ಶ್ರೀಮಂಗಲ, ಏ. ೧೯: ಪೊನ್ನಂಪೇಟೆ ತಾಲೂಕು ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷö್ಮಣ ತೀರ್ಥ ನದಿಯಲ್ಲಿ ಅಕ್ರಮವಾಗಿ ಟ್ರಾಕ್ಟರ್ ಮೂಲಕ ಮರಳು ತೆಗೆಯುತ್ತಿದ್ದ ಸಂದರ್ಭ ಗ್ರಾಮಸ್ಥರು ಮರಳು ತುಂಬಿದ ಟ್ರಾö್ಯಕ್ಟರ್ ಸಹಿತ ಚಾಲಕನನ್ನು ಹಿಡಿದು ಕುಟ್ಟ ಪೊಲೀಸರಿಗೆ ಒಪ್ಪಿಸಿದ್ದಾರೆ.

ತಾ. ೧೯ರ ಸಂಜೆ ಟ್ರಾö್ಯಕ್ಟರ್ (ಕೆ.ಎ.೧೨ ಟಿ. ೩೨೮೩) ಮೂಲಕ ಮರಳು ತುಂಬಿಸಿ ಸಾಗಿಸುತ್ತಿದ್ದ ವೇಳೆ ಗ್ರಾಮಸ್ಥರು ಅಡ್ಡಗಟ್ಟಿ, ಕುಟ್ಟ ವೃತ್ತ ನಿರೀಕ್ಷಕ ಪರಶಿವಮೂರ್ತಿ ಅವರಿಗೆ ಮಾಹಿತಿ ನೀಡಿದ್ದಾರೆ. ಇಲ್ಲಿ ಅಕ್ರಮವಾಗಿ ಹಲವು ಸಮಯದಿಂದ ಮರಳು ತೆಗೆಯುತ್ತಿದ್ದು ಪೊಲೀಸರಿಗೆ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದರೂ ಕ್ರಮಕೈಗೊಳ್ಳದ ಹಿನ್ನೆಲೆ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ ಅಕ್ರಮ ಮರಳು ಸಹಿತ, ಟ್ರಾö್ಯಕ್ಟರ್ ಚಾಲಕ ದರ್ಶನ್ ಅವರನ್ನು ಕುಟ್ಟ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟ್ರಾö್ಯಕ್ಟರ್ ಕೆ. ಬಾಡಗ ಗ್ರಾಮದ ಪಿ. ನವೀನ್ ನಾಚಪ್ಪ ಅವರಿಗೆ ಸೇರಿದ್ದು, ಈ ಟ್ರಾö್ಯಕ್ಟರ್‌ಗೆ ಹಲವು ವರ್ಷದಿಂದ ದಾಖಲೆಗಳು ನವೀಕರಣಗೊಂಡಿಲ್ಲದೆ ಇರುವುದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.