ಸೋಮವಾರಪೇಟೆ, ಏ. ೨೨: ಕೊಡಗು ಜಿಲ್ಲಾ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರ ಸಭೆ ಕುಶಾಲನಗರದ ಮಹಾಲಕ್ಷಿö್ಮ ರೆಸಿಡೆನ್ಸಿ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ವಹಿಸಿ ಮಾತನಾಡಿ, ಪಕ್ಷದ ಸಿದ್ದಾಂತಕ್ಕೆ ಅನುಗುಣವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.
ಇದೇ ಸಂದರ್ಭ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಕುಶಾಲನಗರದ ಸಿದ್ಧಪ್ಪ, ಜಿಲ್ಲಾ ಉಸ್ತುವಾರಿಯಾಗಿ ಜಯಪ್ಪ ಹಾನಗಲ್ಲು, ಸಂಯೋಜಕರಾಗಿ ಸಂಪಾಜೆಯ ಮಹಮ್ಮದ್ ಕುಂಞÂ, ಉಪಾಧ್ಯಕ್ಷರಾಗಿ ಕುಶಾಲನಗರದ ಎ.ಎಸ್. ಜೋಯಪ್ಪ, ಹೊದ್ದೂರಿನ ಕುಸುಮಾವತಿ ಆನಂದ್, ಪ್ರಧಾನ ಕಾರ್ಯದರ್ಶಿಯಾಗಿ ಚನ್ನಬಸವಯ್ಯ ಕೂಡಿಗೆ, ಸಂಘಟನಾ ಕಾರ್ಯದರ್ಶಿಯಾಗಿ ಹೆಚ್.ಕೆ. ಮೊಣ್ಣಪ್ಪ ಹೊದ್ದೂರು, ಖಜಾಂಚಿಯಾಗಿ ಹೆಚ್.ಆರ್. ಪುಟ್ಟಸ್ವಾಮಿ, ಜಿಲ್ಲಾ ಕಾರ್ಯದರ್ಶಿಗಳನ್ನಾಗಿ ಎಸ್.ಕೆ. ಅಮಿತ್, ವೇಣು ಕಿಶೋರ್, ಸುಬ್ರಮಣ್ಯ ಅವರುಗಳನ್ನು ಆಯ್ಕೆ ಮಾಡಲಾಯಿತು.