ಮಡಿಕೇರಿ, ಏ. ೨೧: ಕೋವಿಡ್ -೧೯ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಸರಕಾರ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಮದ್ಯ/ ಬಿಯರ್ ಮತ್ತು ವೈನ್ ಅನ್ನು ಮಾರಾಟ ಮಾಡುವ ಅಬಕಾರಿ ಸನ್ನದುಗಳಲ್ಲಿ ತಾ. ೨೧ ರ ರಾತ್ರಿ ೯ ಗಂಟೆಯಿAದ ಮೇ ೪ ರ ಬೆಳಿಗ್ಗೆ ೬ ಗಂಟೆಯವರೆಗೆ ಜಾರಿಯಲ್ಲಿರುವಂತೆ ಕೆಲವೊಂದು ಷರತ್ತುಗಳನ್ನು ವಿಧಿಸಿ ನಿರ್ಬಂಧಗೊಳಿಸಿ ಆದೇಶ ಹೊರಡಿಸಿದೆ.
ರಾಜ್ಯಾದ್ಯಂತ ಸೋಮವಾರದಿಂದ ಶುಕ್ರವಾರದವರೆಗೆ ಮದ್ಯ / ಬಿಯರ್ ಮತ್ತು ವೈನ್ ಅನ್ನು ಮಾರಾಟ ಮಾಡುವ ಎಲ್ಲಾ ರೀತಿಯ ಅಬಕಾರಿ ಸನ್ನದುಗಳ ಮುಚ್ಚುವ ಅವಧಿಯನ್ನು ರಾತ್ರಿ ೯ ಗಂಟೆಗೆ ಸೀಮಿತಗೊಳಿಸಿದೆ. ರಾಜ್ಯಾದ್ಯಂತ ಶುಕ್ರವಾರ ರಾತ್ರಿ ೯ ಗಂಟೆಯಿAದ ಸೋಮವಾರ ಬೆಳಿಗ್ಗೆ ೬ ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುವ ಅವಧಿಯಲ್ಲಿ ಮದ್ಯ/ ಬಿಯರ್ ಮತ್ತು ವೈನ್ ಅನ್ನು ಮಾರಾಟ ಮಾಡುವ ಎಲ್ಲಾ ರೀತಿಯ ಅಬಕಾರಿ ಸನ್ನದುಗಳು ಕಾರ್ಯನಿರ್ವಹಿಸುವಂತಿಲ್ಲ.
Sಣಚಿಟಿಜ ಂಟoಟಿe ಸಿಎಲ್ -೨, ಸಿಎಲ್-೮, ಸಿಎಲ್-೮ಎ, ಸಿಎಲ್-೮ಬಿ, ಸಿಎಲ್-೧೧ಸಿ, ಸಿಎಲ್ -೧೬ ಮತ್ತು ವೈನ್ ಬೋಟಿಕ್ ಸನ್ನದುಗಳಲ್ಲಿ ಹಾಲಿ ಇರುವಂತೆ ಸೀಲ್ಡ್ ಬಾಟಲ್‌ಗಳಲ್ಲಿ ಪಾರ್ಸೆಲ್ (ಣಚಿಞe ಚಿತಿಚಿಥಿ) ರೂಪದಲ್ಲಿ ಮಾರಾಟ ಮಾಡಲು ಆಸ್ಪದವಿರುತ್ತದೆ. ಸಿಎಲ್-೪ (ಕ್ಲಬ್ ಸದಸ್ಯರುಗಳಿಗೆ ಮಾತ್ರ), ಸಿಎಲ್-೬ಎ, ಸಿಎಲ್-೭, ಸಿಎಲ್-೭ಎ, ಸಿಎಲ್-೭ಬಿ, ಸಿಎಲ್-೯, ಸಿಎಲ್-೧೭, ಸಿಎಲ್-೧೮, ಬಾಟಲ್ಡ್ ಬೀರ್ ಮತ್ತು ವೈನ್ ಟ್ಯಾವರೀನ್ ಸನ್ನದಿನಿಂದ ಸೀಲ್ ಮಾಡಿರುವ ಬಾಟಲುಗಳನ್ನು ಮಾತ್ರ ನಿಗದಿಪಡಿಸಿರುವ ಎಂಆರ್‌ಪಿ ದರದಲ್ಲೇ ಪಾರ್ಸೆಲ್ (ಣಚಿಞe ಚಿತಿಚಿಥಿ) ರೂಪದಲ್ಲಿ ಮಾತ್ರ ಗ್ರಾಹಕರಿಗೆ ಮಾರಾಟ ಮಾಡಲು ಅನುಮತಿ ನೀಡಿದೆ. ಅಲ್ಲದೇ ಸದರಿ ಸನ್ನದುಗಳಲ್ಲಿ ಇರುವ ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಊಟ/ ತಿಂಡಿಯನ್ನು ಕೇವಲ ಪಾರ್ಸೆಲ್ (ಣಚಿಞe ಚಿತಿಚಿಥಿ) ರೂಪದಲ್ಲಿ ಮಾತ್ರ ನೀಡಬಹುದಾಗಿದೆ.
ಮೈಕ್ರೋಬ್ರಿವರಿಗಳಲ್ಲಿ ತಯಾರಾಗುವ ಬೀರ್ ಅನ್ನು ಗ್ಲಾಸ್, ಸೆರಾಮಿಕ್ ಅಥವಾ Sಣಚಿiಟಿಟess sಣeeಟ ಛಿoಟಿಣಚಿiಟಿeಡಿ ಗಳಲ್ಲಿ ಗರಿಷ್ಠ ೨ ಲೀಟರ್‌ಗಳ ಮಿತಿಯವರೆಗೆ ಪಾರ್ಸೆಲ್ (ಣಚಿಞe ಚಿತಿಚಿಥಿ) ರೂಪದಲ್ಲಿ ಮಾತ್ರ ನೀಡಬಹುದಾಗಿದೆ. ಬಾಟಲ್ಡ್ ಬೀರ್ ಸನ್ನದನ್ನು ಹೊರತುಪಡಿಸಿ, ಡ್ರಾಟ್ ಬೀರ್ ಮಾರಾಟಕ್ಕೆ ಅವಕಾಶವಿರುವ ಆರ್‌ವಿಬಿ (ಪಬ್) ಸನ್ನದುಗಳು ಕಾರ್ಯನಿರ್ವಹಿಸುವಂತಿಲ್ಲ. ಯಾವುದೇ ಉಲ್ಲಂಘನೆಯಾದಲ್ಲಿ ಅಥವಾ ದುರುಪಯೋಗವಾದಲ್ಲಿ ಸಂಬAಧಪಟ್ಟ ಸನ್ನದುದಾರರೇ ಜವಾಬ್ದಾರರಾಗುವುದಲ್ಲದೇ ಸನ್ನದುಗಳನ್ನು ಅಮಾನತ್ತು ರದ್ದುಗೊಳಿಸುವ ಕ್ರಮಗಳನ್ನೊಳಗೊಂಡAತೆ ಯಾವುದೇ ಕ್ರಮ ಕೈಗೊಳ್ಳುವ ಅಧಿಕಾರವು ಇಲಾಖೆಯು ಹೊಂದಿರುತ್ತದೆ. ಸನ್ನದು ಮಳಿಗೆಯಲ್ಲಿ ಸಾಮಾಜಿಕ ಅಂತರವಾದ ೬ ಅಡಿಗಳಿಗೆ ಕಡಿಮೆ ಇಲ್ಲದಂತೆ ಅಂತರವನ್ನು ಕಾಪಾಡಿಕೊಳ್ಳುವುದು.
ಸನ್ನದಿನಲ್ಲಿನ ನೌಕರರು, ಗೌಸ್ ಹಾಗೂ ಮಾಸ್ಕ್ ಧರಿಸುವುದು ಹಾಗೂ ಮದ್ಯ ಖರೀದಿಗೆ ಬರುವ ಗ್ರಾಹಕರು ಮಾಸ್ಕ್ಗಳನ್ನು ಹಾಕಿಕೊಳ್ಳುವುದನ್ನು ಕಡ್ಡಾಯಪಡಿಸಿಕೊಂಡು ಸನ್ನದು ಸ್ಥಳದಲ್ಲಿ ಸ್ಯಾನಿಟೈಸರ್ಗಳನ್ನು ಬಳಸುವುದು. ಕೇವಲ Sಣಚಿಟಿಜ ಚಿಟoಟಿe ಸಿಎಲ್-೨, ಸಿಏಲ್-೪, ಸಿಎಲ್-೬ಎ, ಸಿಎಲ್-೭, ಸಿಎಲ್-೭ಎ, ಸಿಎಲ್-೭, ಸಿಎಲ್-೮, ಸಿಎಲ್-೮ಎ, ಸಿಎಲ್-೮ಬಿ, ಸಿಎಲ್-೯, ಸಿಎಲ್-೧೧ ಸಿ, ಬಾಟಲ್ ಬೀರ್, ವೈನ್ ಬೋಟಿಕ್ ಮೈಕ್ರೋಬ್ರವರಿ ಮತ್ತು ವೈನ್ ಟಾವರಿನ್ ಸನ್ನದುಗಳಿಗೆ ಮಾತ್ರವೇ ಅನುಮತಿಸಲಾಗಿದ್ದು, ಮಾಲ್ಗಳು ಹಾಗೂ ಸೂಪರ್ ಮಾರ್ಕೆಟ್ಗಳಲ್ಲಿ ಸದರಿ ಸನ್ನದುಗಳು ಇದ್ದಲ್ಲಿ ಈ ಅನುಮತಿ ಅನ್ವಯವಾಗುವುದಿಲ್ಲ. (೧) ಮೇಲೆ ತಿಳಿಸಲಾದ ಷರತ್ತುಗಳೊಂದಿಗೆ ಕರ್ನಾಟಕ ಅಬಕಾರಿ ಕಾಯ್ದೆ ಹಾಗೂ ಅನ್ವಯಿಸುವ ತತ್ಸಂಬAಧ ನಿಯಮಗಳನ್ನೂ ಕೂಡ ಪಾಲಿಸುವುದು. ಈ ಆದೇಶವನ್ನು ಅಬಕಾರಿ ಉಪ ಆಯುಕ್ತರುಗಳು ಪರಿಪೂರ್ಣವಾಗಿ ಜಾರಿ ಮಾಡುವುದು. ಆದೇಶ ಉಲ್ಲಂಘಿಸುವ ಸನ್ನದುಗಳನ್ನು ಅಮಾನತ್ತು/ರದ್ದುಪಡಿಸಲು ಕ್ರಮ ಜರುಗಿಸುವುದು.
ಮೇಲೆ ತಿಳಿಸಿರುವ ಕ್ರ.ಸಂ. ೦೧ ರಿಂದ ೧೧ ರವರೆಗಿನ ಅಂಶಗಳ ಸಹಿತ, ಉಲ್ಲೇಖಿತ ಸರ್ಕಾರದ ಆದೇಶದಲ್ಲಿ ತಿಳಿಸಿರುವ ಎಲ್ಲಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.