*ವೀರಾಜಪೇಟೆ, ಏ. ೨೩: ರಾಜ್ಯಸರ್ಕಾರದ ಕೋವಿಡ್ ಮಾರ್ಗಸೂಚಿ ಅನ್ವಯ ಭಾಗಶಃ ಅಂಗಡಿ-ಮುಗ್ಗಟ್ಟು ಮುಚ್ಚಲು ಪಟ್ಟಣ ಪಂಚಾಯತಿ ಪ್ರಕಟಣೆ ಹೊರಡಿಸಿದ್ದರೂ ನಿಯಮ ಮೀರಿ ಗ್ರಾಹಕರಿಗೆ ಊಟ-ಉಪಹಾರ ಮಾರಾಟ ಮಾಡುತ್ತಿದ್ದ ಕೆಲವು ಹೊಟೇಲ್‌ಗಳ ಮಾಲೀಕರಿಗೆ ಪಟ್ಟಣ ಪಂಚಾಯಿತಿಯಿAದ ದಂಡ ವಿಧಿಸಲಾಯಿತು.

ನಗರದ ಬಹುತೇಕ ಅಂಗಡಿ-ಮುಗ್ಗಟ್ಟುಗಳು ಮುಚ್ಚಿದ್ದರೂ ಕೂಡಾ ಸಾರ್ವಜನಿಕರು ಸಂಪೂರ್ಣ ಲಾಕ್ಡೌನ್ ಆಗುವ ಭೀತಿಯಲ್ಲಿ ಇಂದೇ ಅಗತ್ಯ ವಸ್ತು ಖರೀದಿಯಲ್ಲಿ ತೊಡಗಿದ್ದ ದೃಶ್ಯ ಕಂಡುಬAದಿತು. ವೀರಾಜಪೇಟೆ ತಾಲೂಕು ಕೋವಿಡ್ ಮಾರ್ಗಸೂಚಿಯನ್ನು ನೋಡಿಕೊಳ್ಳುತ್ತಿರುವ ಗ್ರೇಡ್ ತಹಶೀಲ್ದಾರ್ ಪ್ರದೀಪ್ ಕುಮಾರ್ ನಗರದ ಎಲ್ಲಾ ಕಲ್ಯಾಣ ಮಂಟಪಗಳಿಗೆ ಭೇಟಿ ನೀಡಿ ಸರ್ಕಾರ ನಿರ್ದೇಶಿಸಿರುವ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಲು ತಿಳಿಸಿದರು. ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ನು ಸಮರ್ಪಕವಾಗಿ ಪಾಲಿಸುವ ನಿಟ್ಟಿನಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಇಂದು ಮಧ್ಯಾಹ್ನ ತುರ್ತು ಸಭೆ ಕೂಡಾ ನಡೆಸಲಾಯಿತು.