*ವೀರಾಜಪೇಟೆ, ಏ. ೨೨: ವೀರಾಜಪೇಟೆ ನಗರದಿಂದ ಕೇರಳ ರಾಜ್ಯದ ಹೆದ್ದಾರಿ ಬೇಟೋಳಿ ಗ್ರಾಮದ ಬಳಿ ಅನೇಕ ವರ್ಷಗಳಿಂದ ರಸ್ತೆ ಬದಿಯ ಮರದ ಕೊಂಬೆಗಳು ಬೆಳೆದು ರಸ್ತೆಗೆ ಬಾಗಿ ವರ್ಷಗಳೇ ಕಳೆದು ಹೋಗಿದ್ದವು. ಕೊಂಬೆಗಳು ಒಣಗಿ ವಾಹನಗಳ ಮೇಲೆ ಬೀಳುತ್ತಿದ್ದವು. ಇದರಿಂದ ಅನೇಕ ವಾಹನ ಸವಾರರು ತೊಂದರೆಗೆ ತುತ್ತಾಗಿದ್ದರು.
ಹಲವು ಗ್ರಾಮ ಸಭೆಗಳಲ್ಲಿ ಈ ವಿಚಾರ ಚರ್ಚೆಗೆ ಬರುತ್ತಿತ್ತು. ಆದರೆ ಅರಣ್ಯ ಇಲಾಖೆಯು ಮರ ಕಡಿಯಲು ಅನುಮತಿ ಮಾತ್ರ ನೀಡುತ್ತಿರಲಿಲ್ಲ.