ಗೋಣಿಕೊಪ್ಪಲು, ಏ. ೧೯: ಕಾಡಿಗೆ ಮೇಯಲು ಬಿಟ್ಟಿದ್ದ ಹಸುಗಳು ಸಮೀಪದ ತೋಟಕ್ಕೆ ತೆರಳಿದ ವೇಳೆ ಆಗಂತುಕರು ಹಸುಗಳ ಮೇಲೆ ಗುಂಡು ಹಾರಿಸಿ ಕತ್ತಿನ ಭಾಗವನ್ನು ಕತ್ತರಿಸಿದ ಅಮಾನವೀಯ ಘಟನೆ ದೇವರಪುರ ಸಮೀಪದ ಕಾಯಂ ಬೆಟ್ಟ ಹಸುಗಳ ಮೇಲೆ ಗುಂಡು ಹಾರಿಸಿ ಕತ್ತಿನ ಭಾಗವನ್ನು ಕತ್ತರಿಸಿದ ಅಮಾನವೀಯ ಘಟನೆ ದೇವರಪುರ ಸಮೀಪದ ಕಾಯಂ ಬೆಟ್ಟ ಈ ಬಗ್ಗೆ ಹಸುವಿನ ಮಾಲೀಕರು ಗೋಣಿಕೊಪ್ಪ ಪೋಲಿಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಎಸ್.ಐ. ಸುಬ್ಬಯ್ಯ ಹಾಗೂ ತಂಡ ಭೇಟಿ ನೀಡಿದ್ದು ಮಹಜರು ನಡೆಸಿದ್ದಾರೆ.

ಆಗಂತುಕರು ಹಸುವಿನ ಮೇಲೆ ಗುಂಡು ಹಾರಿಸಿರುವುದಲ್ಲದೆ ಅವುಗಳನ್ನು ಮಾಂಸ ಮಾಡುವ ಉದ್ದೇಶದಿಂದ ಒಂದು ಹಸುವಿನ ಕತ್ತಿನ ಭಾಗವನ್ನು ಕತ್ತರಿಸಿದ್ದಾರೆ. ಅಲ್ಲದೆ ಕೆಲ ದಿನಗಳಿಂದ ದೇವರಪುರ, ತಿತಿಮತಿ ಭಾಗದಲ್ಲಿ ಹಸು ಕಳವು ಹೆಚ್ಚಾಗಿದೆ.

- ಹೆಚ್.ಕೆ. ಜಗದೀಶ್ / ಎನ್.ಎನ್. ದಿನೇಶ್