ಮಡಿಕೇರಿ, ಏ. ೨೩: ಮೈಸೂರು-ಬಂಟ್ವಾಳ ರಾಷ್ಟಿçÃಯ ಹೆದ್ದಾರಿ ಜೋಡುಪಾಲ ಬಳಿ ರಸ್ತೆಗೆ ಮಣ್ಣು ಕುಸಿದಿದ್ದು, ಈ ಸ್ಥಳಕ್ಕೆ ಶಾಸಕ ಕೆ.ಜಿ. ಬೋಪಯ್ಯ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ರಸ್ತೆ ಬದಿ ನಿರ್ಮಾಣ ಮಾಡಲಾಗಿರುವ ಚರಂಡಿ ಬಳಿ ಮಣ್ಣು ಕುಸಿದಿದ್ದು, ರಸ್ತೆಯ ಮೇಲೆ ನೀರು ಹೋಗುತ್ತಿದೆ. ತಕ್ಷಣ ರಸ್ತೆ ಸರಿಪಡಿಸುವಂತೆ ರಾಷ್ಟಿçÃಯ ಹೆದ್ದಾರಿ ವಿಭಾಗದ ಇಂಜಿನಿಯರ್‌ಗೆ ಸೂಚಿಸಿದ್ದಾರೆ. ಹೆದ್ದಾರಿ ಬಳಿ ಮತ್ತಷ್ಟು ಕುಸಿತ ಆಗುವುದು ಕಂಡುಬAದಲ್ಲಿ ತಾತ್ಕಾಲಿಕವಾಗಿ ಬದಲಿ ಸಂಚಾರ ಮಾರ್ಗ ಮಾಡುವಂತೆ ನಿರ್ದೇಶನ ನೀಡಿದ್ದಾರೆ. ಹಾಗೆಯೇ ಬೃಹತ್ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಬೇಕು ಎಂದು ಜಿಲ್ಲಾಡಳಿತಕ್ಕೆ ಶಾಸಕರು ಸಲಹೆ ಮಾಡಿದ್ದಾರೆ.