ನಾಪೋಕ್ಲು, ಏ. ೨೪: ನಾಪೋಕ್ಲು-ವೀರಾಜಪೇಟೆಯ ಮುಖ್ಯ ರಸ್ತೆಯ ಕೊಳಕೇರಿ ಬಳಿಯಲ್ಲಿ ರಸ್ತೆಗಳು ಗುಂಡಿ ಬಿದ್ದು ಕೆರೆಯಂತಾಗಿದ್ದು ಇಲ್ಲಿ ಕೋಣಗಳು ತಮ್ಮ ದಣಿವಾರಿಸಿಕೊಳ್ಳುತ್ತಿವೆ. ಈ ರಸ್ತೆಯಲ್ಲಿ ಡಾಂಬರೀಕರಣಕ್ಕಿAತ ಗುಂಡಿಗಳೇ ಜಾಸ್ತಿಯಾಗಿದ್ದು ಜನರಿಗೆ ಮತ್ತು ವಾಹನಗಳಿಗೆ ಚಲಿಸಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯನ್ನು ಇಲ್ಲಿನ ಯುವಕರು ಈ ಹಿಂದೆ ಗುಂಡಿ ಮುಚ್ಚಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದರು ಮಳೆಯಿಂದಾಗಿ ಗುಂಡಿಯಲ್ಲಿ ನೀರು ತುಂಬಿ ಚಲಿಸಲಾಗದ ಸ್ಥಿತಿಯಲ್ಲಿದೆ.

ಆಟೋ ರಿಕ್ಷಾಗಳು ಬಾಡಿಗೆಗೆ ಬರಲು ಕೂಡ ಹಿಂಜರಿಯುತ್ತಿದ್ದು, ಲೋಕೋಪಯೋಗಿ ಇಲಾಖೆ ಕೂಡಲೇ ರಸ್ತೆಯನ್ನು ಡಾಂಬರೀಕರಣಗೊಳಿಸಿ ಅನುಕೂಲ ಮಾಡಿಕೊಡಬೇಕು ಎಂದು ಈ ವಿಭಾಗದ ನಾಗರಿಕರು ಪತ್ರಿಕೆಯ ಮೂಲಕ ಕೋರಿದ್ದಾರೆ.