ಬೆಂಗಳೂರು, ಏ. ೨೦: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ೧ ರಿಂದ ೯ ತರಗತಿಯ ವಿದ್ಯಾರ್ಥಿಗಳಿಗೆ ಈ ವರ್ಷ ವಾರ್ಷಿಕ ಪರೀಕ್ಷೆ ನಡೆಸದಿರಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
೧ ರಿಂದ ೯ನೇ ತರಗತಿಯ ಮಕ್ಕಳನ್ನು ಅವರ ನಿರಂತರ ಮತ್ತು ಸಮಗ್ರ ಮೌಲ್ಯಮಾಪನ ಆಧಾರದ ಮೇಲೆ ಮುಂದಿನ ತರಗತಿಗಳಿಗೆ ಪಾಸ್ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ. ಶಾಲೆಗಳು ತಮ್ಮ ಫಲಿತಾಂಶ ಪ್ರಕ್ರಿಯೆಯನ್ನು ತಾ. ೩೦ ರೊಳಗೆ ಪೂರ್ಣಗೊಳಿಸಲು ಅವಕಾಶ ನೀಡಲಾಗಿದೆ. ಮೇ ೧ ರಿಂದ ಬೇಸಿಗೆ ರಜೆ ಪ್ರಾರಂಭವಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಮಕ್ಕಳ ಕಲಿಕೆಯ ಸಾಮರ್ಥ್ಯವನ್ನು ನಿರ್ಣಯಿಸಲು ಮಾತ್ರ ಮೌಲ್ಯಮಾಪನ ಮತ್ತು ಫಲಿತಾಂಶ ಒಂದು ಸಾಧನವಾಗಿರಬೇಕು ಎಂದು ಸಾರ್ವಜನಿಕ ಶಿಕ್ಷಣದ ಆಯುಕ್ತ ಅನ್ಬು ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್ ೨೧ ರಿಂದ ಜುಲೈ ೫ ರವರೆಗೆ ವೇಳಾಪಟ್ಟಿಯ ಪ್ರಕಾರ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಶಿಕ್ಷಣ ಇಲಾಖೆ ಸುತ್ತೋಲೆ ತಿಳಿಸಿದೆ. ಜುಲೈ ೧೫ ರಿಂದ ೨೦೨೧-೨೨ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. ೧ ರಿಂದ ೮ ನೇ ತರಗತಿಯ ಮಕ್ಕಳಿಗೆ (೭ ಮತ್ತು ೮ನೇ ತರಗತಿ ಹೊಂದಿರುವ ಪ್ರಾಥಮಿಕ ಶಾಲೆಗಳಿಗೆ) ಮೇ ೧ ರಿಂದ ಜೂನ್ ೧೪ ರವರೆಗೆ ಬೇಸಿಗೆ ರಜೆ ಇರುತ್ತದೆ. ಅವರ ಮುಂದಿನ ಶೈಕ್ಷಣಿಕ ವರ್ಷ ಜೂನ್ ೧೫ ರಿಂದ ಪ್ರಾರಂಭವಾಗಲಿದೆ. ೮ ಮತ್ತು ೯ನೇ ತರಗತಿಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಮೇ ೧ ರಿಂದ ಜುಲೈ ೧೫ ರವರೆಗೆ ಬೇಸಿಗೆ ರಜೆ ಇರುತ್ತದೆ. ಪ್ರೌಢಶಾಲಾ ಶಿಕ್ಷಕರಿಗೆ ಜೂನ್ ೧೫ ರಿಂದ ಜುಲೈ ೧೪ ರವರೆಗೆ ಬೇಸಿಗೆ ರಜೆ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಯುಜಿಸಿ - ಎನ್ಇಟಿ ಪರೀಕ್ಷೆ ಮುಂದೂಡಿಕೆ
ಕೋವಿಡ್-೧೯ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮೇ ೨ ರಿಂದ ೧೭ಕ್ಕೆ ನಡೆಯಬೇಕಿದ್ದ
(ಮೊದಲ ಪುಟದಿಂದ) ಯುಜಿಸಿ- ರಾಷ್ಟಿçÃಯ ಅರ್ಹತಾ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್ ಮಂಗಳವಾರ ಪ್ರಕಟಿಸಿದ್ದಾರೆ.
ಪರಿಷ್ಕೃತ ಪರೀಕ್ಷಾ ದಿನಾಂಕವನ್ನು ತದನಂತರ ಪ್ರಕಟಿಸಲಾಗುವುದು, ಪರೀಕ್ಷೆಗಿಂತ ಕನಿಷ್ಟ ೧೫ ದಿನ ಮುಂಚಿತವಾಗಿ ವಿಷಯ ತಿಳಿಸಲಾಗುವುದು ಎಂದು ರಾಷ್ಟಿçÃಯ ಪರೀಕ್ಷಾ ಏಜೆನ್ಸಿ ಆದೇಶದಲ್ಲಿ ತಿಳಿಸಿದೆ. ಅಭ್ಯರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಯುಜಿಸಿ- ನೆಟ್ ಪರೀಕ್ಷೆಯನ್ನು ಮುಂದೂಡುವAತೆ ರಾಷ್ಟಿçÃಯ ಪರೀಕ್ಷಾ ಏಜೆನ್ಸಿಗೆ ಸಲಹೆ ನೀಡಿದ್ದಾಗಿ ನಿಶಾಂಕ್ ಟ್ವೀಟ್ ಮಾಡಿದ್ದಾರೆ.
ಪ್ರಸ್ತುತದಲ್ಲಿನ ಕೋವಿಡ್-೧೯ ಸಾಂಕ್ರಾಮಿಕ ಪರಿಸ್ಥಿತಿ ಹಾಗೂ ಅಭ್ಯರ್ಥಿಗಳ ಆರೋಗ್ಯ, ಸುರಕ್ಷತೆಯನ್ನು ನೋಡಿಕೊಂಡು, ಯುಜಿಸಿ-ನೆಟ್ ಪರೀಕ್ಷೆಯನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ರಾಷ್ಟಿçÃಯ ಪರೀಕ್ಷಾ ಏಜೆನ್ಸಿ ಆದೇಶದಲ್ಲಿ ತಿಳಿಸಿದೆ.೧ ರಿಂದ ೯ನೇ ತರಗತಿ ಪರೀಕ್ಷೆ ರದ್ದು
ನಿಗದಿಯಂತೆ ಎಸ್ಎಸ್ಎಲ್ಸಿ ಪರೀಕ್ಷೆ