ಮಡಿಕೇರಿ, ಏ. ೨೫: ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಮಾರಕ ಕೊರೊನಾ ಸೋಂಕು ತಡೆಗೆ ರಾಜ್ಯ ಸರಕಾರ ಕೈಗೊಂಡ ವಾರಾಂತ್ಯ ಕರ್ಫ್ಯೂಗೆ ಭಾನುವಾರ ಕೂಡ ಕೊಡಗಿನ ಜನ ಸಂಪೂರ್ಣ ಬೆಂಬಲ ನೀಡಿದರು. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ವೀರಾಜಪೇಟೆ, ಪೊನ್ನಂಪೇಟೆ, ಕುಶಾಲನಗರ, ಸೋಮವಾರಪೇಟೆ ತಾಲೂಕು ವ್ಯಾಪ್ತಿ ಸಂಪೂರ್ಣ ಸ್ತಬ್ಧವಾಗಿತ್ತು.

ಬೆಳಗ್ಗೆ ೬ ರಿಂದ ೧೦ ರ ತನಕ ಅಗತ್ಯ ವಸ್ತುಗಳ ಖರೀದಿಗೆ ವಿನಾಯಿತಿ ನೀಡಿದ್ದ ಹಿನ್ನೆಲೆ ಹಾಲು, ತರಕಾರಿ, ದಿನಪತ್ರಿಕೆ, ದಿನಸಿ, ಮಾಂಸ, ಮೀನು, ಹಣ್ಣು, ನ್ಯಾಯಬೆಲೆ ಅಂಗಡಿಗಳು ತೆರೆಯಲ್ಪಟ್ಟಿತ್ತು. ಉಳಿದಂತೆ ಎಲ್ಲ ರೀತಿಯ ಅಂಗಡಿಗಳು ಬಂದ್ ಆಗಿತ್ತು. ವೈದ್ಯಕೀಯ ಸೇವೆ, ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್ ಸೇವೆ ಯಥಾಸ್ಥಿಯಲ್ಲಿತ್ತು. ಬಾರ್‌ಗಳು ಬಂದ್ ಆಗಿದ್ದವು. ಭಾನುವಾರ ಆದ ಕಾರಣ ಮಾಂಸ, ಮೀನು ಖರೀದಿಗೆ ಜನ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಕಂಡು ಬಂತು. ನಿಗದಿಯಾಗಿದ್ದ ಮದುವೆ ಸೀಮಿತ ಬಂಧುಮಿತ್ರರ ಸಮಕ್ಷಮ ನಡೆಯಿತು. ಬಸ್ ಸಂಚಾರ ಕಡಿಮೆ ಇತ್ತು.

ಅಗತ್ಯ ವಸ್ತು ಖರೀದಿಗೆ ನಿಗದಿ ಮಾಡಿದ್ದ ಸಮಯ ಮೀರುತ್ತಿದ್ದಂತೆ ಪೊಲೀಸರು ಅಂಗಡಿ ಮುಂಗಟ್ಟು ಗಳನ್ನು ಮುಚ್ಚಿಸಿದರು. ಅನಗತ್ಯ ಸಂಚಾರವನ್ನು ತಡೆದರು. ಹೊಟೇಲ್ ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅನುಮತಿ ನೀಡಿದ ಹಿನ್ನೆಲೆ ಕೆಲ ಹೊಟೇಲ್‌ಗಳು ತೆರೆಯಲ್ಪಟ್ಟಿತ್ತು.

(ಮೊದಲ ಪುಟದಿಂದ)

ವೀರಾಜಪೇಟೆ: ವಾರಂತ್ಯದ ಕರ್ಫ್ಯೂ ಎರಡನೇ ದಿನದಂದು ವೀರಾಜಪೇಟೆ ಪಟ್ಟಣ ಪೂರ್ಣವಾಗಿ ಬಂದ್ ಆಗಿತ್ತು. ಅಗತ್ಯ ಸೇವಾ ಅಂಗಡಿಗಳು ಬೆಳಿಗ್ಗೆ ೬ ರಿಂದ ೧೦ರ ವರೆಗೆ ತೆರೆದಿದ್ದವು.

ಮಾಂಸಹಾರಿಗಳು ಕೋಳಿ ಹಾಗೂ ಮಾಂಸವನ್ನು ಮುಗಿ ಬಿದ್ದು ಖರೀದಿಸಿದ್ದುದು ಕಂಡುಬAತು. ಬೆಳಿಗ್ಗೆ ೧೦ ಗಂಟೆಯ ನಂತರ ಎಲ್ಲಾ ವ್ಯವಹಾರಗಳಿಗೆ ಪೊಲೀಸರು ಕಡಿವಾಣ ಹಾಕಿದ್ದರಿಂದ ಮುಖ್ಯ ರಸ್ತೆಯಲ್ಲಿ ಜನ ಸಂಚಾರ ವಿರಳವಾಗಿತ್ತು. ಪಟ್ಟಣದಲ್ಲಿ ಆಟೋ ರಿಕ್ಷಾಗಳು, ಸರಕಾರಿ ಹಾಗೂ ಖಾಸಗಿ ಬಸ್‌ಗಳು ಸಂಚರಿಸಲಿಲ್ಲ. ತುರ್ತು ಆರೋಗ್ಯ ಸೇವೆಗಾಗಿ ಸಾರ್ವಜನಿಕ ಆಸ್ಪತ್ರೆ ಹಾಗೂ ಪಟ್ಟಣ ಪಂಚಾಯಿತಿಯಲ್ಲಿ ಆ್ಯಂಬ್ಯುಲೆನ್ಸ್ ವಾಹನ ವ್ಯವಸ್ಥೆಗೊಳಿಸಲಾಗಿತ್ತು.

ವೀರಾಜಪೇಟೆ ಖಾಸಗಿ ಬಸ್ ನಿಲ್ದಾಣ, ಮುಖ್ಯ ರಸ್ತೆ, ಗೋಣಿಕೊಪ್ಪ ರಸ್ತೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ ಮೂರ್ನಾಡು ರಸ್ತೆ, ಎಲ್ಲ ಕಡೆಗಳಲ್ಲಿ ಪೂರ್ಣ ಬಂದ್ ಆಗಿತ್ತು. ಸಮುಚ್ಚಯ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳು ಪಟ್ಟಣದ ವಿವಿಧೆಡೆಗಳಲ್ಲಿ ಬೆಳಗಿನಿಂದಲೇ ಗಸ್ತು ತಿರುಗುತ್ತಿದ್ದುದರಿಂದ ಪಟ್ಟಣದಲ್ಲಿ ಅನಾವಶ್ಯಕ ಜನ ಸಂಚಾರವಿರಲಿಲ್ಲ. ಬೆರಳಣಿಕೆಯ ಸ್ಥಳೀಯ ಕಾರ್ಮಿಕರು ಕಟ್ಟಡ ಕಾಮಗಾರಿಯಲ್ಲಿ ನಿರತರಾಗಿದ್ದರು.

ತಾಲೂಕು ಕಚೇರಿಯ ಫ್ಲೆöÊಯಿಂಗ್ ಸ್ಕಾ÷್ವಡ್‌ನ ಅಧಿಕಾರಿ ಪ್ರದೀಪ್ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎನ್.ಪಿ. ಹೇಮ್‌ಕುಮಾರ್ ಪಟ್ಟಣದ ಆಯ್ದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚೆಯ್ಯಂಡಾಣೆ: ಚೆಯ್ಯಂಡಾಣೆ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ೬ ಗಂಟೆಯಿAದ ೧೦ ಗಂಟೆವರೆಗೆ ಮಾತ್ರ ತೆರೆದು ವಹಿವಾಟು ನಡೆಸಿದ್ದು, ನಂತರ ಅಂಗಡಿ ಮುಗ್ಗಟ್ಟು ಮುಚ್ಚಿ ಸಂಪೂರ್ಣ ಬಂದ್ ಮಾಡಲಾಗಿತ್ತು.

ಮುಳ್ಳೂರು: ಕೊಡ್ಲಿಪೇಟೆಯಲ್ಲಿ ವಾರದ ಸಂತೆಯನ್ನು ರದ್ದುಗೊಳಿಸುವ ಮೂಲಕ ಭಾನುವಾರದ ಕರ್ಫ್ಯೂಗೆ ವರ್ತಕರು ಮತ್ತು ಸಾರ್ವಜನಿಕರಿಂದ ಸ್ಪಂದನೆ ದೊರೆಯಿತು. ಭಾನುವಾರ ಬೆಳಿಗ್ಗೆಯಿಂದಲೆ ಕೊಡ್ಲಿಪೇಟೆ ಪಟ್ಟಣದಲ್ಲಿ ವರ್ತಕರು ಅಂಗಡಿ-ಮುAಗಟ್ಟು, ಹೊಟೇಲ್, ಕ್ಯಾಂಟೀನ್‌ಗಳನ್ನು ಬಂದ್‌ಗೊಳಿಸಿದ್ದರು. ಮೆಡಿಕಲ್ ಶಾಪ್ ಹೊರತು ಪಡಿಸಿದಂತೆ ಬೇರೆ ಯಾವುದೆ ಸೇವೆಗಳಿರಲಿಲ್ಲ. ಖಾಸಗಿ, ಸರಕಾರಿ ಬಸ್ಸು ಸಂಚಾರ ಸ್ಥಗಿತಗೊಂಡಿತು. ಖಾಸಗಿ ವಾಹನಗಳ ಓಡಾಟ ತೀರ ವೀರಳವಾಗಿತ್ತು. ಸಾರ್ವಜನಿಕರು ಪಟ್ಟಣದತ್ತ ಸುಳಿಯಲಿಲ್ಲ.

ಶನಿವಾರಸಂತೆ ಪಟ್ಟಣ ಸೇರಿದಂತೆ ಹೋಬಳಿಯಾದ್ಯಾಂತ ಭಾನುವಾರದ ವೀಕೆಂಡ್ ಕರ್ಫ್ಯೂಗೆ ಉತ್ತಮ ಸ್ಪಂದನ ದೊರೆಯಿತು.

ಸಿದ್ದಾಪುರ: ಸಿದ್ದಾಪುರದಲ್ಲಿ ಸಂತೆ ದಿನವಾದ ಕಾರಣ ಸಿದ್ದಾಪುರ ಸುತ್ತಮುತ್ತಲಿನ ಕಾಫಿತೋಟದ ಕಾರ್ಮಿಕರು ಹಾಗೂ ಗ್ರಾಮಸ್ಥರು ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಆಗಮಿಸಿದ್ದರು. ವಾಹನಗಳ ಸಂಚಾರ, ಜನರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎನ್.ಪಿ. ಹೇಮ್‌ಕುಮಾರ್ ಪಟ್ಟಣದ ಆಯ್ದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚೆಯ್ಯಂಡಾಣೆ: ಚೆಯ್ಯಂಡಾಣೆ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ೬ ಗಂಟೆಯಿAದ ೧೦ ಗಂಟೆವರೆಗೆ ಮಾತ್ರ ತೆರೆದು ವಹಿವಾಟು ನಡೆಸಿದ್ದು, ನಂತರ ಅಂಗಡಿ ಮುಗ್ಗಟ್ಟು ಮುಚ್ಚಿ ಸಂಪೂರ್ಣ ಬಂದ್ ಮಾಡಲಾಗಿತ್ತು.

ಮುಳ್ಳೂರು: ಕೊಡ್ಲಿಪೇಟೆಯಲ್ಲಿ ವಾರದ ಸಂತೆಯನ್ನು ರದ್ದುಗೊಳಿಸುವ ಮೂಲಕ ಭಾನುವಾರದ ಕರ್ಫ್ಯೂಗೆ ವರ್ತಕರು ಮತ್ತು ಸಾರ್ವಜನಿಕರಿಂದ ಸ್ಪಂದನÉ ದೊರೆಯಿತು. ಭಾನುವಾರ ಬೆಳಿಗ್ಗೆಯಿಂದಲೆ ಕೊಡ್ಲಿಪೇಟೆ ಪಟ್ಟಣದಲ್ಲಿ ವರ್ತಕರು ಅಂಗಡಿ-ಮುAಗಟ್ಟು, ಹೊಟೇಲ್, ಕ್ಯಾಂಟೀನ್‌ಗಳನ್ನು ಬಂದ್‌ಗೊಳಿಸಿದ್ದರು. ಮೆಡಿಕಲ್ ಶಾಪ್ ಹೊರತು ಪಡಿಸಿದಂತೆ ಬೇರೆ ಯಾವುದೆ ಸೇವೆಗಳಿರಲಿಲ್ಲ. ಖಾಸಗಿ, ಸರಕಾರಿ ಬಸ್ಸು ಸಂಚಾರ ಸ್ಥಗಿತಗೊಂಡಿತು. ಖಾಸಗಿ ವಾಹನಗಳ ಓಡಾಟ ತೀರ ವೀರಳವಾಗಿತ್ತು. ಸಾರ್ವಜನಿಕರು ಪಟ್ಟಣದತ್ತ ಸುಳಿಯಲಿಲ್ಲ.

ಶನಿವಾರಸಂತೆ ಪಟ್ಟಣ ಸೇರಿದಂತೆ ಹೋಬಳಿಯಾದ್ಯಾಂತ ಭಾನುವಾರದ ವೀಕೆಂಡ್ ಕರ್ಫ್ಯೂಗೆ ಉತ್ತಮ ಸ್ಪಂದನ ದೊರೆಯಿತು.

ಸಿದ್ದಾಪುರ: ಸಿದ್ದಾಪುರದಲ್ಲಿ ಸಂತೆ ದಿನವಾದ ಕಾರಣ ಸಿದ್ದಾಪುರ ಸುತ್ತಮುತ್ತಲಿನ ಕಾಫಿತೋಟದ ಕಾರ್ಮಿಕರು ಹಾಗೂ ಗ್ರಾಮಸ್ಥರು ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಆಗಮಿಸಿದ್ದರು. ವಾಹನಗಳ ಸಂಚಾರ, ಜನರ ಕುಶಾಲನಗರದ ಹೋಬಳಿ ವ್ಯಾಪ್ತಿಯ ಮುಳ್ಳುಸೋಗೆ, ಕೂಡಿಗೆ, ಕೂಡುಮಂಗಳೂರು, ಹೆಬ್ಬಾಲೆ, ಶಿರಂಗಾಲ, ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮನೆಯಿಂದ ಹೊರ ಬಾರದೆ ಆದೇಶ ಪಾಲಿಸಿದರು.

ಹತ್ತು ಗಂಟೆಯ ನಂತರ ಅನಾವಶ್ಯಕವಾಗಿ ಸಂಚರಿಸುತ್ತಿದ್ದವರಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದರು.

ಸುಂಟಿಕೊಪ್ಪ: ವಾರಾಂತ್ಯ ಕರ್ಪ್ಯೂಗೆ ಸುಂಟಿಕೊಪ್ಪದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಭಾನುವಾರದ ಸಂತೆ ರದ್ದುಗೊಂಡಿತ್ತು. ಗ್ರಾಹಕರು ಅಧಿಕ ಸಂಖ್ಯೆಯಲ್ಲಿ ಬೆಳಿಗ್ಗೆ ೬ ಗಂಟೆಯಿAದಲ್ಲೇ ತರಕಾರಿ ಹಾಗೂ ದಿನಸಿ ಸಾಮಗ್ರಿಗಳನ್ನು ಖರೀದಿಸಿದರು. ತರಕಾರಿಗಳ ಬೆಲೆ ಗಗನಕ್ಕೇರಿದ್ದು ಗ್ರಾಹಕರು ಕಕ್ಕಬಿಕ್ಕಿಯಾದರು.

ಮೈಸೂರು, ಹಾಸನ, ಕೊಣನೂರು, ಪಿರಿಯಾಪಟ್ಟಣ, ಹುಣಸೂರು ಭಾಗಗಳಿಂದ ತರಕಾರಿಗಳು ಬಾರದೆ ಇರುವುದರಿಂದ ಬೆಲೆ ಗಗನಕ್ಕೇರಲು ಕಾರಣವೆನ್ನಲಾಗಿದೆ.

ಹಸಿಮೀನು, ಕೋಳಿ, ಕುರಿ ಮಾಂಸ ಖರೀದಿಗೆ ಅಂಗಡಿ ಎದುರು ಮಾಂಸ ಪ್ರಿಯರು ಸರತಿ ಸಾಲಿನಲ್ಲಿ ನಿಂತಿದ್ದರು.