೇ ನಿಯಮಗಳು ಪಾಲಿಸದೆ ೭೦ ರಿಂದ ೧೦೦ ಜನ ಸೇರಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಮದುವೆ ಹಾಗೂ ಚಪ್ಪರ ಊಟದ ವ್ಯವಸ್ಥೆ ಮಾಡಿಕೊಂಡು ಇದ್ದ ಸಂದರ್ಭ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರಾದ ಬಿ.ಎನ್. ಸತ್ಯನಾರಾಯಣ, ಹೆಚ್.ಕೆ. ಶಿವಪ್ಪ, ಡಾಫ್ನ ಡಿಕ್ರೂಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜ್ಶೇಖರ್, ಸತ್ಯನಾರಾಯಣ, ಹೆಚ್.ಕೆ. ಶಿವಪ್ಪ, ಡಾಫ್ನ ಡಿಕ್ರೂಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜ್ಶೇಖರ್, ಸುಂಟಿಕೊಪ್ಪ ಠಾಣಾಧಿಕಾರಿ ಪುನೀತ್, ಎಎಸ್ಐ ಶ್ರೀನಿವಾಸ್ ದಾಳಿ ನಡೆಸಿ ಕಾನೂನಾತ್ಮಕ ಕ್ರಮಕೈಗೊಂಡಿದ್ದಾರೆ.