ಗೋಣಿಕೊಪ್ಪಲು.ಏ.೨೪: ಕೊರೊನಾ ತಡೆಗಟ್ಟಲು ಸರಕಾರ ಹಲವು ರೀತಿಯ ಕ್ರಮಕೈಗೊಂಡರೂ ನಿಯಮಗಳನ್ನು ಉಲ್ಲಂಘಿಸಿ ಬೈಕ್ನಲ್ಲಿ ಜಾಲಿ ರೈಡ್ ಮಾಡುತ್ತಿದ್ದ ಇಬ್ಬರು ಯುವಕರನ್ನು ಬೈಕ್ ಸಹಿತ ವಶಕ್ಕೆ ಪಡೆದ ಶ್ರೀಮಂಗಲ ಪೊಲೀಸರು ಮೊಕದ್ದಮೆ ದಾಖಲು ಮಾಡಿದ್ದಾರೆ.
ಶನಿವಾರ ರಾಜ್ಯದಾದ್ಯಂತ ಕೊರೊನಾ ಹಿನ್ನೆಲೆ ಕಠಿಣ ಆದೇಶವಿದ್ದರೂ ಇದನ್ನು ಪಾಲಿಸದ ತಿತಿಮತಿ ಬ್ಯಾಂಕ್ ಸಿಬ್ಬಂದಿ ಎಸ್.ಟಿ.ಮುತ್ತಪ್ಪ ಹಾಗೂ ತಿತಿಮತಿ ನಿವಾಸಿ ಬಿ.ಕೆ.ಗಣಪತಿ ಎಂಬ ಇಬ್ಬರು ಸ್ನೇಹಿತರು ತಮ್ಮ ಬೈಕಿನಲ್ಲಿ ಜಾಲಿ ರೈಡ್ ಹೊರಟು ಟಿ.ಶೆಟ್ಟಿಗೇರಿ ಬಳಿ ಆಗಮಿಸಿದ್ದರು.
ಈ ವೇಳೆ ಗಸ್ತಿನಲ್ಲಿದ್ದ ಕುಟ್ಟ ಸರ್ಕಲ್ ಇನ್ಸ್ಪೆಕ್ಟರ್ ಪರಶಿವಮೂರ್ತಿ ಹಾಗೂ ಶ್ರೀಮಂಗಲ ಠಾಣೆಯ ಎಸ್.ಐ.ರವಿ ಶಂಕರ್ ತಂಡ ಇಬ್ಬರ ಬೈಕನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.