ಚೆಟ್ಟಳ್ಳಿ, ಏ. ೧೯: ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಜಿಲ್ಲೆಯ ಪ್ರಖ್ಯಾತ ಫುಟ್ಬಾಲ್ ಕ್ಲಬ್ ಆದ ಮಿಲನ್ಸ್ ಫುಟ್ಬಾಲ್ ಕ್ಲಬ್ ಸಹಯೋಗದಲ್ಲಿ ಅಮ್ಮತ್ತಿಯ ಪ್ರೌಢ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಜಿಲ್ಲಾಮಟ್ಟದ ಫುಟ್ಬಾಲ್ ಲೀಗ್ ಪಂದ್ಯದಲ್ಲಿ ಆತಿಥೇಯ ಮಿಲನ್ಸ್ ಎಫ್.ಸಿ. ಸೇರಿ ಎಂಟು ತಂಡಗಳು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿದೆ.

ಲೀಗ್ ಪಂದ್ಯಾವಳಿಯಲ್ಲಿ ಗ್ರೂಪ್ ‘ಎ’ಯಿಂದ ವೈಶ್ಣವಿ ಮರಗೋಡು ಹಾಗೂ ರೋಜಾರಿಯನ್ಸ್ ಗೋಣಿಕೊಪ್ಪ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಗ್ರೂಪ್ ‘ಬಿ’ಯಿಂದ ಶೈನಿಂಗ್ ಬರ್ಡ್ ಹಾಗೂ ಎನ್.ವೈ.ಸಿ, ಗ್ರೂಪ್ ‘ಸಿ’ಯಿಂದ ಸಹಾರ ಸಿ.ವೈ.ಸಿ. ಒಂಟಿಯAಗಡಿ, ಹಾಗೂ ಅಮಿಟಿ ಯುನೈಟೆಡ್ ಗದ್ದೆಹಳ್ಳ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಗ್ರೂಪ್ ‘ಡಿ’ಯಿಂದ ಕುಶಾಲನಗರ ಎಫ್.ಸಿ ಕುಶಾಲನಗರ ಹಾಗೂ ಅತಿಥೇಯ ತಂಡವಾದ ಮಿಲನ್ಸ್ ಎಫ್.ಸಿ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ತಾ. ೨೩ ರಂದು ಬೆಳಗ್ಗೆ ೧೦.೩೦ಕ್ಕೆ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿವೆ.

ಪಂದ್ಯಾವಳಿಯ ತೀರ್ಪುಗಾರ ರಾಗಿ ಇಬ್ರಾಹಿಂ, ಧೀರಜ್, ಇಸ್ಮಾಯಿಲ್ ಕಂಡಕರೆ, ದರ್ಶನ್, ಸಂತೋಷ್, ಜೆ.ಕೆ., ಹಾಗೂ ಅಶ್ವನ್ ಕಾರ್ಯನಿರ್ವಹಿಸಿದರು.

ಈ ಸಂದರ್ಭ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಮೋಹನ್ ಅಯ್ಯಪ್ಪ, ರಾಜ್ಯ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷ ಜಗದೀಶ್, ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ತೀರ್ಪುಗಾರರ ಸಂಘದ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷೆ ದೇಚಮ್ಮ, ಖಜಾಂಚಿ ದೀಪು, ಸದಸ್ಯರಾದ ರಕ್ಷಿತ್, ಜಗದೀಶ್, ಲೀಗ್ ಪಂದ್ಯಾವಳಿಯ ಉಸ್ತುವಾರಿ ಲಿಜೇಶ್ ಅಮ್ಮತ್ತಿ, ಮಿಲನ್ಸ್ ಫುಟ್ಬಾಲ್ ಕ್ಲಬ್ ಅಧ್ಯಕ್ಷ ಸಿಜು, ವ್ಯವಸ್ಥಾಪಕರಾದ ಮುಸ್ತಫಾ, ಜಾನ್ಸನ್ ಇದ್ದರು.

-ಕೆ.ಎಂ. ಇಸ್ಮಾಯಿಲ್ ಕಂಡಕರೆ