ಮಡಿಕೇರಿ, ಏ. ೨೪: ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜದ ವಾರ್ಷಿಕ ಆಡಳಿತ ಮಂಡಳಿ ಸಭೆ ನಗರದಲ್ಲಿ ನಡೆಯಿತು. ಸಭೆಯಲ್ಲಿ ಸಮಾಜದ ಆಡಳಿತ ಮಂಡಳಿ ಚುನಾವಣೆ, ಜನಾಂಗದವರು ಕೊಡಗಿನಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಸಮಾಜದ ವತಿಯಿಂದ ಜನಾಂಗ ಬಾಂಧವರಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳು ಇತ್ಯಾದಿಗಳ ಬಗ್ಗೆ ಪ್ರಮುಖ ನಿರ್ಣಯಗಳನ್ನು ತೆಗೆದು ಕೊಳ್ಳಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಚೆನಿಯಾ ನಾಪೋಕ್ಲು ವಹಿಸಿದ್ದರು. ಸಭೆಯಲ್ಲಿ ಗೌರವ ಅಧ್ಯಕ್ಷ ಬೆಳ್ಯಪ್ಪ ಚೇಲಾವರ, ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ರಾಣಿ ಅಪ್ಪಣ್ಣ, ಮಾಜಿ ಯೋಧ ಸುಭಾಷ್ ಬಾಳುಗೋಡು, ಸಹ ಕಾರ್ಯದರ್ಶಿ ಪಾರ್ವತಿ ಚೆಯ್ಯಂಡಾಣೆ, ಪ್ರಧಾನ ಕಾರ್ಯದರ್ಶಿ ಗಣೇಶ್ ಪೆರೂರು, ಕಾರ್ಯದರ್ಶಿ ನಾಪೋಕ್ಲು ವಹಿಸಿದ್ದರು. ಸಭೆಯಲ್ಲಿ ಗೌರವ ಅಧ್ಯಕ್ಷ ಬೆಳ್ಯಪ್ಪ ಚೇಲಾವರ, ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ರಾಣಿ ಅಪ್ಪಣ್ಣ, ಮಾಜಿ ಯೋಧ ಸುಭಾಷ್ ಬಾಳುಗೋಡು, ಸಹ ಕಾರ್ಯದರ್ಶಿ ಪಾರ್ವತಿ ಚೆಯ್ಯಂಡಾಣೆ, ಪ್ರಧಾನ ಕಾರ್ಯದರ್ಶಿ ಗಣೇಶ್ ಪೆರೂರು, ಕಾರ್ಯದರ್ಶಿ ದೇವಯ್ಯ ಹಾಕತ್ತೂರು ಮತ್ತು ನಿರ್ದೇಶಕರು ಗಳಾದ ಗಣೇಶ್ ಚೆಯ್ಯಂಡಾಣೆ, ಜೋಯಪ್ಪ ನೆಲಜಿ, ಪಾಪಣ್ಣ ಮಾದಾಪುರ, ಲೋಕೇಶ್ ಮುತ್ತಾ ರ್ಮುಡಿ, ವಿಶ್ವನಾಥ್ ಪೆರೂರು, ಸದಸ್ಯರಾದ ಭಾರತಿ ಚೆಯ್ಯಂಡಾಣೆ, ರಾಧ ಗಣಪತಿ ಪಾಲೇಮಾಡು ಉಪಸ್ಥಿತರಿದ್ದರು.