ಮಡಿಕೇರಿ, ಮಾ. ೨೪: ಜಿಲ್ಲೆಯಲ್ಲೂ ಕೋವಿಡ್ ಸೋಂಕು ವ್ಯಾಪಿಸುತ್ತಿದ್ದು, ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿರುವುದರಿಂದÀ ತಾ. ೨೭ ರಂದು ನಿಗದಿಯಾಗಿರುವ ಮಡಿಕೇರಿ ನಗರಸಭೆ ಚುನಾವಣೆಯನ್ನು ಚುನಾವಣಾ ಆಯೋಗ ಮುಂದೂಡಬೇಕೆAದು ವೀರನಾಡು ರಕ್ಷಣಾ ವೇದಿಕೆ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಹರೀಶ್ ಜಿ. ಆಚಾರ್ಯ ಅವರು, ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಂತದಲ್ಲೆ, ನಗರಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ಅಭ್ಯರ್ಥಿಗಳು ತಮ್ಮನ್ನು ತೊಡಗಿಸಿಕೊಂಡಿದ್ದು, ಸ್ವತಃ ಅಭ್ಯರ್ಥಿಗಳು ಹಾಗೂ ನಗರದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿದೆ. ಇದರೊಂದಿಗೆ ಕೊರೊನಾ ಭೀತಿಯಿಂದ ಈ ಬಾರಿಯ ಚುನಾವಣೆಯ ಮತದಾನ ಪ್ರಮಾಣವೂ ಕುಂಠಿತಗೊಳ್ಳುವ ಸಾಧ್ಯತೆಗಳಿದೆ. ಚುನಾವಣಾ ಪ್ರಚಾರದ ವೇಳೆ ಸೋಂಕು ವ್ಯಾಪಿಸುವ ಆತಂಕವಿರುವುದರಿAದ ಚುನಾವಣೆಯನ್ನು ಮುಂದೂಡುವAತೆ ಜಿಲ್ಲಾಧಿಕಾರಿಗಳ ಮೂಲಕ ಚುನಾವಣಾ ಆಯೋಗವನ್ನು ಒತ್ತಾಯಿಸುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ವೇದಿಕೆಯ ಉಪಾಧ್ಯಕ್ಷ ಪಳಂಗAಡ ಈಶ್ವರ್, ಕಾರ್ಯದರ್ಶಿ ಕೆ.ಟಿ. ಶಾಮ್ ಹಾಗೂ ಮಡಿಕೇರಿ ನಗರ ಕಾರ್ಯದರ್ಶಿ ಶೋಭಾ ರಾಧಾಕೃಷ್ಣ ಉಪಸ್ಥಿತರಿದ್ದರು.

ಜೆ.ಡಿ.ಎಸ್. ಆಗ್ರಹ

ತಾ. ೨೭ ರಂದು ನಡೆಯಲಿರುವ ಮಡಿಕೇರಿ ನಗರಸಭೆ ಚುನಾವಣೆಯನ್ನು ಮುಂದೂಡುವAತೆ ಕೊಡಗು ಜಿಲ್ಲಾ ಜೆಡಿಎಸ್ ಯುವ ಘಟಕ ಒತ್ತಾಯಿಸಿದೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಘಟಕದ ಜಿಲ್ಲಾಧ್ಯಕ್ಷ ವಿಶ್ವ, ದೇಶಾದ್ಯಂತ ತೀವ್ರವಾಗಿ ಕೊರೊನಾ ಸೋಂಕು ಹಬ್ಬುತ್ತಿದ್ದು, ಜನತೆ ಆತಂಕದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಸರಿಯಲ್ಲ. ಹಲವರು ಕೊರೊನಾ ಭೀತಿ ಹಿನ್ನೆಲೆ ಮತದಾನ ಮಾಡಲು ಹಿಂದೇಟು ಹಾಕುವ ಸಾಧ್ಯತೆಯೂ ಇದೆ. ಹೀಗಾಗಿ ಚುನಾವಣೆಯನ್ನು ಕೈ ಬಿಟ್ಟು ಜನರ ಜೀವಕ್ಕೆ ಬೆಲೆ ಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು. ಪ್ರಧಾನ ಕಾರ್ಯದರ್ಶಿ ಜಾಸಿರ್ ಮಾತನಾಡಿ, ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳು ಜನ, ಜಾನುವಾರುಗಳ ಬಲಿ ಪಡೆಯುತ್ತಿದ್ದರೂ ಅರಣ್ಯ ಸಚಿವರು ಇತ್ತ ಕಡೆ ತಿರುಗಿಯೂ ನೋಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆಗಿಂತ ಜನರ ಜೀವ, ಜೀವನ ಮುಖ್ಯವಾಗಿದ್ದು, ಸಂಕಷ್ಟದ ಸಮಯದಲ್ಲಿ ಚುನಾವಣೆ ನಡೆಸುವ ಅವಶ್ಯಕತೆ ಇಲ್ಲ ಎಂದರು. ಜಿಲ್ಲಾ ವಕ್ತಾರ ಜಿನಾಸುದ್ದೀನ್ ಮಾತನಾಡಿ, ಮದ್ಯದಂಗಡಿಗಳನ್ನು ತೆರೆಯುವ ಬದಲು ಮಂದಿರ, ಮಸೀದಿ, ಚರ್ಚ್ಗಳನ್ನು ತೆರೆದು ಪ್ರಾರ್ಥನೆಗೆ ಅವಕಾಶ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ಯುವ ಘಟಕದ ನಗರ ಪ್ರಧಾನ ಕಾರ್ಯದರ್ಶಿ ಉಮೇಶ್, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸೈಫ್ ಆಲಿ, ಮಡಿಕೇರಿ ತಾಲೂಕು ಯುವ ಘಟಕ ಅಧ್ಯಕ್ಷ ಅಬಿತ್ ಅಪ್ಪಯ್ಯ ಹಾಜರಿದ್ದರು.