(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಏ. ೨೫: ಜಿಲ್ಲಾ ಪಂಚಾಯತ್‌ನ ಹಾಲಿ ಅಧ್ಯಕ್ಷ - ಉಪಾಧ್ಯಕ್ಷರು ಸೇರಿದಂತೆ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಳ್ಳಲು ಇದೀಗ ಕೇವಲ ಎರಡು ದಿನಗಳಷ್ಟೆ ಬಾಕಿ ಉಳಿದಿದೆ. ಐದು ವರ್ಷಗಳ ಅಧಿಕಾರಾವಧಿ ಮುಕ್ತಾಯದ ಹಂತ ತಲುಪಿದ್ದು, ತಾ. ೨೮ ರಂದು ಹಾಲಿ ಸದಸ್ಯರ ಅವಧಿ ಪೂರ್ಣಗೊಳ್ಳುವದರೊಂದಿಗೆ ಎಲ್ಲರೂ ಮಾಜಿಗಳಾಗಲಿದ್ದಾರೆ. ಈ ಹಿಂದೆ ೨೦೧೬ ರಲ್ಲಿ ಫೆಬ್ರವರಿ ತಿಂಗಳಲ್ಲಿ ಜಿಲ್ಲಾ ಪಂಚಾಯಿತಿಗೆ ಚುನಾವಣೆ ನಡೆದಿದ್ದು, ತಾ. ೨೩ ರಂದು ಫಲಿತಾಂಶ ಹೊರಬಿದ್ದಿತ್ತು. ಇದಾದ ಬಳಿಕ ಅಧ್ಯಕ್ಷ - ಉಪಾಧ್ಯಕ್ಷರ ಮೀಸಲಾತಿ ನಿಗದಿ ಪ್ರಕ್ರಿಯೆ ಸರಕಾರದ ಮೂಲಕ ನಡೆದು ಏಪ್ರಿಲ್ ೨೮ ರಂದು ಆಡಳಿತ ಮಂಡಳಿ ಅಧಿಕೃತವಾಗಿ ರಚನೆಯಾಗಿತ್ತು. ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಜಿ.ಪಂ. ಆಡಳಿತ ಮಂಡಳಿ ರಚನೆಗೊಂಡಿದ್ದು, ಸರಕಾರ ಜಾರಿಗೆ ತಂದ ಹೊಸ ನಿಯಮದಂತೆ ಅಧ್ಯಕ್ಷ - ಉಪಾಧ್ಯಕ್ಷರ ಅಧಿಕಾರಾವಧಿ ಸಂಪೂರ್ಣ ಐದು ವರ್ಷಗಳ ಅವಧಿಯದ್ದಾಗಿತ್ತು.
ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ೨೯ ಸ್ಥಾನದ ಪೈಕಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಪಕ್ಷ ಅಧಿಕಾರ ಹಿಡಿದಿತ್ತು. ಮೀಸಲಾತಿಯ ಅವಕಾಶದಂತೆ ಕಡಗದಾಳು ಕ್ಷೇತ್ರದ ಅಭ್ಯರ್ಥಿ ಬಿ.ಎ. ಹರೀಶ್ ಹಾಗೂ ಶಾಂತಳ್ಳಿ ಕ್ಷೇತ್ರದ ಅಭ್ಯರ್ಥಿ ಲೋಕೇಶ್ವರಿ ಗೋಪಾಲ್ ಅವರುಗಳು ಅಧ್ಯಕ್ಷ, ಉಪಾಧ್ಯಕ್ಷರಾಗಿ ನೇಮಕಗೊಂಡು ಈತನಕ ಅಧಿಕಾರ ನಡೆಸಿದ್ದಾರೆ.
ಕೊಡಗು ಸೇರಿದಂತೆ ರಾಜ್ಯದಲ್ಲಿನ ಇತರ ಜಿ.ಪಂ.ನ ಅಧಿಕಾರ ಮುಕ್ತಾಯಗೊಳ್ಳುತ್ತಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ನಡೆಯುವದು ಅಸಾಧ್ಯವಾಗಿದೆ. ಜಿ.ಪಂ.ನೊAದಿಗೆ ಸದ್ಯದಲ್ಲೇ ತಾಲೂಕು ಪಂಚಾಯಿತಿಯ ಅಧಿಕಾರಾವಧಿಯೂ ಮುಕ್ತಾಯಗೊಳ್ಳಲಿದೆ. ಪ್ರಸಕ್ತ ಕೊರೊನಾ ಪರಿಸ್ಥಿತಿಯಿಂದಾಗಿ ಜಿ.ಪಂ. ಹಾಗೂ ತಾ.ಪಂ.ಗಳ ಚುನಾವಣೆಯನ್ನು ಸರಕಾರ ಬಹುತೇಕ ಮುಂದೂಡಿದೆ. ಜತೆಯಲ್ಲೇ ಕೊಡಗಿನಲ್ಲಿ
ಮಳೆಗಾಲವೂ ಪ್ರಾರಂಭವಾಗಲಿರುವದರಿAದ ಬಹುಶಃ
ಮಳೆಗಾಲದ ನಂತರವಷ್ಟೆ ಕೊಡಗಿನಲ್ಲಿ ಚುನಾವಣೆ ನಡೆಸುವದೂ ಅನಿವಾರ್ಯವಾಗಲಿದೆ.
ಸರಕಾರಕ್ಕೆ ಮಾಹಿತಿ
ಜಿಲ್ಲಾ ಪಂಚಾಯಿತಿಯ ಅಧಿಕಾರಾವಧಿ ಪೂರ್ಣಗೊಳ್ಳುತ್ತಿರುವ ಬಗ್ಗೆ ಈಗಾಗಲೇ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಕಚೇರಿಯ ಮೂಲಕ ಸರಕಾರಕ್ಕೆ ವರದಿ ನೀಡಲಾಗಿದೆ. ಈ ಬಗ್ಗೆ ಪಂಚಾಯತ್ ರಾಜ್ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಮಾಹಿತಿ ರವಾನಿಸಲಾಗಿದೆ.
(ಮೊದಲ ಪುಟದಿಂದ) ಕೋವಿಡ್ ನಿಯಂತ್ರಣ ಸಂಬAಧ ಸರ್ಕಾರ ಹಲವು ನಿಯಮ, ಮಾರ್ಗಸೂಚಿಗಳನ್ನು ಹೊರಡಿಸಿದ್ದು ಇದನ್ನು ಪಾಲಿಸದಿರುವವರ ವಿರುದ್ಧ ಅಥವಾ ಕೋವಿಡ್ ನಿಯಂತ್ರಣದಲ್ಲಿ ತೊಡಗಿರುವ ಯಾವುದೇ ಸಾರ್ವಜನಿಕ ನೌಕರರಿಗೆ ಅಡಚಣೆ ಅಥವಾ ಪ್ರತಿರೋಧ ವ್ಯಕ್ತಪಡಿಸುವ ಯಾವುದೇ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.
ಉಲ್ಲಂಘನೆಯು ‘ದಿ ಕರ್ನಾಟಕ ಎಪಿಡೆಮಿಕ್ ಡಿಸೀಸಸ್ ಆಕ್ಟ್, ೨೦೨೦’ರ ಕಲಂ ೫, ೬ ಹಾಗೂ ೮ರ ಅಡಿ ಸೂಚಿಸಿರುವಂತೆ ಅಪರಾಧವಾಗಿರುತ್ತದೆ ಹಾಗೂ ಕಾಯ್ದೆಯ ಕಲಂ ೯ರಡಿ ತಿಳಿಸಿದಂತೆ ಸಜೆ ಮತ್ತು ಜಾಮೀನು ರಹಿತ ( ಓoಟಿ ಃಚಿiಟಚಿbಟe) ಅಪರಾಧವಾಗಿರುತ್ತದೆ.
ಇದರೊಂದಿಗೆ ನಿಯಮ ಉಲ್ಲಂಘನೆಯ ವಿರುದ್ಧ ‘ದಿ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್, ೨೦೦೫’ ಮತ್ತು ‘ಭಾರತೀಯ ದಂಡ ಸಂಹಿತೆ’ ಅಡಿ ಸಹ ಕಾನೂನು ಕ್ರಮಕೈಗೊಳ್ಳಬಹುದಾಗಿರುತ್ತದೆ.
ಆದ್ದರಿಂದ, ಜಿಲ್ಲೆಯ ಪ್ರತಿಯೊಬ್ಬರೂ ಸಹ ಸರ್ಕಾರದ ನಿಯಮ ಮತ್ತು ಮಾರ್ಗಸೂಚಿಗಳನ್ನು ಪಾಲಿಸುತ್ತಾ, ಜಿಲ್ಲೆಯಲ್ಲಿ ಕೋವಿಡ್ – ೧೯ ನಿಯಂತ್ರಣ ಸಂಬAಧ ಕೈ ಜೋಡಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.