ಸೋಮವಾರಪೇಟೆ, ಏ. ೨೫: ಕೊರೊನಾ ವೈರಸ್ನ ವ್ಯಾಪಕ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೋಮವಾರದಂದು (ಇಂದು) ನಡೆಯಬೇಕಿದ್ದ ಸೋಮವಾರಪೇಟೆ ಸಂತೆಯನ್ನು ಪಟ್ಟಣ ಪಂಚಾಯಿತಿ ರದ್ದುಗೊಳಿಸಿರುವ ಹಿನ್ನೆಲೆ, ಭಾನುವಾರದಂದು ವರ್ತಕರಿಂದ ಗಿಜಿಗುಡುತ್ತಿದ್ದ ಮಾರ್ಕೆಟ್ ಬಿಕೋ ಎನ್ನುತ್ತಿತ್ತು.
ಈವರೆಗೆ ನಡೆಯುತ್ತಿದ್ದ ಸೋಮವಾರದ ಸಂತೆಗೆ ಭಾನುವಾರವೇ ವರ್ತಕರು ಸಿದ್ದರಾಗುತ್ತಿದ್ದರು. ಹೊರಭಾಗದಿಂದ ಆಗಮಿಸುವ ವರ್ತಕರೊಂದಿಗೆ ಸ್ಥಳೀಯ ವರ್ತಕರು ತಮ್ಮ ತಮ್ಮ ಸ್ಥಳದಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಸಿದ್ಧತೆ ನಡೆಸುತ್ತಿದ್ದರು.
ಬೆಲ್ಲ, ಕಾಯಿ, ದಿನಸಿ ಪದಾರ್ಥ, ಬಟ್ಟೆ, ತರಕಾರಿ, ತಿಂಡಿ ತಿನಿಸು ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಭಾನುವಾರದಂದೇ ಜೋಡಿಸಿಟ್ಟು, ಸಂಜೆಯಿAದ ರಾತ್ರಿ ೮ ಗಂಟೆಯವರೆಗೂ ವ್ಯಾಪಾರ ನಡೆಸುತ್ತಿದ್ದರು. ಸೋಮವಾರದಂದು ಬೆಳಿಗ್ಗೆ ೬ ಗಂಟೆಯಿAದಲೇ ಸಂತೆ ತೆರೆದುಕೊಳ್ಳುವ ಹಿನ್ನೆಲೆ ಹಲವಷ್ಟು ವರ್ತಕರು ಮಾರ್ಕೆಟ್ನಲ್ಲಿಯೇ ಮಲಗುತ್ತಿದ್ದರು.
ಇದೀಗ ವಾರಾಂತ್ಯದ ಕರ್ಫ್ಯೂ ಹಿನ್ನೆಲೆ ಭಾನುವಾರದಂದು ಯಾವುದೇ ಚಟುವಟಿಕೆಗೆ ಅವಕಾಶವಿಲ್ಲದಿರುವುದು ಹಾಗೂ ಸೋಮವಾರದ ಸಂತೆಯನ್ನು ಪಟ್ಟಣ ಪಂಚಾಯಿತಿ ರದ್ದುಗೊಳಿಸಿರುವ ಹಿನ್ನೆಲೆ ಭಾನುವಾರದಂದು ಪಟ್ಟಣದ ಮಾರ್ಕೆಟ್ ವರ್ತಕರು, ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿತ್ತು.
ವಾರಾಂತ್ಯ ಕರ್ಫ್ಯೂ ಯಶಸ್ವಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದ ವಾರಾಂತ್ಯದ ಕರ್ಫ್ಯೂ ಸೋಮವಾರಪೇಟೆಯಲ್ಲಿ ಯಶಸ್ವಿಯಾಯಿತು. ಶನಿವಾರ ಹಾಗೂ ಭಾನುವಾರದಂದು ಪಟ್ಟಣದಲ್ಲಿ ಎಂದಿನ ಜನದಟ್ಟಣೆ ಕಂಡುಬರಲಿಲ್ಲ. ಭಾನುವಾರದಂದು ಕೆಲವೊಂದು ದಿನಸಿ, ಹಣ್ಣು ಹಂಪಲು ಅಂಗಡಿಗಳು ತೆರೆದಿದ್ದರೂ ಸಹ ಗ್ರಾಹಕರಿಲ್ಲದೇ ಹೆಚ್ಚಿನ ವ್ಯಾಪಾರ ನಡೆಯಲಿಲ್ಲ. ಆದರೆ ಪಟ್ಟಣದ ಮೀನು ಹಾಗೂ ಮಾಂಸದAಗಡಿಗಳಲ್ಲಿ ಬೆಳಿಗ್ಗೆ ೬ ಗಂಟೆಯಿAದ ೧೦ಗಂಟೆಯವರೆಗೂ ಭರ್ಜರಿ ವ್ಯಾಪಾರ ನಡೆಯಿತು.
ಸಾರ್ವಜನಿಕರು ತರಕಾರಿ ದಿನಸಿಗಳಿಗಿಂತ ಮೀನು-ಮಾಂಸದAಗಡಿಗಳಲ್ಲಿ ಹೆಚ್ಚಾಗಿ ಕಂಡುಬAದರು. ಭಾನುವಾರದಂದು ಬೆಳಿಗ್ಗೆಯಿಂದ ಸಂಜೆಯವರೆಗೂ ನಡೆಯುತ್ತಿದ್ದ ವ್ಯಾಪಾರದ ಶೇಕಡ ೭೦ರಷ್ಟನ್ನು ಕೇವಲ ೬ ರಿಂದ ೧೦ ಗಂಟೆಯ ಒಳಗೆ ಮಾಡಲಾಗಿದೆ. ಅಂಗಡಿಯಲ್ಲಿ ಮಾಂಸದ ವ್ಯಾಪಾರ ಜೋರಾಗಿತ್ತು ಎಂದು ಪಟ್ಟಣದ ಕೋಳಿ ಅಂಗಡಿಯ ವ್ಯಾಪಾರಿ ಅಸ್ಲಾಂ ಅಭಿಪ್ರಾಯಿಸಿದರು.
ಅಂಗಡಿಗೆ ಆಗಮಿಸಿದ ಪ್ರತಿಯೊಬ್ಬರಿಗೂ ಮಾಸ್ಕ್ ಧರಿಸುವಂತೆ ತಿಳಿ ಹೇಳಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸಿದ್ದೇವೆ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಎಲ್ಲರೂ ಕೈಜೋಡಿಸಬೇಕು ಎಂದು ಅಸ್ಲಾಂ ಮನವಿ ಮಾಡಿದರು.