ಕೂಡಿಗೆ, ಏ. ೧೯: ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ವರ್ಷಂಪ್ರತಿಯAತೆ ಸಂಪ್ರದಾಯಿಕವಾಗಿ ಯುಗಾದಿ ಹಬ್ಬದ ದಿನದಂದು ರಥದ ಸಿದ್ಧತೆಗೆ ಸಮಿತಿಯವರು ಚಾಲನೆ ನೀಡಿದರು.

ಯುಗಾದಿ ಹಬ್ಬ ಕಳೆದ ಎಂಟು ದಿನಗಳ ನಂತರ ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ರಥೋತ್ಸವ ನಡೆಯಲಿದೆ. ಕೊರೊನಾ ಹಿನ್ನೆಲೆ ರಥೋತ್ಸವವನ್ನು ಸರಳವಾಗಿ ಆಚರಿಸಲು ಸಮಿತಿ ತೀರ್ಮಾನಿಸಿದೆ.

ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎಸ್. ಸುರೇಶ್ ಕಾರ್ಯದರ್ಶಿ ವೆಂಕಟಾಚಲ ಮಾಜಿ ಅಧ್ಯಕ್ಷ ನಂಜುAಡ ಸ್ವಾಮಿ ಸೇರಿದಂತೆ ಸಮಿತಿಯ ನಿರ್ದೇಶಕರು ಮತ್ತು ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.