ಮಡಿಕೇರಿ, ಏ. ೨೨: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ೨೦೧೯-೨೦ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ.
ಕೊಡವ ಸಾಹಿತ್ಯ ಸಂಶೋಧನಾ, ಕೊಡವ ಸಾಹಿತ್ಯ, ಕೊಡವ ಜಾನಪದ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮೂರು ಜನ ಸಾಧಕರನ್ನು ಅಕಾಡೆಮಿಯ ೨೦೧೯-೨೦ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಗೌರವ ಪ್ರಶಸ್ತಿಯು ರೂ. ೫೦ ಸಾವಿರ ನಗದು ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ.
ಗೌರವ ಪ್ರಶಸ್ತಿ ಪುರಸ್ಕೃತರು ಮೊಣ್ಣಂಡ ಶೋಭ ಸುಬ್ಬಯ್ಯ (ಕೊಡವ ಸಾಹಿತ್ಯ ಕ್ಷೇತ್ರ), ಕಾಮೆಯಂಡ ಸಿ. ಅಯ್ಯಣ್ಣ (ಕೊಡವ ಜಾನಪದ/ ಕಲಾ ಕ್ಷೇತ್ರ) ಮತ್ತು ಕಂಬೀರAಡ ಕಾವೇರಿ ಪೊನ್ನಪ್ಪ (ಸಂಶೋಧನಾ ಕ್ಷೇತ್ರ) ಅವರನ್ನು ಆಯ್ಕೆ ಮಾಡಲಾಗಿದೆ.
ಕೊಡವ ಕವನ ಸಂಕಲನ, ಕೊಡವ ಕಾದಂಬರಿ ಹಾಗೂ ಕೊಡವ ನಾಟಕ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮೂರು ಜನ ಸಾಧಕರನ್ನು ಅಕಾಡೆಮಿಯ ೨೦೧೯-೨೦ನೇ ಪುಸ್ತಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪುಸ್ತಕ ಪ್ರಶಸ್ತಿಯು ರೂ. ೨೫ ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.
ಪುಸ್ತಕ ಪ್ರಶಸ್ತಿಗೆ ಬಾಚರಣಿಯಂಡ ಅಪ್ಪಣ್ಣ ಮತ್ತು ರಾಣು ಅಪ್ಪಣ್ಣ (ದಂಪತಿ) (ಕೊಡವ ಕವನ ಸಂಕಲನ (ಪೊಂಜAಗ್), ಕಾಡ್ಯಮಾಡ ರೀಟಾ ಬೋಪಯ್ಯ (ಕೊಡವ ಕಾದಂಬರಿ/ಭಾಷಾAತರ ಕನ್ನಡ ಕೃತಿ (ಮಹಾವೀರ ಅಚ್ಚುನಾಯಕ) ಮತ್ತು ಅಡ್ಡಂಡ ಸಿ. ಕಾರ್ಯಪ್ಪ (ಕೊಡವ ನಾಟಕ ಕ್ಷೇತ್ರ (ಬದ್‌ಕ್ ಪಿಂಞ ದೇಚವ್ವ) ಇವರನ್ನು ಆಯ್ಕೆ ಮಾಡಲಾಗಿದೆ.
ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ತಾ. ೨೬ ರಂದು ನಡೆಸಲು ನಿರ್ಧರಿಸಲಾಗಿತ್ತು, ಆದರೆ ಸರ್ಕಾರದ ಕೋವಿಡ್ ನಿಯಮಗಳಿರುವುದರಿಂದ ಮುಂದಿನ ದಿನಗಳಲ್ಲಿ ನಡೆಸಲಾಗುವುದು. ಹಾಗೂ ೨೦೨೦-೨೦೨೧ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾದವರ ವಿವರವನ್ನು ಮುಂದೆ ತಿಳಿಸಲಾಗುವುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.