ಕೂಡಿಗೆ, ಏ. ೨೪: ಕುಶಾಲನಗರ ತಾಲೂಕು ವ್ಯಾಪ್ತಿಯ ಕೂಡಿಗೆ, ಕೂಡುಮಂಗಳೂರು, ಹೆಬ್ಬಾಲೆ, ತೊರೆನೂರು, ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಮಳೆ ಬೀಳುತ್ತಿರುವ ಹಿನ್ನೆಲೆ ಭೂಮಿಯು ಹದವಾಗಿದ್ದು ಭೂಮಿಯ ಉಳುಮೆಗೆ ಈ ಭಾಗದ ರೈತರು ಸಿದ್ಧರಾಗಿದ್ದಾರೆ. ಈ ವ್ಯಾಪ್ತಿಯ ರೈತರು ಮುಂಗಾರು ಬೆಳೆಯಾಗಿ ಹೆಚ್ಚು ಜೋಳವನ್ನು ಬೆಳೆಯುತ್ತಾರೆ. ಅಲ್ಲದೆ ಈಗಾಗಲೇ ಹೆಚ್ಚು ಮಳೆ ಬಿದ್ದಿರುವುದರಿಂದ ಎತ್ತುಗಳಿಂದ ಮತ್ತು ಟ್ರಾö್ಯಕ್ಟರ್ ಮೂಲಕ ಉಳುಮೆ ಮಾಡಿ ಮುಂದಿನ ಹಂತಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಹದಗೊಳಿಸಿದ ಭೂಮಿಯಲ್ಲಿ ಸಿಹಿಗೆಣಸು, ಕೆಸ, ಶುಂಠಿ ಸೇರಿದಂತೆ ಬೇರೆ ಬೇರೆ ಬೆಳೆಗಳನ್ನು ಬೆಳೆಯಲು ಸಿದ್ಧರಾಗುತ್ತಿದ್ದಾರೆ.