ನಾಪೋಕ್ಲು, ಏ. ೨೩: ಬಿಟ್ಟಂಗಾಲ ಗ್ರಾಮದ ಪುಚ್ಚಿಮಾಡ ತಮ್ಮಿ ತಿಮ್ಮಯ್ಯನವರ ಮನೆಯ ಸಮೀಪದಲ್ಲಿ ಹೊಂಚು ಹಾಕುತ್ತಿದ್ದ ಭಾರೀ ಗಾತ್ರದ ೧೫ ಅಡಿ ಉದ್ದದ ಕಾಳಿಂಗವನ್ನು ಸ್ನೇಕ್ ಗಗನ್ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಗಗನ್ ಇದುವರೆಗೆ ಸುಮಾರು ೬೦ ಕಾಳಿಂಗ ಸರ್ಪ ಮತ್ತು ನಾಗರ ಸೇರಿದಂತೆ ಇತರ ಸುಮಾರು ೬ ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಟ್ಟು ಹಾವುಗಳ ಜೀವ ಉಳಿಸಿದ್ದಾರೆ. ಹಾವು ದುಷ್ಟ ಪ್ರಾಣಿ ಅಲ್ಲ ಎನ್ನುವ ಅವರು; ಹಾವುಗಳಿಗೆ ನೋವಾದರೆ ಮಾತ್ರ ಕಚ್ಚಲು ಮುಂದೆ ಬರುತ್ತದೆ. ಹಾವುಗಳು ಕಂಡುಬAದರೆ ಮೊಬೈಲ್ ೮೨೭೭೪೪೫೫೮೯, ೯೯೪೫೧೦೨೬೯೫, ಇದನ್ನು ಸಂಪರ್ಕಿಸುವAತೆ ತಿಳಿಸಿದ್ದಾರೆ. -ದುಗ್ಗಳ