ಮಡಿಕೇರಿ, ಏ. ೨೧: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಜಂಬರಕ್ಕೆ ಚಾಲನೆ ನೀಡಲಾಯಿತು.ಕೊರೊನಾ ಹಿನ್ನೆಲೆಯಲ್ಲಿ ಯಾವುದೇ ಸಭಾ ಕಾರ್ಯಕ್ರಮಗಳಿಲ್ಲದೆ ಸರಳವಾಗಿ ಉದ್ಘಾಟನೆ ನೆರವೇರಿತು. ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್‌ಕುಮಾರ್, ಕಾರ್ಯದರ್ಶಿ ಕಟ್ಟೆಮನೆ ರೋಷನ್ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು, ನಿರ್ದೇಶಕರುಗಳು ಕ್ರೀಡಾಪಟುಗಳು ಹಾಜರಿದ್ದರು. ಇಂದು ನಡೆದ ಪಂದ್ಯದಲ್ಲಿ ಪರಪ್ಪು ತಂಡ ೬ ಓವರ್‌ಗೆ ೫ ವಿಕೆಟ್ ಕಳೆದುಕೊಂಡು ೩೩ ರನ್ ಬಾರಿಸಿತು. ಎದುರಾಳಿ ನೂಜಿಬೈಲು ತಂಡ ೩೪ ರನ್ ಬಾರಿಸಿ ಹತ್ತು ವಿಕೆಟ್ ಗೆಲುವು ಸಾಧಿಸಿತು. ಸುಳ್ಯಕೋಡಿ ತಂಡ ೪ ವಿಕೆಟ್ ಕಳೆದುಕೊಂಡು ೪೩ ರನ್ ಗಳಿಸಿತು. ಎದುರಾಳಿ ಬೈಮನ ಕಾರುಗುಂದ ತಂಡ ೨ ವಿಕೆಟ್ ಕಳೆದುಕೊಂಡು ೪೮ ರನ್ ಗಳಿಸಿ ಜಯಗಳಿಸಿತು. ಮೇರ್ಕಜೆ ತಂಡ ೪ ವಿಕೆಟ್ ಕಳೆದುಕೊಂಡು ೫೬ ರನ್ ಗಳಿಸಿದರೆ, ಎದುರಾಳಿ ಕತ್ರಿಕೊಲ್ಲಿ ತಂಡ ೨೪ ರನ್‌ಗಳಿಸಿ ೯ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು. ಕಾಳಮನೆ ತಂಡ

(ಮೊದಲ ಪುಟದಿಂದ) ೮ ವಿಕೆಟ್‌ಗೆ ೩೨ ರನ್‌ಗಳಿಸಿದರೆ, ಎದುರಾಳಿ ಪರ್ಲಕೋಟಿ ೧ ವಿಕೆಟ್‌ಗೆ ೩೬ ರನ್ ಬಾರಿಸಿ ೯ ವಿಕೆಟ್‌ಗಳ ಗೆಲುವು ಸಾಧಿಸಿತು.

ದಂಬೆಕೋಡಿ ೬ ವಿಕೆಟ್‌ಗೆ ೨೪ ರನ್‌ಗಳಿಸಿದರೆ, ಎದುರಾಳಿ ನೂಜಿಬೈಲು ೨ ವಿಕೆಟ್‌ಗೆ ೨೫ ರನ್‌ಗಳಿಸಿ ೮ ವಿಕೆಟ್‌ಗಳ ಗೆಲುವು ಸಾಧಿಸಿತು. ಬೆಲಿಯಂಡ್ರ ತಂಡ ೬ ವಿಕೆಟ್‌ಗೆ ೫೪ ರನ್‌ಗಳಿಸಿದರೆ, ಎದುರಾಳಿ ಬೈಮನ ಕಾರುಗುಂದ ೫ ವಿಕೆಟ್‌ಗೆ ೫೫ ರನ್‌ಗಳಿಸಿ ೫ ವಿಕೆಟ್‌ಗಳ ಗೆಲುವು ಸಾಧಿಸಿತು. ಪರ್ಲಕೋಟಿ ೪ ವಿಕೆಟ್‌ಗೆ ೬೧ ರನ್ ಗಳಿಸಿದರೆ, ನೂಜಿಬೈಲು ೩ ವಿಕೆಟ್‌ಗೆ ೩೯ ರನ್ ಗಳಿಸಿ ಸೋಲನುಭವಿಸಿತು. ಮೇರ್ಕಜೆ ೪ ವಿಕೆಟ್‌ಗೆ ೪೪ ರನ್‌ಗಳಿಸಿದರೆ, ಮೂಲೆಮಜಲು ೧ ವಿಕೆಟ್‌ಗೆ ೪೭ ರನ್‌ಗಳಿಸಿ ೯ ವಿಕೆಟ್‌ಗಳ ಜಯ ಸಾಧಿಸಿತು. ಮೂಲೆಮಜಲು ೩ ವಿಕೆಟ್‌ಗೆ ೫೦ ರನ್‌ಗಳಿಸಿದರೆ, ಬೈಮನ ಕಾರುಗುಂದ ೯ ವಿಕೆಟ್‌ಗೆ ೨೯ ರನ್ ಮಾತ್ರ ಗಳಿಸಿ ಸೋಲನುಭವಿಸಿತು. ಮೂಲೆಮಜಲು ಹಾಗೂ ಪರ್ಲಕೋಟಿ ತಂಡಗಳು ಪ್ರಿಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.