*ವೀರಾಜಪೇಟೆ, ಏ. ೨೦: ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಲು ಕಾರ್ಮಿಕ ಸಚಿವರಿಗೆ ಸಿಐಟಿಯು ಸಂಘಟನೆ ಮನವಿ ಸಲ್ಲಿಸಿತು.

ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು ನೇತೃತ್ವದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿ ಜಯಣ್ಣನವರ ಮೂಲಕ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಈ ಹಿಂದೆ ಕೋವಿಡ್ ಸಂಕಷ್ಟದಲ್ಲಿ ಕಾರ್ಮಿಕ ಸಚಿವರು ತಮ್ಮ ವಿವಿಧ ಇಲಾಖೆಗಳ ಮೂಲಕ ಕಾರ್ಮಿಕರ ಸಂಘಟನೆ ಮನವಿಗೆ ಸ್ಪಂದಿಸಿ ಹಿಂದೆ ಸಹಾಯಧನ ನೀಡಲಾಗಿದೆ. ನಂತರದ ದಿನದಲ್ಲಿ ಸಹ ಉತ್ತಮ ಸ್ಪಂದನ ಸಚಿವರಿಂದ ದೊರೆತಿದೆ. ಆದರೆ, ಹಲವಾರು ಬೇಡಿಕೆ ಬಾಕಿ ಉಳಿದಿವೆ.ವಿವಿಧ ಇಲಾಖೆಗಳ ಮೂಲಕ ಕಾರ್ಮಿಕರ ಸಂಘಟನೆ ಮನವಿಗೆ ಸ್ಪಂದಿಸಿ ಹಿಂದೆ ಸಹಾಯಧನ ನೀಡಲಾಗಿದೆ. ನಂತರದ ದಿನದಲ್ಲಿ ಸಹ ಉತ್ತಮ ಸ್ಪಂದನ ಸಚಿವರಿಂದ ದೊರೆತಿದೆ. ಆದರೆ, ಹಲವಾರು ಬೇಡಿಕೆ ಬಾಕಿ ಉಳಿದಿವೆ.

ತಲಾ ರೂ. ೫೦ ಸಾವಿರದಂತೆ ಅವರ ಖಾತೆಗೆ ಬಾಕಿ ಹಣ ಪಾವತಿಸಬೇಕು. ಸೇವಾ ಸಿಂಧು ಸರ್ವರ್ ಸಮಸ್ಯೆ ಎದರಿಸುತ್ತಿದ್ದು, ಸ್ವತಂತ್ರವಾದ ತತ್ರಾಂಶ ಅಳವಡಿಸ ಬೇಕು. ಕಟ್ಟಡ ಕಾರ್ಮಿಕರ ಈಗಿರುವ ಪಿಂಚಣಿಯನ್ನು ಕನಿಷ್ಟ ಮೂರು ಸಾವಿರಕ್ಕೆ ಹಾಗೂ ಕುಟುಂಬ ಪಿಂಚಣಿಯನ್ನು ರೂ. ಎರಡು ಸಾವಿರಕ್ಕೆ ಹೆಚ್ಚಿಸಬೇಕು. ಮರಣ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಇರುವ ಆರು ತಿಂಗಳ ಮಿತಿಯನ್ನು ಕನಿಷ್ಟ ಒಂದು ವರ್ಷಕ್ಕೆ ಹೆಚ್ಚಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆಗೆ ಆಗ್ರಹಿಸಿದರು.