ವೀರಾಜಪೇಟೆ, ಏ. ೨೪: ವೀರಾಜಪೇಟೆ ಹೋಬಳಿಯ ಕೆದಮುಳ್ಳೂರು ಗ್ರಾಮದಲ್ಲಿ ಒಂದೇ ದಿನ ೩೦ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಆದುದರಿಂದ ತಾಲೂಕು ಆಡಳಿತದಿಂದ ಈ ಗ್ರಾಮಕ್ಕೆ ತೆರಳುವ ರಸ್ತೆ ಬಂದ್ ಮಾಡಿ ೩೪ ಮನೆಗಳನ್ನು ಕಂಟೈನ್‌ಮೆAಟ್ ಜೋನ್ ಎಂದು ಘೋಷಿಸಿ ನಿಗಾವಹಿಸಲಾಗಿದೆ. ಗ್ರಾಮಸ್ಥರು ಮನೆಯಲ್ಲೇ ಇದ್ದು ಆರೋಗ್ಯ ಕಾಪಾಡಿಕೊಳ್ಳುವಂತೆ ಆರೋಗ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.

ಈ ಸಂದರ್ಭ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತರು ಪರಿಶೀಲನೆ ನಡೆಸಿದರು.