ಚೆಯ್ಯಂಡಾಣೆ, ಏ. ೧೯: ಕಡಿಯತ್ತ್ನಾಡ್ ಚೇಲಾವರ ಪೊನ್ನಲಾ ಶಾಸ್ತಾವು ಬಯತೂರ್ ದೇವರ ವಾರ್ಷಿಕ ಉತ್ಸವವು ಶ್ರದ್ಧಾ ಭಕ್ತಿಯಿಂದ ನಡೆಯಿತು.

ತಾ. ೧೪ ರಂದು ಬೆಳಿಗ್ಗೆ ೯ ಗಂಟೆಗೆ ದೇವ ತಕ್ಕರಾದ ಪಡಿಞರಮ್ಮಂಡ ಕುಟುಂಬದಿAದ ದೇವರ ಬಂಡಾರವನ್ನು ತಂದು ಎತ್ತು ಪೋರಾಟದೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಯಿತು.

ವಿವಿಧ ಸಂಪ್ರಾದಾಯಿಕ, ಧಾಮಿಕ ವಿಧಿವಿಧಾನ ನಡೆದು, ಬೊವೈರಿಯಂಡ, ಪಾಲಂದಿರ, ಅಪ್ಪನೆರವಂಡ ಹಾಗೂ ಕೊಡೀರ ಕುಟುಂಬಸ್ಥರುಗಳು ಎತ್ತು ಪೋರಾಟದೊಂದಿಗೆ ಆಗಮಿಸಿದರು. ೯ ಗಂಟೆಗೆ ಕಲಶ ಪೂಜೆ ನಂತರ ಗ್ರಾಮದ ೩೦ ಕುಲದ ಒಂದೊAದು ತೆಂಗಿನಕಾಯಿಯನ್ನು ಪಡೆದು ನಿರ್ದಿಷ್ಟ ಜಾಗದಲ್ಲಿ ಪಡಿಞರಮ್ಮಂಡ ಪವನ್ ತೆಂಗಿನಕಾಯಿ ಹೊಡೆದರು. ಇದೇ ಸಂದರ್ಭ ಕಣಿ ಪೂಜೆ ನಡೆಸಲಾಯಿತು. ನಂತರ ಮಹಾಸಭೆಯನ್ನು ನಡೆಸಿ ದೇವಸ್ಥಾನದ ಮುಂದಿನ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.