ನ್ಯಾಯಬೆಲೆ ಅಂಗಡಿಗಳು (ಪಿಡಿಎಸ್) ಕಿರಾಣಿ ಅಂಗಡಿಗಳು, ದಿನಸಿ, ಹಣ್ಣು ಮತ್ತು ತರಕಾರಿಗಳು, ಡೈರಿ ಮತ್ತು ಹಾಲಿನ ಬೂತುಗಳು, ಮಾಂಸ ಮತ್ತು ಮೀನು, ಪಶು ಆಹಾರದ ಅಂಗಡಿಗಳಿಗೆ ಅನುಮತಿಸಲಾಗಿದೆ. ಸಗಟು ತರಕಾರಿ, ಹಣ್ಣು, ಹೂವು ಮಾರುಕಟ್ಟೆಗಳಿಗೆ ಬಯಲು ಪ್ರದೇಶ, ಆಟದ ಮೈದಾನಗಳಲ್ಲಿ ಮಾರಾಟ ಮಾಡಲು ಕೋವಿಡ್ ಸಮುಚಿತ ವರ್ತನೆಯನ್ನು (ಅoviಜ ಂಠಿಠಿಡಿoಠಿಡಿiಚಿಣe ಃehಚಿviouಡಿ -ಅಂಃ) ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಟ್ಟು ಅನುಮತಿಸಿದೆ. ಸ್ಥಳಾಂತರ ಪ್ರಕ್ರಿಯೆಗಳನ್ನು ಏಪ್ರಿಲ್ ೨೩ ರೊಳಗೆ ಪೂರ್ಣಗೊಳಿಸತಕ್ಕದ್ದು.

ರೆಸ್ಟೋರೆಂಟ್‌ಗಳು ಮತ್ತು ಉಪಹಾರ ಗೃಹಗಳಿಗೆ ಪಾರ್ಸೆಲ್ ಸೇವೆಗೆ ಮಾತ್ರ ಅನುಮತಿಸಿದೆ. ವಸತಿ ಸೌಕರ್ಯದ ಹೊಟೇಲ್‌ಗಳಿಗೆ ಅತಿಥಿ ಸೇವೆ ನೀಡಲು ಮಾತ್ರವೇ ಅನುಮತಿಸಿದೆ.