ಸೋಮವಾರಪೇಟೆ,ಏ.೨೪: ಸೋಮವಾರಪೇಟೆ ವಕೀಲರ ಸಂಘದ ಅಧ್ಯಕ್ಷರಾಗಿ ಹಿರಿಯ ವಕೀಲ, ನೋಟರಿ ಕೆ.ಎಸ್. ಪದ್ಮನಾಭ್ ಅವರು ಆಯ್ಕೆಯಾಗಿದ್ದಾರೆ.

ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿರುವ ಬಾರ್ ಕೌನ್ಸಿಲ್ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಪದ್ಮನಾಭ್ ಅವರು ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೋಟರಿ ಎಸ್.ಎಸ್. ಮನೋಹರ್ ಆಯ್ಕೆಯಾದರು. ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಬಿ.ಇ.ಜಯೇಂದ್ರ, ಡಿ.ಎ. ಕೃಷ್ಣಕುಮಾರ್, ಎಸ್.ಜೆ. ಹೇಮಚಂದ್ರ, ಹೆಚ್.ಎಸ್. ಚಂದ್ರಶೇಖರ್, ಹೆಚ್.ಇ. ಪವನ್ ಸಾಗರ್, ಕೆ.ಹೆಚ್. ವಿಠಲ ಅವರುಗಳು ಅವಿರೋಧವಾಗಿ ನೇಮಕಗೊಂಡರು. ಹಿರಿಯ ವಕೀಲ ಪಿ.ಕೆ. ಗಣಪತಿ ಚುನಾವಣಾ ಪ್ರಕ್ರಿಯೆ ನಡೆಸಿದರು.