ಸುಂಟಿಕೊಪ್ಪ, ಏ. ೨೩: ಹಿರಿಯ ಆಟೋ ಚಾಲಕ ಸಿ. ಚಂದ್ರ ಅವರಿಗೆ ಸುಂಟಿಕೊಪ್ಪ ಆಟೋ ಚಾಲಕರ ಸಂಘದ ವತಿಯಿಂದ ಚಿಕಿತ್ಸೆಗಾಗಿ ರೂ. ೧೦,೦೦೦ ಧನ ಸಹಾಯ ನೀಡಲಾಯಿತು. ಆಟೋ ಚಾಲಕ ಸಿ. ಚಂದ್ರ ಅವರು ಅನಾರೋಗ್ಯದಿಂದ ಮಡಿಕೇರಿ ಜಿಲ್ಲಾಸ್ಪತ್ರೆಯ ತುರ್ತು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ಭೇಟಿ ಮಾಡಿದ ಪದಾಧಿಕಾರಿಗಳು ಅವರ ಚಿಕಿತ್ಸೆಗಾಗಿ ಧನಸಹಾಯ ಮಾಡಿದರು. ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎ.ಎಂ. ಶರೀಫ್ ಸ್ಥಾಪಕ ಅಧ್ಯಕ್ಷÀ ಗ್ಯಾಬ್ರಿಯಲ್ ಡಿಸೋಜ, ಕಾರ್ಯದರ್ಶಿ ಜೇಮ್ಸ್ ಡಿಸೋಜ, ಖಜಾಂಚಿ ಅಸೈನರ್ (ಕುಟ್ಟ) ಸಹ ಖಜಾಂಚಿ ವಿಜಯ ಟಿ.ಆರ್. ಸೇರಿದಂತೆ ಇನ್ನಿತರು ಹಾಜರಿದ್ದರು.