ಪೊನ್ನAಪೇಟೆ. ಏ. ೨೪: ಕೊರೊನಾ ಮಹಾಮಾರಿ ತಡೆಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಸರ್ಕಾರದ ಕರ್ಫ್ಯೂ ಆದೇಶವನ್ನು ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕುಟ್ಟ ವೃತ್ತ ನಿರೀಕ್ಷಕ ಪರಶಿವಮೂರ್ತಿ, ತಮ್ಮ ಸಿಬ್ಬಂದಿಗಳೊAದಿಗೆ ಕುಟ್ಟ, ಶ್ರೀಮಂಗಲ ಹಾಗೂ ಟಿ. ಶೆಟ್ಟಿಗೇರಿಯಲ್ಲಿ ಕೊರೊನಾ ಜನಜಾಗೃತಿ ಅಭಿಯಾನ ನಡೆಸಿದರು.
ಇನ್ನೂ ೨-೩ ತಿಂಗಳು ಮಳೆಗಾಲ ಪ್ರಾರಂಭವಾಗುವುದರಿAದ ಈ ಮಹಾಮಾರಿಯ ಬಗ್ಗೆ ನಿರ್ಲಕ್ಷö್ಯ ವಹಿಸಬಾರದು. ಕೊರೊನಾ ೨ನೇ ಅಲೆಯ ಆರ್ಭಟ ದೇಶದೆಲ್ಲೆಡೆ ಅತೀ ವೇಗವಾಗಿ ಸಾಗುತ್ತಿದೆ. ಆದ್ದರಿಂದ ನಾವೆಲ್ಲರೂ ಮತ್ತಷ್ಟು ಜಾಗರೂಕರಾಗಬೇಕು ಎಂದರು.
ಕೊರೊನಾ ನಿಯಮ ಪಾಲಿಸದವರ ವಿರುದ್ಧ ಕುಟ್ಟ ವೃತ್ತದ ವತಿಯಿಂದ ಪ್ರತಿದಿನ ಕನಿಷ್ಟ ೫೦ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುತ್ತಿದೆ. ತಾನು ಸೇರಿದಂತೆ ಕುಟ್ಟ ವೃತ್ತದ ಪಿಎಸ್‌ಐ ಹಾಗೂ ಎಎಸ್‌ಐ ಪ್ರತಿದಿನ ಪ್ರಕರಣ ದಾಖಲಿಸುವುದನ್ನು ಕಡ್ಡಾಯ ಮಾಡಿಕೊಂಡಿದ್ದೇವೆ ಎಂದು ಕುಟ್ಟ ವೃತ್ತ ನಿರೀಕ್ಷಕ ಪರಶಿವಮೂರ್ತಿ ಮಾಹಿತಿ ನೀಡಿದರು.