ಮಡಿಕೇರಿ, ಏ. ೧೯: ಭಾರತ ಸರ್ಕಾರವು ಹೊಸ ಕೇಂದ್ರ ಪುರಸ್ಕೃತ ಕೃಷಿ ಮೂಲಭೂತ ಸೌಕರ್ಯ ನಿಧಿಯಡಿಯಲ್ಲಿ ಹಣಕಾಸು ಸೌಲಭ್ಯಗಳು ಎಂಬ ಯೋಜನೆಯನ್ನು ಪ್ರಾರಂಭಿಸಿರುತ್ತದೆ.

ಈ ಯೋಜನೆಯಡಿ ಫಲಾನುಭವಿಗಳಿಗೆ ಕೊಯ್ಲೋತ್ತರ ಮೂಲಭೂತ ಸೌಕರ್ಯ ಮತ್ತು ಸಾಮೂಹಿಕ ಕೃಷಿ ಆಸ್ತಿಗಳನ್ನು ಸೃಷ್ಟಿಸಲು ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲದ ಮೇಲಿನ ಬಡ್ಡಿಯ ಭಾಗಕ್ಕೆ ಸಹಾಯಧನವನ್ನು ಒದಗಿಸುವುದು, ಹಣಕಾಸು ಸಂಸ್ಥೆಗಳಿAದ ಪಡೆಯುವ ಸಾಲದ ಶೇ. ೯ರ ಬಡ್ಡಿಯ ಭಾಗಕ್ಕೆ ಶೇ. ೩ರ ಬಡ್ಡಿ ಸಹಾಯಧನವನ್ನು ನೀಡಲಾಗುವುದು. ನೀಡಲಾಗುವ ಬಡ್ಡಿ ಸಹಾಯಧನದ ಗರಿಷ್ಠ ಮೊತ್ತ ರೂ.೨ ಕೋಟಿಗಳಾಗಿದೆ. ಸುಧಾರಿತ ಮಾರುಕಟ್ಟೆ ಸೌಕರ್ಯವನ್ನು ಸೃಷ್ಟಿಸಿ ರೈತರು ಅವರ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಅಂಶಗಳು. ಸ್ವಸಹಾಯ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು, ಕೃಷಿ ನವೋದ್ಯಮಿಗಳು, ಜಂಟಿ ಬಾಧ್ಯತಾ ಗುಂಪುಗಳು, ಮಾರುಕಟ್ಟೆ ಸಹಕಾರಿ ಸಂಘಗಳು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಈ ಯೋಜನೆಯಡಿ ಪ್ರಯೋಜನ ಪಡೆದುಕೊಳ್ಳಬಹುದು. ಗೋದಾಮುಗಳು, ಸೈಲೋಗಳು, ಪ್ಯಾಕ್ ಹೌಸ್‌ಗಳು, ಜೋಡಣಾ ಘಟಕಗಳು, ವಿಂಗಡನೆ ಮತ್ತು ಶ್ರೇಣಿಕರಣ ಘಟಕಗಳು, ಶಿಥಿಲ ಗೃಹಗಳು, ಸಂಗ್ರಹಣಾ ಕೇಂದ್ರಗಳು, ಸಾಮೂಹಿಕ ಅಣಬೆ ಉತ್ಪಾದನ ಚಟುವಟಿಕೆಗಳು, ಸಾವಯವ ಕೃಷಿ ಪರಿಕರಗಳ ಉತ್ಪಾದನ ಘಟಕಗಳು ಮತ್ತು ಜೈವಿಕ ಪ್ರಚೋದಕ ಘಟಕಗಳು, ಪ್ರಾಥಮಿಕ ಸಂಸ್ಕರಣಾ ಘಟಕಗಳು ಮತ್ತು ಸಾಕಾಣಿಕ ಸೌಲಭ್ಯಗಳನ್ನು ಪಡೆಯಬಹುದು.

ಅರ್ಜಿಸಲ್ಲಿಸುವ ವಿಧಾನ: ಫಲಾನುಭವಿಯು ತಮ್ಮ ಪ್ರಸ್ತಾವನೆಗೆ ಸಾಲ ಪಡೆಯುವ ಸಂಬAಧಿತ ಹಣಕಾಸು ಸಂಸ್ಥೆಯೊAದಿಗೆ ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆಯಡಿ ಸಹಾಯಧನ ಪಡೆಯಲು ನೋಂದಾಯಿಸಿಕೊಳ್ಳುವುದು. ಫಲಾನುಭವಿ ಅರ್ಜಿದಾರರು ಅಥವಾ ಸಾಲ ವಿತರಿಸುವ ಹಣಕಾಸು ಸಂಸ್ಥೆಯು ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆಯ ಆನ್‌ಲೈನ್ ಪೋರ್ಟಲ್ ತಿತಿತಿ.ಚಿgಡಿiiಟಿಜಿಡಿಚಿ.ಜಚಿಛಿ.gov.iಟಿ ನಲ್ಲಿ ನೋಂದಣಿ ಮಾಡಿಕೊಳ್ಳುವುದು. ಸಂಬAಧಿತ ಸಾಲ ವಿತರಣಾ ಸಂಸ್ಥೆಗಳು ಅರ್ಹ ಪ್ರಸ್ತಾವನೆಗಳ ಪರಿಶೀಲನೆ ಕೈಗೊಂಡು ಸಾಲ ಮಂಜೂರಾತಿ ನೀಡಿ ಸಾಲ ವಿತರಿಸುವುದು. ಸಾಲ ವಿತರಣೆ ನಂತರ ಬಡ್ಡಿ ಸಹಾಯಧನ ಹಾಗೂ ಸಾಲಕ್ಕೆ ಖಾತರಿಯನ್ನು ಕೇಂದ್ರ ಸರ್ಕಾರವು ಸಂಬAಧಿಸಿದ ಸಾಲ ವಿತರಣಾ ಸಂಸ್ಥೆಗಳಿಗೆ ಒದಗಿಸುತ್ತದೆ. ಈ ಅಂಶಗಳ ಹಿನ್ನೆಲೆಯಲ್ಲಿ ಸದರಿ ಯೋಜನೆಯ ಸದುಪಯೋಗವನ್ನು ಫಲಾನುಭವಿಗಳು ಪಡೆದುಕೊಳ್ಳುವಂತೆ ಮಡಿಕೇರಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.