ಸುಂಟಿಕೊಪ್ಪ, ಏ. ೨೩: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಿAದ ಕೊರೊನಾ ಮುನ್ನೆಚ್ಚರಿಕಾ ಕ್ರಮವಾಗಿ ಅಂಗಡಿ, ಹೊಟೇಲ್ ಹಾಗೂ ಚರಂಡಿಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ ಸ್ವಚ್ಛಗೊಳಿಸಲಾಯಿತು.

ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ೨೦೦ಕ್ಕೂ ಅಧಿಕ ಮಂದಿ ಸರತಿ ಸಾಲಿನಲ್ಲಿ ನಿಂತಿದ್ದರು, ಆದರೆ ಕೇವಲ ೧೦೦ ಲಸಿಕೆಗಳು ಮಾತ್ರ ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸರಬರಾಜಾಗಿರುವುದರಿಂದ ೨ನೇ ಹಂತದ ಲಸಿಕೆ ಪಡೆಯುವವರಿಗೆ ಮೊದಲ ಆದ್ಯತೆ ನೀಡಿ ಉಳಿದವರಿಗೆ ಪ್ರಥಮ ಹಂತದ ಲಸಿಕೆ ನೀಡಲಾಯಿತು. ಅನೇಕ ಮಂದಿ ಲಸಿಕೆ ಸಿಗದೆ ಸಪ್ಪೆಮೊರೆ ಹಾಕಿಕೊಂಡು ಹಿಂತಿರುಗುತ್ತಿರುವ ದೃಶ್ಯ ಕಂಡು ಬಂತು.