ಮಡಿಕೇರಿ, ಏ. ೨೪: ನಗರಸಭಾ ಚುನಾವಣೆ ಕೊರೊನಾ ಪರಿಸ್ಥಿತಿ ನಡುವೆ ರಂಗೇರುತ್ತಿದೆ. ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಗೆಲುವಿಗಾಗಿ ಚುನಾವಣಾ ಕಣದಲ್ಲಿ ಭರ್ಜರಿ ಪ್ರಚಾರಕ್ಕಿಳಿದಿದ್ದಾರೆ.

ತಾ. ೨೭ ರಂದು ೭ ವರ್ಷಗಳ ಬಳಿಕ ಮಡಿಕೇರಿ ನಗರಸಭೆ ಚುನಾವಣೆ ನಡೆಯುತ್ತಿದೆ. ಈಗಾಗಲೇ ೨೩ ವಾರ್ಡ್ಗಳ ಅಭ್ಯರ್ಥಿಗಳ ಪಟ್ಟಿ ಮತದಾರರ ಮುಂದಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಸ್.ಡಿ.ಪಿ.ಐ. ಅಭ್ಯರ್ಥಿಗಳ ನಡುವೆ ಪಕ್ಷೇತರರು, ಬಂಡಾಯ ಅಭ್ಯರ್ಥಿಗಳು ಗೆಲುವಿಗಾಗಿ ರಣತಂತ್ರ ರೂಪಿಸು ತ್ತಿದ್ದಾರೆ. ೨೩ ವಾರ್ಡ್ಗಳಲ್ಲಿ ೧೦೯ ಹುರಿಯಾಳುಗಳು ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.

ನಿಗದಿತ ಬೆಂಬಲಿಗರೊAದಿಗೆ ಈಗಾಗಲೇ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಮನೆ ಮನೆಗೆ ತೆರಳಿ ಮತ ಭಿಕ್ಷೆ ಬೇಡುತ್ತಿದ್ದಾರೆ. ಕೊರೊನಾ ಪರಿಸ್ಥಿತಿ ಇರುವುದರಿಂದ ಮೊದಲಿನಂತೆ ಪ್ರಚಾರ ಕಾರ್ಯ ನಡೆಯುತ್ತಿಲ್ಲ. ಕೇವಲ ೫ ಮಂದಿ ಬೆಂಬಲಿಗ ರೊಂದಿಗೆ ತೆರಳಿ ದೈಹಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಪ್ರಚಾರ ನಡೆಸುತ್ತಿದ್ದಾರೆ.

ಮಡಿಕೇರಿ ನಗರದಲ್ಲಿ ಮತದಾನ ಮಾಡಲು ೧೩,೦೧೧ ಪುರುಷರು, ೧೩,೬೦೬ ಮಹಿಳೆಯರು ೨ ಇತರ ಸೇರಿದಂತೆ ಒಟ್ಟು ೨೬೬೧೯ ಮತದಾರರು ಅರ್ಹರಾಗಿದ್ದಾರೆ. ಕರಪತ್ರ, ಸಾಮಾಜಿಕ ಜಾಲತಾಣಗಳ ಮೂಲಕ ಅಭ್ಯರ್ಥಿ ಗಳು ಮತದಾರ ರಲ್ಲಿ ಮತಭಿಕ್ಷೆ ಬೇಡುತ್ತಿದ್ದಾರೆ. ತಮ್ಮ ವ್ಯಾಪ್ತಿಯ ಮತದಾರರ ಮನೆ ಮನೆಗೆ ತೆರಳಿ ಸೇವೆಗೆ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಶಾಸಕರುಗಳು ಈ ಬಾರಿ ಕೊರೊನಾ ಹಿನ್ನೆಲೆ ಪ್ರಚಾರಕ್ಕೆ ಇದುವರೆಗೂ ತೆರಳಿಲ್ಲ. ಆದರೆ, ಬಿಜೆಪಿ ಅಭ್ಯರ್ಥಿಗಳ ಪರ ಕರಪತ್ರದ ಮೂಲಕ ಮತ ನೀಡುವಂತೆ ಕೋರಿದ್ದಾರೆ. ಇದರೊಂದಿಗೆ ಪಕ್ಷದ ಜಿಲ್ಲಾಧ್ಯಕ್ಷರುಗಳು ಕೂಡ ತಮ್ಮ ಅಭ್ಯರ್ಥಿಗಳು ಗೆದ್ದು ನಗರಸಭಾ ಗದ್ದುಗೆ ಏರಬೇಕೆಂಬ ನಿಟ್ಟಿನಲ್ಲಿ ಕಣದಲ್ಲಿ ಸಕ್ರಿಯರಾಗಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ನಡೆಸುತ್ತಿರುವ ಅಭ್ಯರ್ಥಿಗಳು ತಮ್ಮ ಮುಂದಿನ ಗುರಿಯ ಬಗ್ಗೆ ಮತದಾರರಲ್ಲಿ ಹೇಳಿಕೊಳ್ಳುತ್ತಿದ್ದಾರೆ.

ಬಿಜೆಪಿ, ಕಾಂಗ್ರೆಸ್ ಟಿಕೆಟ್ ವಂಚಿತ ಅಭ್ಯರ್ಥಿಗಳು, ಪಕ್ಷೇತರರು ಕೂಡ ನಾವ್ಯಾರಿಗೂ ಕಮ್ಮಿ ಇಲ್ಲ ಎಂಬAತೆ ಪ್ರಚಾರದಲ್ಲಿ ತೊಡಗಿಸಿ ಕೊಂಡಿದ್ದಾರೆ. ಒಟ್ಟಾರೆಯಾಗಿ ನಗರ ಸಭಾ ಚುನಾವಣಾ ಕಣ ರಂಗೇರು ತ್ತಿದ್ದು, ಗೆಲುವಿಗಾಗಿ ಶತ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಮತದಾರರು ಯಾರಿಗೆ ಜೈ ಅಂತಾರೆ ಅನ್ನೋದು ಕಾದು ನೋಡಬೇಕಾಗಿದೆ.

- ಹೆಚ್.ಜೆ. ರಾಕೇಶ್