ಗೋಣಿಕೊಪ್ಪ ವರದಿ, ಏ. ೨೩: ಜೆಸಿಐ ಪೊನ್ನಂಪೇಟೆ ಗೋಲ್ಡನ್ ಘಟಕದ ವತಿಯಿಂದ ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರದಲ್ಲಿ ಸುಮಾರು ೭ ಸಾವಿರ ಮಿಲಿ ಲೀಟರ್ ರಕ್ತ ಸಂಗ್ರಹಿಸಲಾಯಿತು.
ಜೆಸಿಐ ಸದಸ್ಯರು, ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ರಕ್ತ ನೀಡಿದರು. ಶಿಬಿರದಲ್ಲಿ ಮಧುಮೇಹ ತಪಾಸಣೆ ಕೂಡ ನಡೆಸಲಾಯಿತು.
ಜಿಲ್ಲಾ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ಕರುಂಬಯ್ಯ ಮಾತನಾಡಿ, ರಕ್ತಕ್ಕೆ ಪರ್ಯಾಯ ವ್ಯವಸ್ಥೆಗಳಿಲ್ಲ. ಆದ್ದರಿಂದ ಹೆಚ್ಚು ಮಹತ್ವ ಪಡೆದುಕೊಂಡಿದೆ. ರಕ್ತದಾನವು ಜೀವದಾನ ಮಾಡಿದಷ್ಟು ತೃಪ್ತಿ ಸಿಗುತ್ತದೆ. ದೇಹದ ಅನೇಕ ಅಂಗಾAಗಗಳಿಗೆ ಪರ್ಯಾಯö ವ್ಯವಸ್ಥೆಗಳಿವೆ. ಅಂಗಾAಗ ದಾನದಿಂದ ಅಂಗ ಚಾಲನೆಗೆ ಅವಕಾಶವಿದೆ. ಆದರೆ, ರಕ್ತಕ್ಕೆ ಯಾವುದೇ ಕೃತಕöವ್ಯವಸ್ಥೆಗಳಿಲ್ಲ. ರಕ್ತಕ್ಕೆ ರಕ್ತವೇ ಪರ್ಯಾಯöವ್ಯವಸ್ಥೆ ಎಂದು ಅರಿತುಕೊಂಡು ರಕ್ತದಾನಕ್ಕೆ ಮುಂದಾಗಬೇಕು ಎಂದು ತಿಳಿಸಿದರು. ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದಾಕ್ಷಾಯಿಣಿ ಉದ್ಘಾಟಿಸಿದರು. ಜೆ.ಸಿ.ಐ. ಪೊನ್ನಂಪೇಟೆ ಗೋಲ್ಡನ್ ಘಟಕ ಅಧ್ಯಕ್ಷ ಪಾರುವಂಗಡ ದಿಲನ್ ಚಂಗಪ್ಪ, ಯೋಜನಾಧಿಕಾರಿ ಅಜಯï, ನಿಕಟಪೂರ್ವ ಅಧ್ಯಕ್ಷ ಗಯಾ ಜೋಯಪ್ಪ, ಜೆಸಿರೆಟ್ ಅಧ್ಯಕ್ಷೆ ರಿಸ್ತಾ ಚಂಗಪ್ಪ ಉಪಸ್ಥಿತರಿದ್ದರು.