ಕೂಡಿಗೆ, ಏ. ೨೫: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಬೂತ್ ಸಮಿತಿ ವತಿಯಿಂದ ಬಿ.ಜೆ.ಪಿ. ಸಂಸ್ಥಾಪನಾ ದಿನವನ್ನು ಗ್ರಾಮದ ರಾಮಮಂದಿರ ಸಭಾಂಗಣದಲ್ಲಿ ನಡೆಸಲಾಯಿತು. ತಾಲೂಕು ಬಿಜೆಪಿ ಉಪಾಧ್ಯಕ್ಷ ಕೆ. ವರದ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಬಿಜೆಪಿ ಸಂಸ್ಥಾಪನಾ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಈ ಸಂದರ್ಭ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಬಿಜೆಪಿ ಬೂತ್ ಅಧ್ಯಕ್ಷ ಆರ್. ಕೃಷ್ಣ ದಿನದ ಮಹತ್ವ ಮತ್ತು ಸಂಘಟನೆಯ ಬಗ್ಗೆ ಮಾತನಾಡಿದರು. ಈ ಸಂದರ್ಭ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಎಂ. ಚಂದ್ರಶೇಖರ್, ಗೌರಮ್ಮ, ಗ್ರಾಮದ ಪ್ರಮುಖರಾದ ಸಜೀಶ್, ನಂದ, ಕಿರಣ್, ಕುಮಾರ್, ಜಯಂತ್, ಕೃಷ್ಣಪ್ಪ, ಈಶ್ವರ, ತೇಜುಕುಮಾರ್, ಮೋನಿಕಾ, ಯಸೀಕಾ ಸೇರಿದಂತೆ ಅನೇಕ ಬಿಜೆಪಿ ಪ್ರಮುಖರು ಭಾಗವಹಿಸಿದ್ದರು.ಗುಡ್ಡೆಹೊಸೂರು: ಗುಡ್ಡೆಹೊಸೂರು ಶಕ್ತಿ ಕೇಂದ್ರ ಮತ್ತು ಮಾದಾಪಟ್ಟಣ, ಗುಡ್ಡೆಹೊಸೂರು, ಬಸವನಹಳ್ಳಿ, ಬೆಟ್ಟಗೇರಿ, ಅತ್ತೂರು ಬೂತ್ ವತಿಯಿಂದ ಬಿ.ಜೆ.ಪಿ ಸ್ಥಾಪನಾ ದಿನ ಆಚರಣೆ ಮಾಡಲಾಯಿತು.
ಈ ಸಂದರ್ಭ ಎಲ್ಲಾ ವಾರ್ಡ್ಗಳ ಪಕ್ಷದ ಪ್ರಮುಖರ ಮನೆಯ ಮೇಲೆ ಪಕ್ಷದ ಭಾವುಟವನ್ನು ಹಾರಿಸಲಾಯಿತು. ಈ ಸಂದರ್ಭ ಜಿಲ್ಲಾ ಬಿ.ಜೆ.ಪಿ. ಕಾರ್ಯದರ್ಶಿ ಪುಷ್ಪ ನಾಗೇಶ್, ಹಿಂದುಳಿದ ವರ್ಗದ ಜಿಲ್ಲಾ ಕಾರ್ಯದರ್ಶಿ ಬಿ.ವಿ. ಸತೀಶ್, ಯುವ ಮೋರ್ಚಾದ ಉಪಾಧ್ಯಕ್ಷ ಪ್ರವೀಣ್, ಶಕ್ತಿ ಕೇಂದ್ರದ ಪ್ರಮುಖರಾದ ಪ್ರವೀಣ್, ಕುಶಾಲಪ್ಪ, ನಿತ್ಯನಂದ ಕುಡೆಕ್ಕಲ್, ಸಹ ಪ್ರಮುಖರಾದ ಕೇಶವ, ಪ್ರದೀಪ್, ಪಂಚಾಯಿತಿ ಅಧ್ಯಕ್ಷೆ ನಂದಿನಿ, ಬೂತ್ ಅಧ್ಯಕ್ಷರಾದ ಸುರೇಶ್, ಮಹೇಶ್, ಎಂ.ಆರ್. ಮಾದಪ್ಪ, ರವಿ, ಮನು, ಜಯಣ್ಣ, ಪವನ್ ಮುಂತಾದವರು ಹಾಜರಿದ್ದರು.